ಅಪರಾಧಿಗಳ ಬೆರಳಚ್ಚು ಸಂಗ್ರಹ

ಅಪರಾಧಗಳಿಗೆ ನಿಯಂತ್ರಣ ಹೇರುವ ದೃಷ್ಟಿಯಿಂದ ಕೇಂದ್ರ ಸರ್ಕಾರವು ಶೀಘ್ರದಲ್ಲೇ ರಾಷ್ಟ್ರೀಯ ಬೆರಳಚ್ಚು ದತ್ತಾಂಶ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಅಪರಾಧಗಳಿಗೆ ನಿಯಂತ್ರಣ ಹೇರುವ ದೃಷ್ಟಿಯಿಂದ ಕೇಂದ್ರ ಸರ್ಕಾರವು ಶೀಘ್ರದಲ್ಲೇ ರಾಷ್ಟ್ರೀಯ ಬೆರಳಚ್ಚು ದತ್ತಾಂಶ ಸಂಚಯ(ಡಾಟಾಬೇಸ್)ಯೋಜನೆಯನ್ನು ಅನುಷ್ಠಾನಕ್ಕೆ ತರಲಿದೆ. ಇದರಂತೆ ದೇಶಾದ್ಯಂತ ಒಟ್ಟು 30 ಲಕ್ಷ ಅಪರಾಧಿಗಳ ಬೆರಳಚ್ಚನ್ನು ಸರ್ಕಾರ ಸಂಗ್ರಹಿಸಲಿದೆ.

ಅಪರಾಧಿಗಳನ್ನು ಶೀಘ್ರ ಪತ್ತೆಹಚ್ಚಲು ಹಾಗೂ ತನಿಖೆಗೆ ಚುರುಕು ನೀಡಲು ಈ ಯೋಜನೆ ಮಹತ್ವದ ನೆರವು ನೀಡಲಿದೆ. ಎಲ್ಲ ರಾಜ್ಯಗಳ ನೆರವಿನೊಂದಿಗೆ ಕೇಂದ್ರ ಗೃಹ ಸಚಿವಾಲಯವು ಈ ಡಾಟಾ ಬೇಸ್ ಅನ್ನು ಸಿದ್ಧಪಡಿಸಲಿದೆ. ಸದ್ಯ ಕೇಂದ್ರೀಯ ಬೆರಳ ಚ್ಚು ಬ್ಯೂ ರೋ(ಸಿಪಿಎ_ïಬಿ) 9.7 ಲಕ್ಷ ಅಪರಾಧಿಗಳ ದಾಖಲೆಗಳನ್ನು ಹೊಂದಿದೆ.

ಆದರೆ, ವಿಧ ರಾಜ್ಯಗಳಲ್ಲಿ ಇನ್ನೂ 20 ಲಕ್ಷ ಅಪರಾಧಿಗಳ ಬೆರಳಚ್ಚುಗಳಿವೆ. ಇವುಗಳನ್ನು ಕೇಂದ್ರೀಯ ಡಾಟಾಬೇಸ್‍ಗೆ ಶೀಘ್ರದಲ್ಲೇ ಲಿಂಕ್ ಮಾಡಲು ನಿರ್ಧರಿಸಲಾಗಿದೆ. ಕೇಂದ್ರ ಮತ್ತು ರಾಜ್ಯದ ಬಳಿ ಇರುವ ಎಲ್ಲ ಬೆರಳಚ್ಚು ಮಾಹಿತಿಯನ್ನು ಒಂದೇಕಡೆ ಸಂಗ್ರಹಿಸುವುದರಿಂದ ತನಿಖಾ ಅಧಿಕಾರಿಗಳಿಗೆ ಅಪರಾಧಿಗಳನ್ನು ಪತ್ತೆ ಹಚ್ಚಲು ಸುಲಭವಾಗಲಿದೆ.

ಅಂತಾರಾಜ್ಯ ಅಪರಾಧಿಗಳನ್ನೂ ಹಿಡಿಯುವುದು ಇದರಿಂದ ಸುಲಭವಾಗಲಿದೆ. ಮುಂದಿನ ದಿನಗಳಲ್ಲಿ ಈ ಬೆರಳಚ್ಚು ದತ್ತ ಸಂಚಯವನ್ನು ಡಿಜಿಟಲ್ ಇಮೇಜ್, ಹಸ್ತದ ಪ್ರಿಂಟ್‍ನಂಥ ಇತರೆ ದತ್ತಾಂಶಗಳನ್ನೂ ಸಂಪರ್ಕಿಸುವ ಉದ್ದೇಶ ಸರ್ಕಾರಕ್ಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com