ದಾವೂದ್ ಇಬ್ರಾಹಿಮ್ ಪಾಕಿಸ್ತಾನದ ಕರಾಚಿಯಲ್ಲಿ ವಾಸವಾಗಿದ್ದಾನೆಂಬ, ಭಾರತದ ಪತ್ರಕರ್ತ ಅರ್ಣಬ್ ಗೋಸ್ವಾಮಿ ಅವರ ವರದಿಯನ್ನು ಅಣಕಿಸಿ ವಿಡಿಯೋ ಮಾಡಿ ಪಾಕಿಸ್ತಾನದ ಪತ್ರಕರ್ತ ಪೈಸಲ್ ಕುರೇಶಿ ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದ್ದಾನೆ. ಸುದ್ದಿ ವರದಿಗಾರ ಮತ್ತು ಟೈಮ್ಸ್ ನೌ ಸುದ್ದಿವಾಹಿನಿಯ ಮುಖ್ಯ ಸಂಪಾದಕ ಅರ್ಣಬ್ ಗೋಸ್ವಾಮಿ ದಾವೂದ್ ಪತ್ನಿಗೆ ನಕಲಿ ಕರೆ ಮಾಡಿದ್ದಾನೆ ಎಂದು ಆರೋಪಿಸಿದ್ದಾನೆ.
ಈ ವಿಡಿಯೋದಲ್ಲಿ ಅರ್ಣಬ್ ಅವರ ಆರೋಪಗಳು ಆಧಾರರಹಿತ ಎಂದು ಕರೆದಿರುವ ಈ ಪತ್ರಕರ್ತ, ದಾವೂದ್ ಪತ್ನಿ ಎಂದು ಹೇಳಿಕೊಳ್ಳವ ಮಹಿಳೆಯೊಬ್ಬಳಿಗೆ ಕರೆ ಮಾಡಿ ಮಾತನಾಡುತ್ತಾನೆ. ಆ ಮಹಿಳೆ ತಾನು ನರಕದಲ್ಲಿರುವುದಾಗಿ ಹೇಳಿ ಅರ್ಣಬ್ ಹುಚ್ಚ ಎಂದು ಹೇಳುವುದು ವಿಡಿಯೋದಲ್ಲಿ ಕಂಡುಬಂದಿದೆ.
ಸುದ್ದಿ ವಾಹಿನಿಯ ಅತಿಥಿಗಳನ್ನು ಅರ್ಣಬ್ ಟೀಕಿಸುವ ದೃಶ್ಯಗಳು ಕೂಡ ವಿಡಿಯೋದಲ್ಲಿ ಸೆರೆಯಾಗಿವೆ.
Advertisement