
ನವದೆಹಲಿ: ಆಗಸ್ಟ್ ೨೩ ರಂದು ಭಯೋತ್ಪಾದನೆ ಬಗ್ಗೆ ಮಾತುಕತೆ ನಡೆಸಲು ಭಾರತಕ್ಕೆ ಆಗಮಿಸುತ್ತಿರುವ ಸತ್ರಜ್ ಅಜೀಜ್ ಅವರನ್ನು ಭೇಟಿ ಮಾಡಲು ಕಾಶ್ಮೀರಿ ಪ್ರತ್ಯೇಕವಾದಿಗಳಿಗೆ ಪಾಕಿಸ್ತಾನ ರಾಯಭಾರ ಕಚೇರಿ ಆಹ್ವಾನ ನೀಡಿರುವ ಸಂಗತಿಯನ್ನು ತೀವ್ರವಾಗಿ ಪರಿಗಣಿಸಿರುವ ಭಾರತ ಈ ಭೇಟಿ ನಡೆದರೆ ಸರ್ಕಾರ ಸೂಕ್ತ ಉತ್ತರ ನೀಡಲಿದೆ ಎಂದಿದೆ.
ಅಜೀಜ್ ಅವರು ಭಾರತೀಯ ರಕ್ಷಣಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿ ಮಾಡಿ ಭಯೋತ್ಪಾದನೆ ಬಗ್ಗೆ ಚರ್ಚಿಸಲು ಭಾರತಕ್ಕೆ ಬರುತ್ತಿರುವ ಹಿನ್ನಲೆಯಲ್ಲಿ ಪಾಕಿಸ್ತಾನ ರಾಯಭಾರಿ ಕಚೇರಿ ಕಾಶ್ಮೀರಿ ಪ್ರತ್ಯೇಕವಾದಿಗಳನ್ನು ಆಹ್ವಾನಿಸಿದೆ. ಇದರಿಂದ ಭಾರತ ಸರ್ಕಾರ ತೀವ್ರ ಅಸಮಧಾನಗೊಂಡಿದೆ ಎಂದು ಮೂಲಗಳು ತಿಳಿಸಿವೆ.
"ಏನಾಗುತ್ತದೆ ನೋಡೋಣ (ಅವರು ಪ್ರತ್ಯೇಕವಾದಿಗಳನ್ನು ಭೇಟಿ ಮಾಡಿದರೆ), ಸರ್ಕಾರ ಅದಕ್ಕೆ ಸೂಕ್ತ ಉತ್ತರ ನೀಡುತ್ತದೆ" ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಕಾಶ್ಮೀರಿ ಪ್ರತ್ಯೇಕವಾದಿ ಸಯ್ಯದ್ ಅಲಿ ಗಿಲಾನಿಯನ್ನು ಅಜೀಜ್ ಅವರನ್ನು ಭೇಟಿ ಮಾಡಲು ಆಹ್ವಾನಿಸಿದ್ದರೆ, ಮೀರ್ವಾಜ್ ಉಮರ್ ಫರೂಕ್ ನಂತಹ ಇತರ ಪ್ರತ್ಯೇಕವಾದಿ ನಾಯಕರನ್ನು ಪಾಕಿಸ್ತಾನ ರಾಜಭಾರಿ ಕಚೇರಿ ಅಜೀಜ್ ಅವರಿಗೆ ನೀಡುತ್ತಿರುವ ಗೌರವದಲ್ಲಿ ಭಾಗಿಯಾಗಲು ಆಹ್ವಾನಿಸಿದೆ.
Advertisement