ಗುಂಡಿನ ದಾಳಿಗೆ ಬಲಿಯಾದ ಹಿರಿಯ ಸಾಹಿತಿ ಕಲಬುರ್ಗಿ

ಹಿರಿಯ ಸಾಹಿತಿ ಎಂ ಎಂ ಕಲಬುರ್ಗಿ ಅವರ ಮನೆಗೆ ನುಗ್ಗಿದ್ದ ದುಷ್ಮರ್ಮಿಗಳು ಏಕಾಏಕಿ ಗುಂಡಿನ ದಾಳಿ...
ಹತ್ಯೆಗೀಡಾದ ಸಾಹಿತಿ ಎಂಎಂ ಕಲಬುರ್ಗಿ
ಹತ್ಯೆಗೀಡಾದ ಸಾಹಿತಿ ಎಂಎಂ ಕಲಬುರ್ಗಿ
Updated on

ಧಾರವಾಡ:  ಹಿರಿಯ ಸಾಹಿತಿ ಹಾಗೂ ಸಂಶೋಧಕ ಎಂ ಎಂ ಕಲಬುರ್ಗಿ ಅವರ ನಿವಾಸದಲ್ಲಿ ನಡೆದಂತಹ ಗುಂಡಿನ ದಾಳಿಯಲ್ಲಿ ಎಂ ಎಂ ಕಲಬುರ್ಗಿ ಅವರು ಸಾವನ್ನಪ್ಪಿದ್ದಾರೆ.

ಇಂದು ಬೆಳಿಗ್ಗೆ 8.40ಕ್ಕೆ ಸುಮಾರಿನಲ್ಲಿ ದುಷ್ಕರ್ಮಿಗಳು ಏಕಾಏಕಿ ಕಲಬುರ್ಗಿ ಅವರ ಮನೆಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾರೆ. ತುಂಬಾ ಹತ್ತರದಿಂದಲೇ ಗುಂಡಿನ ದಾಳಿ ನಡೆಸಿದ್ದು, ಕಲಬುರ್ಗಿ ಅವರ ಹಣೆಗೆ ಗುಂಡೇಟು ತಗುಲಿದೆ

ಕಲಬುರ್ಗಿ ಅವರ ಪತ್ನಿ ಬಂದು ನೋಡುವಷ್ಟರಲ್ಲಿ ಕಲಬುರ್ಗಿ ಅವರು ಕೆಳಗೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಧಾರವಾಡದ ಜಿಲ್ಲಾ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಲಾಯಿತಾದರು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಧಾರವಾಡದಲ್ಲಿರುವ ಕಲ್ಯಾಣನಗರದ ಮನೆಯಲ್ಲಿ ಈ ಘಟನೆ ನಡೆದಿದ್ದು, ಕಲಬುರ್ಗಿ ಅವರ ಹಣೆಯ ಮೇಲೆ ಕೂಡ ಗುಂಡು ಬಿದ್ದಿದೆ. ಗುಂಡಿನ ದಾಳಿ ನಡೆಸಿರುವವರ ಬಗ್ಗೆ ಇನ್ನು ಹೆಚ್ಚು ಮಾಹಿತಿ ಹೊರಬಿದ್ದಿಲ್ಲ.

ದೇಶದ ಖ್ಯಾತ ಸಂಶೋಧಕರಾಗಿದ್ದ ಡಾ.ಎಂ ಎಂ ಕಲಬುರ್ಗಿ ಅವರು 1938ರ ನವೆಂಬರ್ 28ರಂದು ಬಿಜಾಪುರ ಜಿಲ್ಲೆ ಸಿಂದಗಿ ತಾಲೂಕಿನ ಗುಬ್ಬೇವಾಡದಲ್ಲಿ ಜನಿಸಿದ್ದರು. ಕಲಬುರ್ಗಿ ಅವರ ತಂದೆ ಮಡಿವಾಳಪ್ಪ, ತಾಯಿ ಗುರವ್ವ. ಕನ್ನಡ ಸಂಸ್ಕೃತಿ, ಇತಿಹಾಸ, ಸಾಹಿತ್ಯ, ಶಾಸನ, ಜಾನಪದ, ವ್ಯಾಕರಣ, ಹಸ್ತ ಪ್ರತಿಶಾಸ್ತ್ರ, ಗ್ರಂಥ ಸಂಪಾದನಾಶಾಸ್ತ್ರ, ಛಂದಸ್ಸು ಸೇರಿ ಹಲವಾರು ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಿದ್ದಾರೆ.

ಸಾಹಿತ್ಯ ಮಾರ್ಗಕ್ಕಿಂತ ಸಂಶೋಧನಾ ಮಾರ್ಗವನ್ನು ಆಯ್ಕೆ ಮಾಡಿದ ಅವರು 1962ರಲ್ಲಿ ಕರ್ನಾಟಕ ವಿವಿ ಕನ್ನಡ ಅಧ್ಯಾಪಕರಾಗಿ ವೃತ್ತಿ ಮಾಡಿದ್ದರು. ಅಧ್ಯಾಪಕರಾಗಿ ಗ್ರಂಥ ಸಂಪಾದನಾ ಶಾಸ್ತ್ರ ಬೋಧಿಸಿದ್ದರು. ಹಂಪಿಯಲ್ಲಿನ ಕನ್ನಡ ವಿವಿ ಕುಲಪತಿಗಳಾಗಿಯೂ ಸೇವೆ ಸಲ್ಲಿಸಿದ ಕಲಬುರ್ಗಿ ಅವರ ಮೊದಲ ಕೃತಿ 'ಬಸವಣ್ಣನವರನ್ನು ಕುರಿತ ಶಾಸನಗಳು'. 41 ಪ್ರಾಚೀನ ಗ್ರಂಥ ಸಂಪಾದನೆ ಹಾಗೂ 100 ಕೃತಿಗಳ ರಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com