೧೯೮೪ ಸಿಖ್ ವಿರೋಧಿ ಗಲಭೆ; ಟೈಟ್ಲರ್ ವಿರುದ್ಧ ಮರು ತನಿಖೆಗೆ ದೆಹಲಿ ಕೋರ್ಟ್ ಆದೇಶ

೧೯೮೪ರ ಸಿಖ್ ವಿರೋಧಿ ಗಲಭೆಯಲ್ಲಿ ಕಾಂಗ್ರೆಸ್ ಮುಖಂಡ ಜಗದೀಶ್ ಟೈಟ್ಲರ್ ಭಾಗಿಯಾಗಿದ್ದ ಆರೋಪವನ್ನು ತನಿಖೆ ಮಾಡಿ ಕ್ಲೀನ್ ಚಿಟ್ ಕೊಟ್ಟಿದ್ದ ಸಿ ಬಿ ಐ ಆದೇಶವನ್ನು ನಿರಾಕರಿಸಿರುವ
ಕಾಂಗ್ರೆಸ್ ಮುಖಂಡ ಜಗದೀಶ್ ಟೈಟ್ಲರ್
ಕಾಂಗ್ರೆಸ್ ಮುಖಂಡ ಜಗದೀಶ್ ಟೈಟ್ಲರ್

ನವದೆಹಲಿ: ೧೯೮೪ರ ಸಿಖ್ ವಿರೋಧಿ ಗಲಭೆಯಲ್ಲಿ ಕಾಂಗ್ರೆಸ್ ಮುಖಂಡ ಜಗದೀಶ್ ಟೈಟ್ಲರ್ ಭಾಗಿಯಾಗಿದ್ದ ಆರೋಪವನ್ನು ತನಿಖೆ ಮಾಡಿ ಕ್ಲೀನ್ ಚಿಟ್ ಕೊಟ್ಟಿದ್ದ ಸಿ ಬಿ ಐ ಆದೇಶವನ್ನು ನಿರಾಕರಿಸಿರುವ ದೆಹಲಿ ಕೋರ್ಟ್ ಶುಕ್ರವಾರ ಮರು ತನಿಖೆಗೆ ಆದೇಶಿಸಿದೆ.

ಸಿಬಿಐನ ವರದಿಯನ್ನು ಒಪ್ಪಿಕೊಳ್ಳಲು ನಿರಾಕರಿಸಿದ ಹೆಚ್ಚಿವರಿ ಮುಖ್ಯ ಮೆಟ್ರೊಪಾಲಿಟನ್ ಮೆಜಿಸ್ಟ್ರೆಟ್ ಎಸ್ ಪಿ ಎಸ್ ಲಾಲ್ ಅವರು ೩೦೦೦ ಜನ ಸಿಖ್ ಸಮುದಾಯದವರನ್ನು ಮಾರಣ ಹೋಮ ಮಾಡಿದ ಈ ಗಲಭೆಯಲ್ಲಿ ಟೈಟ್ಲರ್ ಪಾತ್ರವನ್ನು ಮರು ತನಿಖೆ ಮಾಡುವಂತೆ ಸಿಬಿಐಗೆ ಸೂಚಿಸಿದ್ದಾರೆ.

೧೯೮೪ರ ಸಿಖ್ ವಿರೋಧಿ ಗಲಭೆಗಳಲ್ಲಿ ಪಲ್ಬನ್ಸಂಗ್ ನ ಗುರುದ್ವಾರದ ಮೇಲಿನ ದಾಳಿಯಲ್ಲಿ ಟೈಟ್ಲರ್ ಭಾಗಿಯಾಗಿರಲಿಲ್ಲ ಎಂದು ಈ ಹಿಂದೆ ಸಿಬಿಐ ತನಿಖೆಯ ವರದಿಯಲ್ಲಿ ತಿಳಿಸಿತ್ತು. ಈ ಗಲಭೆಯ ವೇಳೆಯಲ್ಲಿ ೧೯೮೪ ನವೆಂಬರ್ ೧ ರಂದು ಟೈಟ್ಲರ್ ಅವರು, ಮೂರು ಜನ ಸಿಖ್ಖರು ಹತ್ಯೆಯಾದ ಗುರುದ್ವಾರದ ಬಳಿಯಿರಲಿಲ್ಲ ಬದಲಾಗಿ ತೀನ್ ಮೂರ್ತಿ ಭವನದ ಬಳಿ ಇಂದಿರಾಗಾಂಧಿ ಅವರ ಕಳೇಬರದ ಬಳಿ ಇದ್ದರು ಎಂದು ಸಾಬೀತಾಗಿದೆ ಎಂದು ತಿಳಿಸಿ ಟೈಟ್ಲರ್ ಅವರಿಗೆ ಕ್ಲೀನ್ ಚಿಟ್ ನೀಡಿತ್ತು. ಇದನ್ನು ಪ್ರಶ್ನಿಸಿ ಗಲಭೆಯ ಸಂಸ್ತ್ರಸ್ತರೊಬ್ಬರು ಕೋರ್ಟ್ ಮೊರೆ ಹೋಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com