ಪಟೇಲ್ ಗಳಿಗೆ ಮೀಸಲಾತಿ ಸಿಗುವುದಾದರೆ, ಮುಂದುವರೆದ ಜಾತಿಗಳಿಗೂ ನೀಡಿ: ಕಾಂಗ್ರೆಸ್

ಇತರೆ ಹಿಂದುಳಿದ ವರ್ಗದಡಿ ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಆ ಸಮುದಾಯ ಪ್ರತಿಭಟನೆ ನಡೆಸುವುದಾದರೆ ಮುಂದುವರೆದ ಜಾತಿಗಳಾದ ಬ್ರಾಹ್ಮಣ, ರಜಪೂತ
ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ
ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ

ನವದೆಹಲಿ: ಇತರೆ ಹಿಂದುಳಿದ ವರ್ಗದಡಿ ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಆ ಸಮುದಾಯ ಪ್ರತಿಭಟನೆ ನಡೆಸುವುದಾದರೆ ಮುಂದುವರೆದ ಜಾತಿಗಳಾದ ಬ್ರಾಹ್ಮಣ, ರಜಪೂತ ಇವನ್ನು ಕಡೆಗಣಿಸುವುದೇಕೆ ಎಂದು ಕಾಂಗ್ರೆಸ್ ಪಕ್ಷ ಬುಧವಾರ ಹೇಳಿದೆ.

"ಆರ್ಥಿಕವಾಗಿ ಸಬಲವಾಗಿರುವ, ರಾಜಕೀಯವಾಗಿ ಪ್ರಬಲವಾಗಿರುವ ಹಾಗೂ ಸಾಮಾಜಿಕವಾಗಿ ಮುಂದುವರೆದ ಸಮುದಾಯಗಳು ಮೀಸಲಾತಿ ಕೇಳುತ್ತಿವೆ, ಹೀಗಿರುವಾಗ ಮುಂದುವರೆದ ಜಾತಿಗಳಾದ ಬ್ರಾಹ್ಮಣರನ್ನು, ರಜಪೂತರನ್ನು ಮತ್ತು ಭೂಮಿಹಾರರನ್ನು ಬಿಡುವುದೇಕೆ" ಎಂದು ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ ಹೇಳಿದ್ದಾರೆ.

"ಪಟೇಲ್ ಗಳು, ಜಾಟ್ ಗಳು, ರೆಡ್ಡಿಗಳು ಹಾಗೂ ಇನ್ನಿತರ ಮೇಲ್ವರ್ಗದ ಸಮುದಾಯಗಳು ಮೀಸಲಾತಿ ಕೇಳುತ್ತಿದ್ದು ಅದನ್ನು ಯಾರೂ ವಿರೋಧಿಸುತ್ತಿಲ್ಲವಾದರೆ, ಉಳಿದ ಮುಂದುವರೆದ ಜನಾಗಂವನ್ನು ಕಡೆಗಣಿಸುವುದೇಕೆ" ಎಂದು ಕೂಡ ಅವರು ಹೇಳಿದ್ದಾರೆ.

ದೇಶದಿಡೀ ಈ ಮೀಸಲಾತಿಯನ್ನು ಹೇಗೆ ನೀಡಲಾಗಿದೆ ಎಂದರೆ ಇಂದು ಬ್ರಾಹ್ಮಣರು, ರಜಪೂತರು ಮತ್ತು ಭೂಮಿಹಾರ್ ಗಳು ನಿಜವಾದ ಹಿಂದುಳಿದ ವರ್ಗಗಳಾಗಿವೆ ಎಂದು ಕೂಡ ತಿವಾರಿ ಹೇಳಿದ್ದಾರೆ.

ಮೀಸಲಾತಿಯ ಇಡೀ ತಳಹದಿಯನ್ನು ಮತ್ತೆ ಚರ್ಚಿಸುವ ಸಮಯ ಬಂದಿದೆ ಎಂದು ಅವರು ಒತ್ತಿ ಹೇಳಿದ್ದಾರೆ.

ನರೇಂದ್ರ ಮೋದಿ ಗುಜರಾತಿನ ಮುಖ್ಯಮಂತ್ರಿಗಳಾಗಿದ್ದಾಗ, ಅವರು ಹೇಳಿಕೊಳ್ಳುತ್ತಿದ್ದ ಅಭಿವೃದ್ಧಿ ಮಾದರಿ ವಿಫಲವಾಗಿರುವುದೇ ಇಂದು ಪಟೇಲ್ ಸಮುದಾಯ ಈ ಪ್ರತಿಭಟನೆಗೆ ಇಳಿದಿರುವುದಕ್ಕೆ ಕಾರಣ ಎಂದು ತಿವಾರಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com