ಅಕ್ರಮ ಸಂಬಂಧ ಅನೈತಿಕ; ಕ್ರಿಮಿನಲ್ ಅಪರಾಧ ಅಲ್ಲ: ಕೋರ್ಟ್

ಅಕ್ರಮ ಸಂಬಂಧ ವಿಚ್ಚೇಧನಕ್ಕೆ ಹಿನ್ನಲೆ ಒದಗಿಸುತ್ತದೆ ಆದರೆ ಅದು ಅನೈತಿಕ ನಡೆಗಿಂತಲೂ ಮುಂದುವರೆದು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಲು ಸಾಧ್ಯವಿಲ್ಲ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಅಕ್ರಮ ಸಂಬಂಧ ವಿಚ್ಚೇಧನಕ್ಕೆ ಹಿನ್ನಲೆ ಒದಗಿಸುತ್ತದೆ ಆದರೆ ಅದು ಅನೈತಿಕ ನಡೆಗಿಂತಲೂ ಮುಂದುವರೆದು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ದೆಹಲಿ ಕೋರ್ಟ್ ತಿಳಿಸಿದೆ.

ತನ್ನ ಪತಿ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದ ವಿಚಾರಣೆ ಮಾಡಿದ ಕೋರ್ಟ್ ಆರೋಪಿ ಪತಿಯನ್ನು ನಿರಪರಾಧಿ ಎಂದು ಘೋಷಿಸಿದೆ.

"ಇಲ್ಲಿ ಆರೋಪಿ ಅಕ್ರಮ ಸಂಬಂಧ ಹೊಂದಿರುವುದು ತನ್ನ ಪತ್ನಿಗೆ ಮೋಸ ಮಾಡಿರುವುದು ಕಂಡುಬರುತ್ತದೆ. ಇದು ನಂಬಿಕೆ ದ್ರೋಹದ ಪ್ರಶ್ನೆ, ಇದು ಅನೈತಿಕತೆಯನ್ನು ಮೀರಿ ಪೀನಲ್ ಕಾನೂನಿನ ಪ್ರಕಾರ ಕ್ರಿಮಿನಲ್ ಅಪಾರಧಕ್ಕೆ ಒಳಪಡುವುದಿಲ್ಲ.

"ಇದು ಅವರ ಪತ್ನಿ ವಿಚ್ಚೇಧನಕ್ಕೆ ಅರ್ಜಿ ಸಲ್ಲಿಸಲು ಎಡೆ ಮಾಡಿಕೊಡಬಹುದಿತ್ತು ಆದರೆ ಸೆಕ್ಷನ್ ೩೦೬ (ಆತ್ಮಹತ್ಯೆಗೆ ಕಾರಣನಾಗುವುದು) ಅಡಿ ಬರುವುದಿಲ್ಲ" ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಮನೋಜ್ ಜೈನ ತಿಳಿಸಿದ್ದಾರೆ.

ಅಲ್ಲದೆ ಆರೋಪಿಯನ್ನು ನಿರಪರಾಧಿ ಎಂದಿರುವ ಕೋರ್ಟ್ ಅಕ್ರಮ ಸಂಬಂಧದ ಆರೋಪ "ಆಯುಧವನ್ನು ಬಳಸುವುದಕ್ಕೆ ಸಮ ಎಂದು ಸಾಬೀತು ಪಡಿಸುವುದಿಲ್ಲ" ಎಂದು ತಿಳಿಸಿದೆ.

ಮೃತ ಮಹಿಳೆಯ ಪರ ವಾದ ಮಾಡಿದ ವಕೀಲರ ಪ್ರಕಾರ, ಮದುವೆಯಾದ ಒಂದು ವರ್ಷದ ಒಳಗೇ ತನ್ನ ಪತಿ ಮದುವೆಯಾಚೆಗಿನ ಅಕ್ರಮ ಸಂಬಂಧ ಹೊಂದಿದ್ದನ್ನು ತಿಳಿದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಳು. ತನ್ನ ಸಹೋದರಿಗೆ ಆರೋಪಿ ಹೊಡೆಯುತ್ತಿದ್ದ ಎಂದು ಕೂಡ ಮೃತ ಮಹಿಳೆಯ ಸಹೋದರ ದೂರು ನೀಡಿದ್ದ.

ತನ್ನ ಪತ್ನಿಗೆ ಬೇರೆ ಯಾವುದೇ ಮಾರ್ಗ ನೀಡದೆ ಆತ್ಮಹತ್ಯೆ ಮಾಡಿಕೊಳ್ಳಲು ಈ ವ್ಯಕ್ತಿ ಪ್ರಭಾವಿಸಿದ್ದಾನೆ ಎಂದು ತೋರಿಸಲು ಹೆಚ್ಚುವರಿ ಸಾಕ್ಷ್ಯಾಧಾರಗಳ ಅವಶ್ಯಕತೆ ಇದೆ "ಆದರೆ ಅಂತಹ ಸಾಕ್ಷ್ಯಾಧಾರಗಳ ಕೊರತೆ ಇಲ್ಲಿದೆ" ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಅಲ್ಲದೆ "ಆರೋಪಿಸಲಾಗಿರುವಂತೆ ಮದುವೆಯಾಚೆಗಿನ ಅಕ್ರಮ ಸಂಬಂಧ, ಕಾನೂನುಬದ್ಧವಲ್ಲ ಮತ್ತು ಅನೈತಿಕ ಎಂದು ಸಾಬೀತಾದರೂ ಕೂಡ ಈ ಆರೋಪಿ ತನ್ನ ಪತ್ನಿಯ ಆತ್ಮಹತ್ಯೆಗೆ ಕುಮ್ಮತ್ತು ನೀಡಿದ್ದಾನೆ ಎಂದು ಸಾಬೀತುಪಡಿಸಲು ವಕೀಲರು ಸಫಲರಾಗಿಲ್ಲ" ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com