ಇಸ್ಲಾಮಾಬಾದ್: ಕರಾಚಿ ವಿಮಾನ ನಿಲ್ದಾಣದ ಅಧಿಕಾರಿಗಳು ಭಾರತೀಯ ಪಾಪ್ ಗಾಯಕ ಸುಖ್ಬೀರ್ ಸಿಂಗ್ ಅವರ ಚೀಲದಿಂದ ೨೭೦೦೦ ಡಾಲರ್ ಹಣ ಪತ್ತೆ ಮಾಡಿ ಭಾನುವಾರ ವಶಕ್ಕೆ ತೆಗೆದುಕೊಂಡ ನಂತರ, ಅವರು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ದುಬೈ ಗೆ ಹೊರಟಿದ್ದ ಸಿಂಗ್, ಪಾಕಿಸ್ತಾನ ಕಸ್ಟಮ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಅವರ ಚೀಲದಲ್ಲಿ ಅಪಾರ ಹಣ ಇರುವುದು ತಿಳಿದುಬಂದಿದೆ. ಆಗ ಅಧಿಕಾರಿಗಳು ತನಿಖೆಗಾಗಿ ಅವರನ್ನು ಬಂಧಿಸಿದ್ದಾರೆ.
ಆದರೆ ಅಧಿಕಾರಿಗಳಿಗೆ ಹೇಗೋ ಚಳ್ಳೆಹಣ್ನಿ ತಿನ್ನಿಸಿ ಅಲ್ಲಿಂದ ಆ ಗಾಯಕ ಪರಾರಿಯಾಗಿದ್ದಾರೆ ಎಂದು ಡಾನ್ ಆನ್ಲೈನ್ ವರದಿ ಮಾಡಿದೆ.
Advertisement