ಸುರಕ್ಷಿತ ಪ್ರದೇಶಗಳಿಗೆ ಗಡಿ ಭಾಗದ ಜನರ ವಲಸೆ(ಸಾಂದರ್ಭಿಕ ಚಿತ್ರ)
ಸುರಕ್ಷಿತ ಪ್ರದೇಶಗಳಿಗೆ ಗಡಿ ಭಾಗದ ಜನರ ವಲಸೆ(ಸಾಂದರ್ಭಿಕ ಚಿತ್ರ)

ಪಾಕಿಸ್ತಾನದಿಂದ ನಿರಂತರ ಶೆಲ್ ದಾಳಿ: ಸುರಕ್ಷಿತ ಪ್ರದೇಶಗಳಿಗೆ ಗಡಿ ಭಾಗದ ಜನರ ವಲಸೆ

ಪಾಕಿಸ್ತಾನ ರೇಂಜರ್ ಗಳು ಗಡಿ ಪ್ರದೇಶದಲ್ಲಿ ನಿರಂತರವಾಗಿ ಶೆಲ್ ದಾಳಿ ನಡೆಸಿತ್ತಿರುವುದರ ಪರಿಣಾಮ ಗಡಿ ಭಾಗದ ಗ್ರಾಮದ ನಾಗರಿಕರು ಸುರಕ್ಷಿತ ಪ್ರದೇಶಗಳಿಗೆ ವಲಸೆ ತೆರಳುತ್ತಿದ್ದಾರೆ.

ಜಮ್ಮು: ಪಾಕಿಸ್ತಾನ ರೇಂಜರ್ ಗಳು ಗಡಿ ಪ್ರದೇಶದಲ್ಲಿ ನಿರಂತರವಾಗಿ ಶೆಲ್ ದಾಳಿ ನಡೆಸಿತ್ತಿರುವುದರ ಪರಿಣಾಮ ಗಡಿ ಭಾಗದ ಗ್ರಾಮದ ನಾಗರಿಕರು ಸುರಕ್ಷಿತ ಪ್ರದೇಶಗಳಿಗೆ ವಲಸೆ ತೆರಳುತ್ತಿದ್ದಾರೆ.

ಬಿಎಸ್ಎಫ್ ಪೋಸ್ಟ್ ಮೇಲೆ ಪಾಕಿಸ್ತಾನ ರೇಂಜರ್ ಗಳು ಶೆಲ್ ದಾಳಿ ನಡೆಸುತ್ತಿದ್ದಾರೆ. ಆದರೆ ನಮ್ಮ ಪಡೆಗಳು ಇದಕ್ಕೆ ಪ್ರತಿ ದಾಳಿ ನಡೆಸಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ಐಎಎನ್ಎಸ್  ಗೆ ತಿಳಿಸಿದ್ದಾರೆ. ಜಮ್ಮು-ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ಪ್ರದೇಶದಲ್ಲಿರುವ ಅನೇಕ ಕುಟುಂಬಗಳು  ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುತ್ತಿವೆ.

ಪಾಕಿಸ್ತಾನದ ದಾಳಿಗೆ ಈ ತಿಂಗಳಲ್ಲಿ  9 ಜನರು ಸಾವನ್ನಪ್ಪಿದ್ದು 30 ಜನರಿಗೆ ತೀವ್ರ ಗಾಯಗಳುಂಟಾಗಿವೆ. ಭಾರತೀಯ ನಾಗರಿಕರಿರುವ ಪ್ರದೇಶಗಳ ಮೇಲೆ ಪಾಕಿಸ್ತಾನ ನಿರಂತರವಾಗಿ ಶೆಲ್ ದಾಳಿ ನಡೆಸುತ್ತಿದೆ. ಈ ತಿಂಗಳು ಭಾರತೀಯ ಸೇನೆ ಪಾಕಿಸ್ತಾನದ ಇಬ್ಬರು ಉಗ್ರರನ್ನು ಜೀವಂತಾವಾಗಿ ಸೆರೆ ಹಿಡಿದಿತ್ತು.

Related Stories

No stories found.

Advertisement

X
Kannada Prabha
www.kannadaprabha.com