ನ್ಯೂರಾಲಜಿಸ್ಟ್, ಲೇಖಕ ಆಲಿವರ್ ಸ್ಯಾಕ್ಸ್ ನಿಧನ

ವಿಶ್ವವಿಖ್ಯಾತ ಬ್ರಿಟಿಶ್ ನ್ಯೂರಾಲಜಿಸ್ಟ್ ಮತ್ತು ಜನಪ್ರಿಯ ಬರಹಗಾರ ಆಲಿವರ್ ಸ್ಯಾಕ್ಸ್ ಅವರು ತಮ್ಮ ೮೨ ನೆಯ ವಯಸ್ಸಿನಲ್ಲಿ ಕ್ಯಾನ್ಸರ್ ನಿಂದ ನಿಧನರಾಗಿದ್ದಾರೆ.
ನ್ಯೂರಾಲಜಿಸ್ಟ್, ಲೇಖಕ ಆಲಿವರ್ ಸ್ಯಾಕ್ಸ್ ನಿಧನ
ನ್ಯೂರಾಲಜಿಸ್ಟ್, ಲೇಖಕ ಆಲಿವರ್ ಸ್ಯಾಕ್ಸ್ ನಿಧನ

ಲಂಡನ್: ವಿಶ್ವವಿಖ್ಯಾತ ಬ್ರಿಟಿಶ್ ನ್ಯೂರಾಲಜಿಸ್ಟ್ ಮತ್ತು ಜನಪ್ರಿಯ ಬರಹಗಾರ ಆಲಿವರ್ ಸ್ಯಾಕ್ಸ್ ಅವರು ತಮ್ಮ ೮೨ ನೆಯ ವಯಸ್ಸಿನಲ್ಲಿ ಕ್ಯಾನ್ಸರ್ ನಿಂದ ನಿಧನರಾಗಿದ್ದಾರೆ.

ಇವರ ೧೯೭೩ ರ 'ಅವೇಕನಿಂಗ್ಸ್' ಪುಸ್ತಕ ಭಾರಿ ಜನಪ್ರಿಯತೆ ಪಡೆದಿತ್ತು. ನಿದ್ರಾಹೀನತೆಯಿಂದ ಬಳಲುವ ರೋಗಿಗಳ ಬಗೆಗಿನ ಪುಸ್ತಕ ಅದಾಗಿತ್ತು. ರಾಬಿನ್ ವಿಲಿಯಮ್ಸ್ ಮತ್ತು ರಾಬರ್ಟ್ ಡಿ ನಿರೋ ಅಭಿನಯದ ಇದೇ ಹೆಸರಿನ ಆಸ್ಕರ್ ವಿಜೇತ ಚಲನಚಿತ್ರಕ್ಕೂ ಈ ಪುಸ್ತಕ ಸ್ಫೂರ್ತಿಯಾಗಿತ್ತು.

ಮನೋರೋಗಿ ಸಂಬಂಧದ ಹಲವಾರು ಪುಸ್ತಕಗಳನ್ನು ಬರೆದಿದ್ದಲ್ಲದೆ, ಕಳೆದ ವರ್ಷ ತಮ್ಮ ಕ್ಯಾನ್ಸರ್ ಮತ್ತು ಪಾರ್ಶ್ವ ಕುರುಡುತನದ ಅನುಭವಗಳನ್ನು ಬರೆದಿದ್ದರು.

ಆಲ್ಬರ್ಟ್ ಐನ್ಸ್ಟೈನ್ ವೈದ್ಯಕೀಯ ಕಾಲೇಹು, ಕೊಲಂಬಿಯಾ ವಿಶ್ವವಿದ್ಯಾಲಯ ಮತ್ತು ನ್ಯೂಯಾರ್ಕ್ ವಿಶ್ವವಿದ್ಯಾಲಯಗಳಲ್ಲಿ ಪ್ರೊಫೆಸರ್ ಆಗಿ ಕೆಲಸ ನಿರ್ವಹಿಸಿ ಹಲವಾರು ಸಂಶೋಧನೆಗೆ ಇವರು ಕಾರಣರಾಗಿದ್ದರು.

'ಮೈಗ್ರೇನ್' ಇವರ ಇನ್ನೊಂದು ಜನಪ್ರಿಯ ಕೃತಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com