
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಉಧಾಂಪುರದ ಉಗ್ರ ದಾಳಿಯ ವೇಳೆ ಸೆರೆ ಸಿಕ್ಕ ಮೊಹಮ್ಮದ್ ನಾವೇದ್, ಉಗ್ರ ಸಂಘಟನೆಯ ತರಬೇತಿ ಶಿಬಿರವನ್ನು ತೊರೆಯಲು ಯತ್ನಿಸಿದ್ದಕ್ಕೆ ಲಷ್ಕರ್-ಇ-ತೋಯಿಬಾ ಹಾಗೂ ಐಎಸ್‌ಐ ತನ್ನ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿತ್ತು ಎಂದು ಎನ್‌ಐಎ ಅಧಿಕಾರಿಗಳಿಗೆ ನಾವೇದ್ ತಿಳಿಸಿದ್ದಾನೆ.
ಎನ್‌ಐಎ ಅಧಿಕಾರಿಗಳ ಪ್ರಕಾರ, ಉಗ್ರ ಸಂಘಟನೆಯ ನಾಯಕರು ನಾವೇದ್‌ಗೆ ಒಂದು ನಿರ್ಧಿಷ್ಟ ಟಾರ್ಗೆಟ್ ಮತ್ತು ಭಾರಿ ಮೊತ್ತದ ಹಣದ ಭರವಸೆ ನೀಡಿ, ಫೈಸಲಾಬಾದ್‌ಗೆ ಕಳುಹಿಸಿದ್ದರು ಎಂದು ಹೇಳಿಕೊಂಡಿದ್ದಾನೆ.
'ಜಮ್ಮು ಮತ್ತು ಕಾಶ್ನೀರ ದಾಳಿಯ ಹೊರತಾಗಿಯೂ ನಾವೇದ್ ಇತರೆ ಐದು ಅಥವಾ ಆರು ನಿರ್ಧಿಷ್ಟ ದಾಳಿಯ ಟಾರ್ಗೆಟ್ ನೀಡಲಾಗಿತ್ತು. ಇದಕ್ಕಾಗಿ ಆತನಿಗೆ ಭಾರಿ ಮೊತ್ತದ ಹಣ ನೀಡುವ ಭರವಸೆ ನೀಡಿದ್ದರು' ಎಂದು ಉಗ್ರ ತನಿಖೆಯ ವೇಳೆ ಬಾಯಿ ಬಿಟ್ಟಿದ್ದಾನೆ.
ತರಬೇತಿ ನೀಡುತ್ತಿದ್ದ ಉಗ್ರ ಸಂಘಟನೆಯ ನಾಯಕರು ನಿರಂತರವಾಗಿ ನಾವೇದ್‌ಗೆ ಡ್ರಗ್ಸ್ ನೀಡುತ್ತಿದ್ದರಿಂದ, ಆತ ಡ್ರಗ್ಸ್‌ಗೆ ದಾಸನಾಗಿದ್ದ ಎಂದು ಎನ್‌ಐಎ ಅಧಿಕಾರಿಗಳು ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
ಎಲ್‌ಇಟಿ ತರಬೇತಿ ಬಿಟ್ಟು ಬಾ ಅಂತ ನಾವೇದ್ ಪೋಷಕರು ಆತನ ಮೇಲೆ ಒತ್ತಡ ಹೇರಿದ್ದರು. ಈ ವಿಷಯ ತಿಳಿದ ಉಗ್ರ ಸಂಘಟನೆಯ ನಾಯಕರು, 'ಈಗ ಆತನನ್ನು ಮರೆತು ಬಿಡಿ, ನಾವೇದ್‌ಗೆ ನಮ್ಮ ಕೆಲಸದ ಜವಾಬ್ದಾರಿ ನೀಡಲಾಗಿದೆ' ಎಂದು ಎಚ್ಚರಿಸಿದ್ದರು.
ಎಲ್‌ಇಟಿಯಿಂದ ನನ್ನ ಕುಟುಂಬ ಯಾವುದೇ ಹಣ ಪಡೆದಿಲ್ಲ ಎಂದು ಹೇಳಿರುವ ನಾವೇದ್, ಉಗ್ರ ಸಂಘಟನೆಯ ತರಬೇತಿ ಶಿಬಿರಗಳಿಗೆ ಐಎಸ್‌ಐ ಅಧಿಕಾರಿಗಳು ಗುಪ್ತವಾಗಿ ಭೇಟಿ ನೀಡುತ್ತಾರೆ ಎಂದು ಎನ್‌ಐಎ ಅಧಿಕಾರಿಗಳಿಗೆ ತಿಳಿಸಿದ್ದಾನೆ.
Advertisement