ಬ್ಯಾಂಕಾಕ್ ಸ್ಫೋಟ; ಶಂಕಿತನ ಬಂಧನ

೨೦ ಜನರನ್ನು ಬಲಿ ತೆಗೆದುಕೊಂಡ ಬ್ಯಾಂಕಾಕ್ ನಲ್ಲಿ ಹಿಂದು ದೇವಾಲಯದ ಬಳಿ ನಡೆದ ಬಾಂಬ್ ಸ್ಫೋಟಕ್ಕೆ ಕಾರಣ ಎಂದು ಶಂಕಿಸಲಾದ ಟರ್ಕಿ ಮೂಲದ ವ್ಯಕ್ತಿಯನ್ನು
ಬ್ಯಾಂಕಾಕ್ ಸ್ಫೋಟದ ಶಂಕಿತನ ರೇಖಾ ಚಿತ್ರ
ಬ್ಯಾಂಕಾಕ್ ಸ್ಫೋಟದ ಶಂಕಿತನ ರೇಖಾ ಚಿತ್ರ

ಬ್ಯಾಂಕಾಕ್: ೨೦ ಜನರನ್ನು ಬಲಿ ತೆಗೆದುಕೊಂಡ ಬ್ಯಾಂಕಾಕ್ ನಲ್ಲಿ ಹಿಂದು ದೇವಾಲಯದ ಬಳಿ ನಡೆದ ಬಾಂಬ್ ಸ್ಫೋಟಕ್ಕೆ ಕಾರಣ ಎಂದು ಶಂಕಿಸಲಾದ ಟರ್ಕಿ ಮೂಲದ ವ್ಯಕ್ತಿಯನ್ನು ಉತ್ತರ ಬ್ಯಾಂಕಾಕಿನಲ್ಲಿ ಬಂಧಿಸಲಾಗಿದೆ.

ಬ್ಯಾಂಕಾಕ್ ನ ನಾಂಗ್ಚಾಕ್ ಜಿಲ್ಲೆಯ ಪೂನ್-ಆನಂದ್ ಅಪಾರ್ಟ್ಮೆಂಟ್ ಮೇಲೆ ದಾಳಿ ನಡೆಸಿ ಶಂಕಿತನನ್ನು ಬಂಧಿಸಲಾಗಿದೆ. ಬೃಹತ್ ಮೊತ್ತದ ಸ್ಫೋಟಕ ಸಾಮಗ್ರಿಗಳನ್ನು ಅವನಿದ್ದ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ನೇಶನ್ ಆನ್ಲೈನ್ ವರದಿ ಮಾಡಿದೆ.

ವಸತಿ ಸಮುಚ್ಚಯವನ್ನು ೧೦೦ ಕ್ಕೂ ಹೆಚ್ಚು ಪೊಲೀಸರು ಸುತ್ತುವರೆದ ನಂತರ ಅವನನ್ನು ಬಂಧಿಸಲಾಗಿದೆ. ವಸತಿ ಸಂಮುಚ್ಚಯದ ನಾಲ್ಕನೇ ಅಂತಸ್ತಿನಲ್ಲಿ ರೂಮ್ ನಂ ೪೧೨ ಮತ್ತು ೪೧೪ ರಲ್ಲಿ ಈ ಶಂಕಿತ ಬಾಡಿಗೆಗಿದ್ದ ಎಂದು ತಿಳಿದುಬಂದಿದೆ.

ಆಗಸ್ಟ್ ೧೭ ರಂದು ಏರ್ವಾನ್ ದೇವಾಲಯದ ಬಳಿ ನಡೆದ ಈ ಸ್ಫೋಟದಲ್ಲಿ ೨೦ ಜನ ಮೃತಪಟ್ಟು ೧೦೦ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ದೇವಾಲಯದ ಬೆಂಚಿನಡಿ ಒಂದು ಬ್ಯಾಗ್ ಬಿಟ್ಟು ಶಂಕಿತ ತೆರಳುತ್ತಿದ್ದುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com