ಎಸ್ಐಟಿ ನನ್ನನ್ನು ಬಂಧಿಸಿಲ್ಲ; ನೋಟಿಸ್‌ಗೆ ಉತ್ತರಿಸಲು ಹೋಗಿದ್ದೆ: ಎಚ್‌ಡಿಕೆ

ಅಕ್ರಮ ಗಣಿಗಾರಿಕೆ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ(ಎಸ್ಐಟಿ) ತಮ್ಮನ್ನು ಬಂಧಿಸಿದೆ ಎಂಬ ಮಾಧ್ಯಮಗಳ ವರದಿಯನ್ನು ತಳ್ಳಿಹಾಕಿರುವ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಎಚ್ ಡಿ.ಕುಮಾರಸ್ವಾಮಿ ಅವರು,...
ಎಚ್ ಡಿ.ಕುಮಾರಸ್ವಾಮಿ
ಎಚ್ ಡಿ.ಕುಮಾರಸ್ವಾಮಿ

ಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ(ಎಸ್ಐಟಿ) ತಮ್ಮನ್ನು ಬಂಧಿಸಿದೆ ಎಂಬ ಮಾಧ್ಯಮಗಳ ವರದಿಯನ್ನು ತಳ್ಳಿಹಾಕಿರುವ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಎಚ್ ಡಿ.ಕುಮಾರಸ್ವಾಮಿ ಅವರು, ಎಸ್ಐಟಿ ನನ್ನನ್ನು ಬಂಧಿಸಿರಲಿಲ್ಲ, ನೋಟಿಸ್ ಗೆ ಉತ್ತರಿಸಲು ನಾನೇ ಹೋಗಿದ್ದೆ ಎಂದು ಹೇಳಿದ್ದಾರೆ.

'ನನ್ನುನ್ನು ಬಂಧಿಸಲಾಗಿದೆ ಎಂಬ ಸುದ್ದಿ ಓದಿ ಗಾಬರಿಯಾಯ್ತು. ಆದರೆ ಎಸ್ಐಟಿ ಪೊಲೀಸರು ನನ್ನ ಬಂಧಿಸಿಲ್ಲ ಎಂದಿರುವ ಕುಮಾರಸ್ವಾಮಿ, ನನ್ನನ್ನು ಕೆಟ್ಟ ಕೂಪಕ್ಕೆ ತಳ್ಳಲು ಯತ್ನಿಸಲಾಗ್ತಿದೆ' ಎಂದು ಆರೋಪಿಸಿದ್ದಾರೆ.

ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆ.5ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟಿದ್ದರು. ಹಾಗಾಗಿ ನೋಟಿಸ್ ಗೆ ಉತ್ತರಿಸಲೆಂದೇ ನಾನು ಎಸ್ಐಟಿ ಕಚೇರಿಗೆ ತೆರಳಿದ್ದೆ. ಆದರೆ ಮಾಧ್ಯಮವೊಂದರಲ್ಲಿ ನನ್ನ ಬಂಧಿಸಿದ್ದಾರೆ ಎಂದು ಸುದ್ದಿ ಪ್ರಕಟವಾಗಿದ್ದು ನೋಡಿ ಗಾಬರಿಯಾಯ್ತು. ಬಿಬಿಎಂಪಿ ಚುನಾವಣೆ ಹಿನ್ನೆಲೆ ಸುಳ್ಳು ವದಂತಿ ಹಬ್ಬಿಸುತ್ತಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಎಸ್ಐಟಿ ಇಬ್ಬರು ಅಧಿಕಾರಿಗಳೂ ಜೆಪಿ ನಗರದ ನಿವಾಸಕ್ಕೆ ಬಂದಿದ್ದರು. ಈ ಪ್ರಕರಣದಲ್ಲಿ ನನ್ನ ವಿಚಾರಣೆ ಯಾವ ರೀತಿ ನಡೆಸಿದ್ದೀರಿ ಎಂಬ ಬಗ್ಗೆ ಮಾಹಿತಿ ಕೇಳಿದ್ದೆ, ಅಲ್ಲದೇ ನಾನೇ ಎಸ್ಐಟಿ ಐಜಿ ಚರಣ್ ರೆಡ್ಡಿಗೆ ಈ ಬಗ್ಗೆ  ಪತ್ರ ಬರೆದಿದ್ದೇನೆ ಎಂದರು.

ಈ ಸಂಬಂಧ ನಾನು ನಿರೀಕ್ಷಣಾ ಜಾಮೀನು ಸಹ ತೆಗೆದುಕೊಳ್ಳಲು ನಿರಾಕರಿಸಿದ್ದೆ, ಬಂದಿಸಿದ್ರೆ ಬಂಧಿಸಲಿ ಎಂದು ಸುಮ್ಮನಾಗಿದ್ದೆ. ಆದರೆ ನನ್ನ ಕೆಲವು ವಕೀಲ ಸ್ನೇಹಿತರು ಈ ವಿಚಾರದಲ್ಲಿ ಹುಡುಗಾಟ ಬೇಡ ಎಂದಿದ್ದರು. ಬಳಿಕ ಜಾಮೀನು ಪಡೆದುಕೊಂಡಿದ್ದೆ. ಇದೀಗ ಬಿಬಿಎಂಪಿ ಚುನಾವಣೆಯಲ್ಲಿ ಜೆಡಿಎಸ್ ಮುನ್ನುಗ್ಗುತ್ತಿದೆ. ಈ ಹಿನ್ನೆಲೆಯಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com