
ಗೌಹಾಟಿ: ಶೀನಾ ಬೋರಾ ಮತ್ತು ಮಿಖೈಲ್ ಬೋರಾ, ಸಿದ್ದಾರ್ಥ್ ದಾಸ್ ಮತ್ತು ಇಂದ್ರಾಣಿ ಮುಖರ್ಜಿ ಅವರ ಮಕ್ಕಳು ಎಂದು ಸಿದ್ಧಾರ್ಥ ಅವರ ತಾಯಿ ತಿಳಿಸಿದ್ದಾರೆ. ಆದರೆ ತಮ್ಮ ಮಗ ಎಲ್ಲಿದ್ದಾನೆ ಎಂಬುದು ತಿಳಿದಿಲ್ಲ ಎಂದಿದ್ದಾರೆ.
"ಶೀನಾ ಮತ್ತು ಮಿಖೈಲ್, ಬಾಬುಲ್ (ಸಿದ್ಧಾರ್ಥ) ಮತ್ತು ಪಾರಿ (ಇಂದ್ರಾಣಿ) ಮಕ್ಕಳು. ಶೀನಾಳ ಮೊದಲ ವರ್ಷದ ಹುಟ್ಟುಹಬ್ಬವನ್ನು ನಮ್ಮ ಮನೆಯಲ್ಲೇ ಆಚರಿಸಲಾಗಿತ್ತು" ಎಂದು ೭೦ ವರ್ಷದ ಸರ್ಕಾರಿ ನೌಕರಿಯಲ್ಲಿದ್ದು ನಿವೃತ್ತರಾಗಿರುವ ಮಾಯಾರಾಣಿ ದಾಸ್ ತಿಳಿಸದಿದ್ದರೆ.
"ಸಿದ್ಧಾರ್ಥ ಮತ್ತು ಇಂದ್ರಾಣಿ ಗೌಹಾಟಿಯಲ್ಲಿ ಮೂರು ವರ್ಷ ಒಟ್ಟಿಗಿದ್ದರು. ನಂತರ ಅವರ ಸಂಬಂಧ ಮುರಿದು ಬಿದ್ದಿತು. ಅವನು ಅರುಣಾಚಲ ಪ್ರದೇಶಕ್ಕೆ ಹೋಗಿ ಮತ್ತೊಂದು ಸಂಸ್ಥೆಯಲ್ಲಿ ಕೆಲಸ ಮಾಡಲು ತೊಡಗಿದ" ಎಂದು ಅವರು ಹೇಳಿದ್ದಾರೆ.
ಹೆತ್ತ ಮಗಳಾದ ಶೀನಾಳನ್ನೆ ಕೊಂದ ಆರೋಪದ ಮೇಲೆ ಇಂದ್ರಾಣಿ ಅವರನ್ನು ಸದ್ಯಕ್ಕೆ ವಿಚಾರಣೆಗೊಳಪಡಿಸಲಾಗಿದೆ.
Advertisement