ಮಳೆಗಾಗಿ ಸಚಿವ ಡಿಕೆಶಿ ವಿಶೇಷ ಪೂಜೆ

ನಾನು ಕಳೆ ವರ್ಷ ಕಿಗ್ಗಾ ಶ್ರೀ ಋಷ್ಯ ಶೃಂಗೇಶ್ವರ ದೇವಾಲಯಕ್ಕೆ ಬಂದು ಮಳೆಗಾಗಿ ಪ್ರಾರ್ಥಿಸಿದ್ದೆ. ಆಗ ಪ್ರತಿಪಕ್ಷಗಳು ಸೇರಿದಂತೆ ಹಲವರು ನನ್ನನ್ನು ಟೀಕಿಸಿದ್ದರು.
ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್

ಶೃಂಗೇರಿ: ನಾನು ಕಳೆ ವರ್ಷ ಕಿಗ್ಗಾ ಶ್ರೀ ಋಷ್ಯ ಶೃಂಗೇಶ್ವರ ದೇವಾಲಯಕ್ಕೆ ಬಂದು ಮಳೆಗಾಗಿ ಪ್ರಾರ್ಥಿಸಿದ್ದೆ. ಆಗ ಪ್ರತಿಪಕ್ಷಗಳು ಸೇರಿದಂತೆ ಹಲವರು ನನ್ನನ್ನು ಟೀಕಿಸಿದ್ದರು. ಅಂದು ಟೀಕೆಗಳನ್ನು ಸಂತೋಷದಿಂದ ಸ್ವಾಗತಿಸಿದ್ದೆ. ರಾಜ್ಯದಲ್ಲಿ ಉತ್ತಮ ಮಳೆಯಾಗಿ ವಿದ್ಯುತ್ ಕೊರೆ ನೀಗುವಂತಾಗಿದ್ದನ್ನು ನಾನು ಮರೆಯಲಾರೆ ಎಂದು ರಾಜ್ಯ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.

ಕಿಗ್ಗಾ ಶ್ರೀಋಷ್ಯ ಶೃಂಗೇಶ್ವರ ದೇವಾಲಯಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಡಿಕೆಶಿ, ದೇಶದ ಪ್ರತಿಯೊಬ್ಬ ನಾಗರಿಕನಿಗೂ ತನ್ನದೇ ಆದ ಧರ್ಮ, ಸಂಸ್ಕೃತಿಯೊಡನೆ ಬದುಕಲು ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಭಾರತ ವಿವಿಧ ಭಾಷೆ, ಧರ್ಮ, ಸಂಸ್ಕೃತಿಗಳ ನೆಲೆವೀಡು. ಕಳೆದ ಬಾರಿ ರಾಜ್ಯದಲ್ಲಿ ಮಳೆಯಿಲ್ಲದೇ ಬರ ಉಂಟಾಗಿತ್ತು. ಆಗ ಮಳೆಗಾಗಿ ಪ್ರಾರ್ಥಿಸಲು ಇಲ್ಲಿಗೆ ಬಂದು ವಿಶೇಶ ಪೂಜೆ ಸಲ್ಲಿಸಿದ್ದೆ ಎಂದರು.

ಕಿಗ್ಗಾ ದೇವಾಲಯ ಶಿಥಿಲಾವಸ್ಥೆಯಲ್ಲಿದೆ. ಗರ್ಭಗುಡಿಯಲ್ಲಿ ಸೋರುತ್ತಿರುವ ಬಗ್ಗೆ ಇಲ್ಲಿನ ಅರ್ಚಕರು, ಸ್ಥಳೀಯರು ಗಮನಕ್ಕೆ ತಂದಿದ್ದಾರೆ. ಶೀಘ್ರದಲ್ಲಿ ದುರಸ್ತಿ ಕ್ರಮ ಜರುಗಿಸಲಾಗುವುದು. ನನ್ನ ಸ್ವಂತ ಖರ್ಚಿನಲ್ಲಿಯೂ ಪ್ರಯತ್ನಿಸುತ್ತೇನೆ ಎಂದರು.

900 ಮೆಗಾವ್ಯಾಟ್ ಖರೀದಿ
ಈ ಬಾರಿ ರಾಜ್ಯದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. 20 ವರ್ಷಗಳ ಹಿಂದೆ ಇದೇ ರೀತಿ ಬರಗಾಲ ಇತ್ತು. ಈ ವರ್ಷವೂ ಬರಗಾಲ ಬಂದಿದೆ. ವಿದ್ಯುತ್ ಸಮಸ್ಯೆ ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. 900 ಮೆಗಾವ್ಯಾಟ್ ವಿದ್ದುತ್ ಖರೀದಿಗೆ ಅನುಮತಿ ದೊರೆತಿದೆ ಎಂದು ಶಿವಕುಮಾರ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com