
ಶ್ರೀನಗರ: ಗೊಂದಲಮಯ ಘಟನೆಗಳಲ್ಲಿ, ರಾಷ್ಟ್ರೀಯ ಭದ್ರತಾ ಸಂಸ್ಥೆಗಳ(ಎನ್ ಎಸ್ ಎ) ಮಾತುಕತೆಗೂ ಮುಂಚಿತವಾಗಿ ಗೃಹಬಂಧನದಲ್ಲಿ ಇರಿಸಲಾಗಿದ್ದ ಇಬ್ಬರು ಕಾಶ್ಮೀರಿ ಪ್ರತ್ಯೇಕವಾದಿ ನಾಯಕರನ್ನು ಎರಡು ಗಂಟೆಗಳ ನಂತರ ಜಮ್ಮು ಕಾಶ್ಮೀರ ಸರ್ಕಾರ ಬಿಡುಗಡೆ ಮಾಡಿದೆ.
ಆದರೆ ಮೊದಲಿನಂತೆಯೇ ಹುರಿಯತ್ ನಾಯಕ ಸಯ್ಯದ್ ಅಲಿ ಷಾ ಗಿಲಾನಿ ಅವರ ಗೃಹ ಬಂಧನ ಮುಂದುವರೆದಿದೆ. ವರದಿಗಳ ಪ್ರಕಾರ ಅವರ ಮನೆಯ ಹೊರಗಡೆ ಭದ್ರತೆಯನ್ನು ಹೆಚ್ಚಿಸಿದ್ದು ಅವರು ಸಾರ್ವಜನಿಕ ಹೇಳಿಕೆ ನೀಡದಂತೆ ನಿಷೇಧ ಹೇರಲಾಗಿದೆ.
ಪ್ರತ್ಯೇಕವಾದಿಗಳಾದ ಯಾಸಿನ್ ಮಲಿಕ್, ಸಯ್ಯದ್ ಅಲಿ ಷಾ ಗಿಲಾನಿ ಮತ್ತು ಮಿರ್ವೈಜ್ ಉಮರ್ ಫರೂಕ್ ಇವರುಗಳನ್ನು ಪಾಕಿಸ್ತಾನ ರಕ್ಷಣಾ ಸಲೆಹೆಗಾರ ಸತ್ರಜ್ ಅಜೀಜ್ ಅವರನ್ನು ಭಾನುವಾರ ಭೇಟಿ ಮಾಡಲು ಪಾಕಿಸ್ತಾನ ರಾಯಭಾರ ಕಚೇರಿ ಆಹ್ವಾನಿಸಿತ್ತು.
ಭಾರತದ ರಕ್ಷಣಾ ಸಲೆಹೆಗಾರ ಅಜಿತ್ ದೋವಲ್ ಜತೆ ಭಯೋತ್ಪಾದನೆಯ ಬಗ್ಗೆ ಚರ್ಚೆ ಮಾಡಲು ಸತ್ರಜ್ ಅಜೀಜ್ ಭಾರತಕ್ಕೆ ಬರುತ್ತಿದ್ದು, ಈಗ ಈ ಇಬ್ಬರು ಹುರಿಯತ್ ನಾಯಕರು ಭಾನುವಾರ ಅಜೀಜ್ ಅವರನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ.
ಈ ಮಾತುಕತೆಗಳನ್ನು ರದ್ದುಪಡಿಸಲು ಪಾಕಿಸ್ತಾನ ಮಾಡುತ್ತಿರುವ ತಂತ್ರ ಇದು ಎಂದು ಬಣ್ಣಿಸಲಾಗುತ್ತಿದ್ದು, ಆದರೆ ಎನ್ ಎಸ್ ಎ ಮಾತುಕತೆಗಳು ಜರುಗುವಂತೆ ಭಾರತ ದೃಢನಿಲುವು ಹೊಂದಿದೆ ಎನ್ನಲಾಗಿದೆ. ಇದೇ ಕಾರಣಕ್ಕಾಗಿ ಕಳೆದ ವರ್ಷದ ಆಗಸ್ಟ್ ನಲ್ಲಿ ಈ ಮಾತುಕತೆಗಳು ಮುರಿದುಬಿದ್ದಿದ್ದವು.
Advertisement