ಮೀಸಲಾತಿಗಾಗಿ ಗುಜರಾತಿ ಪಟೇಲರ ಮೆಗಾ ರ್ಯಾಲಿ; ಸ್ಥಗಿತಗೊಂಡ ಅಹಮದಾಬಾದ್

ಇತರೆ ಹಿಂದುಳಿದ ವರ್ಗದಡಿ ಮೀಸಲಾತಿ ಕೋರಿ ಅಹಮದಾಬಾದಿನಲ್ಲಿ ಪಟೇಲ್ ಸಮುದಾಯ ಬೃಹತ್ ರ್ಯಾಲಿ ನಡೆಸಿದೆ.
ಮೀಸಲಾತಿ ಕೋರಿ ಗುಜರಾತಿನಲ್ಲಿ ಪಟೇಲ್ ಸಮುದಾಯ ನಡೆಸಿರುವ ರ್ಯಾಲಿ
ಮೀಸಲಾತಿ ಕೋರಿ ಗುಜರಾತಿನಲ್ಲಿ ಪಟೇಲ್ ಸಮುದಾಯ ನಡೆಸಿರುವ ರ್ಯಾಲಿ

ಅಹಮದಾಬಾದ್: ಇತರೆ ಹಿಂದುಳಿದ ವರ್ಗದಡಿ ಮೀಸಲಾತಿ ಕೋರಿ ಅಹಮದಾಬಾದಿನಲ್ಲಿ ಪಟೇಲ್ ಸಮುದಾಯ ಬೃಹತ್ ರ್ಯಾಲಿ ನಡೆಸಿದೆ.

ಪಟೇಲ್ ಮುಖಂಡರು ಬಂಧ್ ಕರೆದಿರುವುದರಿಮ್ದ ಅಲ್ಲದೆ  ಪೊಲೀಸರು ಕೆಲವು ಮುಖ್ಯ ರಸ್ತೆಗಳಿಗೆ ಯಾರೂ ಬರದಂತೆ ನಿರ್ಬಂಧ ಹೇರಿರುವುದರಿಂದ ಹಾಗು ಜನಕ್ಕೆ ಅಗತ್ಯ ಇರದ ಹೊರತು ಮನೆಯಿಂದ ಹೊರಬೀಳದಂತೆ ಸೂಚಿಸಿರುವುದು ಗುಜರಾತಿನ ವಾಣಿಜ್ಯ ರಾಜಧಾನಿ ಅಹಮದಾಬದನ್ನು ಸ್ತಬ್ಧಗೊಳಿಸಿದೆ.

'ಪಾಟಿದಾರ್ ಅನಾಮತ್ ಆಂದೋಲನ ಸಮಿತಿ'ಯ ಸಂಚಾಲಕ ಹಾರ್ದಿಕ್ ಪಟೇಲ್ ಅವರು ತಿಳಿಸಿರುವಂತೆ ಜಿ ಎಂ ಡಿ ಸಿ ಮೈದಾನದಲ್ಲಿ 'ಮಾಹಾ ಕ್ರಾಂತಿ ರ್ಯಾಲಿ' ನಡೆಯಲಿದೆ ಎಂದಿದ್ದಾರೆ.

"ಇಲ್ಲಿನ ಪ್ರದೇಶಿಕ ನಿವಾಸಿಗಳಿಗೆ ತೊಂದರೆಯಾಗದಂತೆ ನಗರದಲ್ಲಿ ಹಾಗೂ ಇಡೀ ಗುಜರಾತಿನಲ್ಲಿ ಸಂಪೂರ್ಣ ಬಂಧ್ ಗೆ ಕರೆ ನೀಡಿದ್ದೇವೆ. ನಾಳೆ ಕೂಡ ಶಾಲೆ ಕಾಲೇಜು ಮತ್ತು ಅಂಗಡಿಗಳನ್ನು ತೆರೆಯದಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆ" ಎಂದು ಅವರು ತಿಳಿಸಿದ್ದಾರೆ.

ಹಿಂದುಳಿದ ವರ್ಗದಡಿ ಪಟೇಲ್ ಸಮುದಾಯವನ್ನು ಸೇರಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಆನಂದಿಬೇನ್ ಪಟೇಲ್ ಅವರು ತಿಳಿಸಿ ಮಾತುಕತೆಗೆ ಬರುವಂತೆ ಮುಖಂಡರಿಗೆ ಮನವಿ ಮಾಡಿದ್ದರೂ ಕೂಡ ಪಟೇಲ್ ಸಮುದಾಯ ಪಟ್ಟು ಸಡಿಲಿಸಲು ನಿರಾಕರಿಸಿದೆ.

ರಾಜ್ಯದಾದ್ಯಂತ ಪೊಲೀಸರು ಬಿಗಿ ಭದ್ರತೆಗೆ ಮುಂದಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com