ನವದೆಹಲಿ: ಈರುಳ್ಳಿ ಬೆಳೆಯನ್ನಿ ನಿಯಂತ್ರಿಸಲು ಕೇಂದ್ರ ಸರ್ಕಾರ ಎಂ ಎಂ ಟಿ ಸಿಗೆ ೧೦ ಸಾವಿರ ಟನ್ ಈರುಳ್ಳಿ ಆಮದು ಮಾಡಿಕೊಳ್ಳುವಂತೆ ಸೂಚಿಸಿದೆ.
"ಏರುತ್ತಿರುವ ಈರುಳ್ಳಿ ನಿಯಂತ್ರಿಸಲು ಹಾಗೂ ಲಭ್ಯತೆಯನ್ನು ಹೆಚ್ಚಿಸಲು ಸರ್ಕಾರ ತನ್ನ ಒಡೆತನದ ಎಂ ಎಂ ಟಿ ಸಿ ಗೆ ಜಾಗತಿಕ ಟೆಂಡರ್ ಕರೆದು ೧೦ ಸಾವಿರ ಟನ್ ಈರುಳ್ಳಿ ಆಮದು ಮಾಡಿಕೊಳ್ಳಲು ಸೂಚಿಸಿದೆ" ಎಂದು ಕೃಷಿ ಸಚಿವಾಲಯ ತಿಳಿಸಿದೆ.
ಬೇಡಿಕೆ ಮತ್ತು ಪೂರೈಕೆಯ ಏರುಪೇರಿನಿಂದಾಗಿ ಕೆಲವು ದಿನಗಳಿಂದ ಈರುಳ್ಳಿ ಬೆಲೆ ಗಗನಕ್ಕೇರಿದೆ.
ರಾಷ್ಟ್ರದ ರಾಜಧಾನಿಯಲ್ಲಿ ಚಿಲ್ಲರೆ ಅಂಗಡಿಗಳಲ್ಲಿ ಈರುಳ್ಳಿ ಬೆಲೆ ಕೆಜಿಗೆ ೬೦ ರೂಪಾಯಿವರೆಗೆ ಏರಿದ್ದು, ದೇಶದ ವಿವಿಧ ಪ್ರದೇಶಗಳಲ್ಲೂ ಇದು ವಿಭಿನ್ನವಾಗಿಲ್ಲ.
ಈರುಳ್ಳಿ ಉತ್ಪಾದನೆಯು ಈ ವರ್ಷ ಕೈಕೊಟಿದ್ದು, ಸರ್ಕಾರದ ದಾಸ್ತಾನಿನಲ್ಲಿರುವ ಈರುಳ್ಳಿ ಕೂಡ ಸಮರ್ಪಕವಾಗಿ ವಿತರಣೆಯಾಗುತ್ತಿಲ್ಲ.
ಕಳೆದ ವರ್ಷ ಈ ಸಮಯದಲ್ಲಿ ಈರುಳ್ಳಿ ಉತ್ಪಾದನೆ ೧೯೪ ಲಕ್ಷ ಟನ್ ನಷ್ಟಿತ್ತು ಈ ವರ್ಷ ಅದು ೧೮೯ ಲಕ್ಷ ಟನ್ ಗೆ ಕುಸಿದಿದೆ.
ಮಹಾರಾಷ್ಟ್ರ, ಕರ್ನಾಟಕ ಮತ್ತು ಮಧ್ಯಪ್ರದೇಶ ಅತಿ ಹೆಚ್ಚು ಈರುಳ್ಳಿ ಉತ್ಪಾದನಾ ರಾಜ್ಯಗಳು.
Advertisement