ಹುಚ್ಚ ವೆಂಕಟ್ (ಸಂಗ್ರಹ ಚಿತ್ರ)
ಹುಚ್ಚ ವೆಂಕಟ್ (ಸಂಗ್ರಹ ಚಿತ್ರ)

ಜೈಲಿನಿಂದ ಬಿಡುಗಡೆಯಾದ ನಂತರ ನಾನು ಹುಚ್ಚನಲ್ಲವೆಂದು ಕಣ್ಣೀರಿಟ್ಟ ಹುಚ್ಚ ವೆಂಕಟ್

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದ...

ಬೆಂಗಳೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದ ಬಿಗ್‌ಬಾಸ್ ಖ್ಯಾತಿಯ ನಟ ಹುಚ್ಚ ವೆಂಕಟ್ ಬುಧವಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಬಿಡುಗಡೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವೆಂಕಟ್, ನಾನು ಹುಚ್ಚನಲ್ಲ ಎಂದು ಕಣ್ಣೀರಿಟ್ಟರು. ಅಲ್ಲದೆ ತನಗೆ ಶ್ಯೂರಿಟಿ ನೀಡಲು ನಿರಾಕರಿಸಿದ ತನ್ನ ಅಣ್ಣ ಕುಶಾಲ್‌ಬಾಬು ವಿರುದ್ಧ ಕೇಸ್ ದಾಖಲಿಸುವುದಾಗಿ ಹೇಳಿದರು.

ಕುಟುಂಬದವರೂ ಸಹ ನನ್ನನ್ನು ವಿಚಾರಿಸಲು ಬರಲಿಲ್ಲ ಎಂದು ತನ್ನ ಕುಟುಂಬದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಹುಚ್ಚ ವೆಂಕಟ್, ನನ್ನ ಕುಟುಂಬದಲ್ಲಿ ಆಸ್ತಿ ವಿವಾದವಿದ್ದು, ಈ ಸಂಬಂಧ ಅಣ್ಣನ ವಿರುದ್ಧ ಕೇಸ್ ಹಾಕುತ್ತೇನೆ ಎಂದರು.

ಇನ್ನು ತನಗೆ ಶ್ಯೂರಿಟಿ ನೀಡಿ, ಜೈಲಿನಿಂದ ಕರೆದಂತ ಹಾಸನ ಮೂಲದ ಮಂಜೇಗೌಡರ ಕಾಲಿಗೆ ಬಿದ್ದು ವೆಂಕಟ್ ಕೃತಜ್ಞತೆ ಸಲ್ಲಿಸಿದರು.

ಇದೇ ವೇಳೆ ಅಂಬೇಡ್ಕರ್ ವಿರುದ್ಧ ಹೇಳಿಕೆ ಸ್ಪಷ್ಟನೆ ನೀಡಿದ ಹುಚ್ಚ ವೆಂಕಟ್, ನಾನು ದಲಿತರ ವಿರೋಧಿಯಲ್ಲ. ಅವರು ನನ್ನ ಸಹೋದರರು ಇದ್ದಂತೆ. ನನ್ನಿಂದ ತಪ್ಪಾಗಿದ್ದರೆ ಅವರ ಕಾಲಿಗೆ ಬಿದ್ದು ಕ್ಷಮೆಯಾಚಿಸುವೆ ಎಂದರು.

ನವೆಂಬರ್ 19ರಂದು ಅಂಬೇಡ್ಕರ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಞಾನಭಾರತಿ ಠಾಣೆ ಪೊಲೀಸರು ವೆಂಕಟ್‌ನನ್ನು  ಬಂಧಿಸಿದ್ದರು. ಬಳಿಕ ವೆಂಬರ್ 25ರಂದು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ವೆಂಕಟ್‌ಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಆದರೆ, ಶ್ಯೂರಿಟಿ ಸಲ್ಲಿಸದಿರುವ ಕಾರಣ ಅವರು ಇನ್ನೂ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು.

Related Stories

No stories found.

Advertisement

X
Kannada Prabha
www.kannadaprabha.com