
ಬೆಂಗಳೂರು: ಲೋಕಾಯುಕ್ತ ಕಚೇರಿ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಅಧಿಕಾರಿಗಳು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ವಿ.ಭಾಸ್ಕರ್ ಸಹಚರ ರಾಜಶೇಖರ್ ಎಂಬಾತನನ್ನು ಎಸ್‍ಐಟಿ ಅಧಿಕಾರಿಗಳು ಬಂಧಿಸಿ ಬುಧವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಎಸ್‍ಐಟಿ ಅಧಿಕಾರಿಗಳ ಮನವಿಯಂತೆ
ಆರೋಪಿ ರಾಜಶೇಖರ್‍ನನ್ನು ಆ.26ರವರೆಗೆ ವಶಕ್ಕೆ ಒಪ್ಪಿಸಿ ನ್ಯಾ. ವಿ.ಜಿ.ಬೋಪಯ್ಯ ಆದೇಶಿಸಿದರು. ಕೆಪಿಸಿಸಿ ಸದಸ್ಯ ಹಾಗೂ ಉದ್ಯಮಿ ಪಿ.ಎನ್.ಕೃಷ್ಣಮೂರ್ತಿನೀಡಿರುವ ದೂರಿಗೆ (ಕೇಸ್ ನಂ. 60/2015) ಸಂಬಂಧಿಸಿದಂತೆ ರಾಜಶೇಖರ್‍ನನ್ನು ಬಂಧಿಸಲಾಗಿದೆ. ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಈತನನ್ನು ಬಂಧಿಸಲಾಯಿತು. ನಗರಕ್ಕೆ ಕರೆತಂದು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಲಾಗಿದೆ. ಮಂಗಳವಾರ ಸಂಜೆ 4 ಗಂಟೆಗೆ ನ್ಯಾಯಾಲಯಕ್ಕೆ ಕರೆತಂದ ಎಸ್‍ಐಟಿ ಅಧಿಕಾರಿಗಳು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು.ರಾಜಶೇಖರ್ ಬಂಧನದೊಂದಿಗೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ಸಂಖ್ಯೆ ಎಂಟಕ್ಕೇರಿದೆ. ಕೃಷ್ಣಮೂರ್ತಿ ನೀಡಿರುವ ದೂರಿನಲ್ಲಿ ಆರೋಪಿ ರಾಜಶೇಖರ್ ನಾಲ್ಕನೇ ಆರೋಪಿಯಾಗಿದ್ದಾರೆ.
ಅಶ್ವಿನ್ ರಾವ್ ಮೊದಲನೇ ಆರೋಪಿಯಾಗಿದ್ದು, ಭಾಸ್ಕರ್ ಮತ್ತು ಸಾದಿಕ್ ಕ್ರಮವಾಗಿ ಎರಡು ಮತ್ತು ಮೂರನೇ ಆರೋಪಿಯಾಗಿದ್ದಾರೆ. ಪ್ರಕರಣದಲ್ಲಿ ಮತ್ತಷ್ಟು ಮಂದಿ ಬಂಧನವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಪ್ರಕರಣ ಮತ್ತು ಕೃಷ್ಣಮೂರ್ತಿ ನೀಡಿರುವ ದೂರಿಗೆ ಸಂಬಂಧಿಸಿದಂತೆ ಹಲವು ಮಾಹಿತಿಗಳನ್ನು ಆರೋಪಿಯಿಂದ ಪಡೆದುಕೊಳ್ಳಬೇಕಿದೆ. ಅಲ್ಲದೇ, ಹೊರ ರಾಜ್ಯಕ್ಕೂ ಕರೆದುಕೊಂಡು ಹೋಗುವ ಅವಶ್ಯಕತೆ ಇದೆ. ಹೀಗಾಗಿ ಆ.29ರವರೆಗೆ ತಮ್ಮ ವಶಕ್ಕೆ ನೀಡಬೇಕು ಎಂದು ಎಸ್‍ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಮಾಡಿದರು. ಆದರೆ,
ನ್ಯಾಯಾಲಯ ಆ.26ರವರೆಗೆ ವಶಕ್ಕೆ ನೀಡಿತು. ಅಗತ್ಯಬಿದ್ದರೆ ನ್ಯಾಯಾಲಯಕ್ಕೆ ಹಾಜರುಪಡಿಸಿ ಅವಧಿಯನ್ನು ಮತ್ತಷ್ಟು ದಿನ ವಿಸ್ತರಿಸಿಕೊಳ್ಳುವಂತೆ ಸೂಚನೆ ನೀಡಿತು. ಬಂ„ತ ರಾಜಶೇಖರ್, ದೂರುದಾರ ಕೃಷ್ಣಮೂರ್ತಿ ಮತ್ತು ಲೋಕಾಯುಕ್ತ ಪುತ್ರ ಅಶ್ವಿನ್‍ರಾವ್ ಅವರ ನಡುವೆ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ. ಹಣದ ಬೇಡಿಕೆಪ್ರಕರಣದಲ್ಲಿ ಆರೋಪಿಯ ಪಾತ್ರದ ಇರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಮಧ್ಯೆ, ವಶಕ್ಕೆ ಪಡೆದಿರುವ ಸಾದಿಕ್‍ನನ್ನು ಎಸ್‍ಐಟಿ ಪೊಲೀಸರ ತಂಡವೊಂದು ತೀವ್ರ ವಿಚಾರಣೆಗೊಳಪಡಿಸಿದೆ. ಪ್ರಕರಣದಲ್ಲಿ ತನ್ನ ಪಾತ್ರದ ಬಗ್ಗೆ ಎಸ್‍ಐಟಿ ಪೊಲೀಸರಿಗೆ ಮಾಹಿತಿ
ನೀಡಿದ್ದಾನೆ. ಅಲ್ಲದೇ, ಯಾವ್ಯಾವ ಆರೋಪಿಗಳು ಪ್ರಕರಣದಲ್ಲಿಭಾಗಿಯಾಗಿದ್ದಾರೆ ಎನ್ನುವ ಮಾಹಿತಿಯನ್ನು ನೀಡಿದ್ದಾನೆಂದುಮೂಲಗಳಿಂದ ತಿಳಿದು ಬಂದಿದೆ.
Advertisement