ಹರಿದ್ವಾರದಲ್ಲಿ ಪ್ಲಾಸ್ಟಿಕ್ ಬಾಟೆಲ್ ಗಳ ಬಳಕೆ ನಿಷೇಧ

ಉತ್ತರಖಾಂಡದ ಹರಿದ್ವಾರದ ಗಂಗಾ ನದಿಯ ಆಸುಪಾಸು ಮಾಲಿನ್ಯ ತಡೆಯಲು ದ ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್ (ಎನ್ ಜಿ ಟಿ) ಪ್ಲಾಸ್ಟಿಕ್ ಬಾಟೆಲ್ ಗಳ
ಹರಿದ್ವಾರದ ಗಂಗಾ ನದಿ
ಹರಿದ್ವಾರದ ಗಂಗಾ ನದಿ
Updated on

ಹರಿದ್ವಾರ: ಉತ್ತರಖಾಂಡದ ಹರಿದ್ವಾರದ ಗಂಗಾ ನದಿಯ ಆಸುಪಾಸು ಮಾಲಿನ್ಯ ತಡೆಯಲು ದ ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್ (ಎನ್ ಜಿ ಟಿ) ಪ್ಲಾಸ್ಟಿಕ್ ಬಾಟೆಲ್ ಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಮಂಗಳವಾರ ಅಧಿಕೃತ ಹೇಳಿಕೆ ತಿಳಿಸಿದೆ.

ಸಾಮಾನ್ಯವಾಗಿ ಪ್ರವಾಸಿಗರು ಕುಡಿಯುವ ನೀರನ್ನು ಪ್ಲಾಸ್ಟಿಕ್ ಬಾಟೆಲ್ ಗಳಲ್ಲಿ ತಂದು ನದಿಯ ದಡದಲ್ಲಿ ಎಸೆದು ಹೋಗುವುದರಿಂದ ಈ ನಿಷೇಧ ಅವಶ್ಯಕವಾಗಿತ್ತು ಎಂದು ತಿಳಿಸಿದ್ದಾರೆ. ಇವುಗಳು ಅಲ್ಲೇ ಉಳಿದು ತೀವ್ರ ಮಾಲಿನ್ಯಕ್ಕೆ ಎಡೆಮಾಡಿಕೊಡುತ್ತಿದೆ.

ಗಂಗಾ ನದಿಯ ಬಳಿ ಪ್ಲಾಸ್ಟಿಕ್ ಬಾಟೆಲ್ ಗಳನ್ನು ಮಾರುವ ಅಂಗಡಿಗಳಿಗೆ ನಿಷೇಧ ಹೇರುವಂತೆ ರಾಜ್ಯ ಸರ್ಕಾರಕ್ಕೆ ಎನ್ ಜಿ ಟಿ ಸೂಚಿಸಿದೆ.

ಆಗಸ್ಟ್ ೪ ರಂದು ಎನ್ ಜಿ ಟಿ ಪ್ರಾದೇಶಿಕ ಕಮಿಷನರ್ ಅವರನ್ನು ನೇಮಕ ಮಾಡಿ ಈ ನಿಟ್ಟಿನಲ್ಲಿ ಪ್ರಗತಿಯನ್ನು ವರದಿ ಮಾಡುವಂತೆ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com