ಸ್ಕೈಪ್, ವಾಟ್ಸ್ ಆಪ್, ಇಮೇಲ್ ಗಳಲ್ಲಿ ತಲಾಕ್; ಮುಸ್ಲಿಂ ಮಹಿಳೆಯರು ತಲ್ಲಣ

ಮುಸ್ಲಿಂ ಸಮುದಾಯದಲ್ಲಿ ಮೂರೂ ಬಾರಿ ಬಾಯಿಮಾತಿನ ತಲಾಕ್ ಹೇಳಿ ವಿಚ್ಚೇಧನ ನೀಡುವ ಪದ್ಧತಿಯನ್ನು ರದ್ದು ಮಾಡಲು ಮುಸ್ಲಿಂ ಮಹಿಳೆಯರ ಕೂಗು ಹೆಚ್ಚಿದೆ. ಇದೇ ಮೊದಲ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಸ್ಲಿಂ ಸಮುದಾಯದಲ್ಲಿ ಮೂರೂ ಬಾರಿ ಬಾಯಿಮಾತಿನ ತಲಾಕ್ ಹೇಳಿ ವಿಚ್ಚೇಧನ ನೀಡುವ ಪದ್ಧತಿಯನ್ನು ರದ್ದು ಮಾಡಲು ಮುಸ್ಲಿಂ ಮಹಿಳೆಯರ ಕೂಗು ಹೆಚ್ಚಿದೆ. ಇದೇ ಮೊದಲ ಬಾರಿಗೆ ಈ ಮೂರೂ ಬಾರಿ ತಲಾಕ್ ಹೇಳುವ ಪದ್ಧತಿ 'ತುಳಿಯುವ' ಮನಸ್ಥಿತಿಯದ್ದು ಎಂದು ೯೨.೧% ಮುಸ್ಲಿಂ ಮಹಿಳೆಯರು ಅಭಿಪ್ರಾಯಪಟ್ಟಿದ್ದಾರೆ ಎನ್ನುತ್ತದೆ ನೂತದ ಅಧ್ಯಯನವೊಂದು.

ಈಗ ಮೂರು ಬಾರಿ ತಲಾಕನ್ನು ಈಗ ಸಾಮಾಜಿಕ ಅಂತರ್ಜಾಲಗಳಲ್ಲಿ, ಸ್ಕೈಪ್, ವಾಟ್ಸ್ ಆಪ್ ಮೆಸೆಂಜರ್ ಗಳಲ್ಲಿ ಮತ್ತು ಇಮೇಲ್ ಗಳಲ್ಲಿ ಹೇಳುತ್ತಿರುವುದು ಅವರ ತಲ್ಲಣವನ್ನು ಹೆಚ್ಚಿಸಿದೆ.

ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ ಎಂಬ ಎನ್ ಜಿ ಒ ೧೦ ರಾಜ್ಯಗಳಲ್ಲಿ ನಡೆಸಿರುವ ಅಧ್ಯಯನದಲ್ಲಿ ಮುಸ್ಲಿಂ ಮಹಿಳೆಯರು ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಬದಲಾವಣೆ ಅಗತ್ಯ ಎಂಬ ಅಭಿಪ್ರಾಯ ತಳೆದಿದ್ದಾರೆ. ಈ ಅಧ್ಯಯನದಲ್ಲಿ ತೊಡಗಿಸಿಕೊಂಡಿರುವ ಬಹುತೇಕ ಮುಸ್ಲಿಂ ಮಹಿಳೆಯರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರಾಗಿದ್ದು ಸಾಮಾನ್ಯವಾಗಿ ೧೮ನೆ ವಯಸ್ಸಿನಲ್ಲಿಯೇ ಮದುವೆಯಾಗಿರುವವರು. ಇವರಲ್ಲಿ ಹೆಚ್ಚಿನವರು ಕೌಟುಂಬಿಕ ದೌರ್ಜನ್ಯಕ್ಕೆ ಒಳಪಟ್ಟಿರುವುದು ಕೂಡ ವರದಿಯಾಗಿದೆ.

ಅಧ್ಯಯನದಲ್ಲಿ ಭಾಗಿಯಾಗಿರುವ ಕುಟುಂಬಗಳಲ್ಲಿ ೭೩% ಕುಟುಂಬಗಳ ವಾರ್ಷಿಕ ಆದಾಯ ೫೦೦೦೦ರೂ ಗಿಂತಲೂ ಕಡಿಮೆ ಹಾಗೂ ೫೫% ಮಹಿಳೆಯರು ತಮ್ಮ ೧೮ ನೆ ವಯಸ್ಸಿಗೇ ಮದುವೆಯಾಗಿದ್ದು, ೮೨% ಜನಕ್ಕೆ ತಮ್ಮ ಹೆಸರಿನಲ್ಲಿ ಯಾವುದೇ ಆಸ್ತಿಪಾಸ್ತಿ ಇಲ್ಲ.

"೨೦೧೪ ರಲ್ಲಿ ನಾವು ನಡೆಸುವ ಮಹಿಳಾ ಶರಿಯಾ ಅದಾಲತ್ ಗೆ ೨೩೫ ಪ್ರಕರಣಗಳು ಬಂದಿದ್ದು ಅವುಗಳಲ್ಲಿ ೮೦% ಜನ ಬಾಯಿಮಾತಿನ ತಲಾಕ್ (ವಿಚ್ಚೇಧನ) ಪಡೆದವರು" ಎಂದು ಈ ಅಧ್ಯಯನದ ಲೇಖಕಿ ಜಾಕಿಯಾ ಸೋಮನ್ ತಿಳಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿದೆ.

ವಿಚ್ಚೇಧನ ಪದ್ಧತಿ ಕಾನೂನಾತ್ಮಕವಾಗಿ ನಡೆಯಬೇಕೆಂದು ೯೩% ಜನ ಅಭಿಪ್ರಾಯ ಪಟ್ಟಿದ್ದಾರೆ, ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ತಿದ್ದುಪಡಿ ಅಗತ್ಯ ಎಂದು ೮೩.೩% ಜನ ಅಭಿಪ್ರಾಯಪಟ್ಟಿದ್ದಾರೆ. ಆದರೆ ಒಟ್ಟಾಗಿ ಮುಸ್ಲಿಂ ಸಮುದಾಯ ಏಕರೂಪ ನಾಗರಿಕ ಸಂಹಿತೆಗಾಗಲೀ ಅಥವಾ ತಮ್ಮ ಕಾನೂನಿನಲ್ಲಿ ತಿದ್ದುಪಡಿಗಾಗಲಿ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com