ಚೆನ್ನೈ ಬಸ್
ಚೆನ್ನೈ ಬಸ್

ಚೆನ್ನೈ ಜಲಪ್ರಳಯ: 4 ದಿನಗಳ ಕಾಲ ಎಂಟಿಸಿ ಬಸ್ ಉಚಿತ ಸೇವೆ

ಮಳೆಯಿಂದ ನಲುಗಿಹೋಗಿರುವ ಚೆನ್ನೈನಲ್ಲಿ ಜನರಿಗೆ ಒಂದೂರಿನಿಂದ ಇನ್ನೊಂದು ಊರಿಗೆ ಹೋಗುವುದಕ್ಕೆ ನೆರವಾಗಲು ಎಂಟಿಸಿ ಬಸ್ ಉಚಿತ ಸೇವೆ ಆರಂಭಿಸಿದೆ...
ಚೆನ್ನೈ: ಮಳೆಯಿಂದ ನಲುಗಿಹೋಗಿರುವ ಚೆನ್ನೈನಲ್ಲಿ ಜನರಿಗೆ ಒಂದೂರಿನಿಂದ ಇನ್ನೊಂದು ಊರಿಗೆ ಹೋಗುವುದಕ್ಕೆ ನೆರವಾಗಲು ಎಂಟಿಸಿ ಬಸ್ ಉಚಿತ ಸೇವೆ ಆರಂಭಿಸಿದೆ.
ಡಿಸೆಂಬರ್ 5ರಿಂದ ನಾಲ್ಕು ದಿನಗಳ ಕಾಲ ಅಂದರೆ 8 ನೇ ತಾರೀಖಿನ ವರೆಗೆ ಎಂಟಿಸಿ ಬಸ್ ಉಚಿತ ಸೇವೆ ಕಲ್ಪಿಸಲಿದೆ ಎಂದು ತಮಿಳ್ನಾಡು ಸರ್ಕಾರ ಹೇಳಿದೆ. 
ಚೆನ್ನೈ, ಕಾಂಜೀಪುರಂ, ತಿರುವಲ್ಲೂರ್ ಸೇರಿದಂತೆ ಇನ್ನು ಕೆಲವು ಪ್ರದೇಶಗಳಲ್ಲೀಗ ಮಳೆಯ ತೀವ್ರತೆ ಕಡಿಮೆಯಾಗಿದೆ. ಇಂದು ಶೇ. 65ರಷ್ಟು ಬಸ್‌ಗಳು ಸಂಚಾರ ಪುನರಾರಂಭಿಸಲಿದ್ದು, ಶೇ. 80ರಷ್ಟು ವಿದ್ಯುತ್ ಸಂಪರ್ಕ ನೀಡಲಾಗುವುದು ಎಂದು ತಮಿಳ್ನಾಡು ಮುಖ್ಯಮಂತ್ರಿ ಜಯಲಲಿತಾ ಹೇಳಿದ್ದಾರೆ.
ಅದೇ ವೇಳೆ ನೀರಿನಿಂದಾವೃತವಾದ ಪ್ರದೇಶಗಳಲ್ಲಿ ಬಸ್ ಸಂಚಾರ ನಡೆಸಿದ್ದ ಎಂಟಿಸಿ ಬಸ್‌ಗಳಲ್ಲಿ ಹೆಚ್ಚಿನ ಬಸ್‌ಗಳು ಹಾನಿಯಾಗಿವೆ ಎಂದು ಎಂಟಿಸಿ ಅಧಿಕೃತರು ಹೇಳಿದ್ದಾರೆ. 
ವಿಮಾನ ಹಾರಾಟ ಆರಂಭ
ಮಳೆಯ ಪ್ರಮಾಣ ಅಲ್ಪ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಚೆನ್ನೈ ವಿಮಾನ ನಿಲ್ದಾಣದಿಂದ ಕೆಲವೇ ಕೆಲವು ವಿಮಾನಗಳು ಹಾರಾಟ ನಡೆಸಲಿವೆ. ಟೆಕ್ನಿಕಲ್ ವಿಮಾನಗಳು ಮಾತ್ರ ಇಲ್ಲಿಂದ ಹಾರಾಟ ನಡೆಸಲಿವೆ. ಏರ್ ಇಂಡಿಯಾ ಸೇರಿದಂತೆ ಇನ್ನು ಕೆಲವು ಖಾಸಗಿ ವಿಮಾನ ಕಂಪನಿಗಳ ಏಳು ವಿಮಾನಗಳು ಇಂದು ರಾಜಾಲಿ ನೌಕಾದಳದ ಏರ್ ಸ್ಟೇಷನ್ ನಿಂದ ಸರ್ವೀಸ್ ಆರಂಭಿಸಿದೆ ಎಂದು ವರದಿಯಾಗಿದೆ. ಅದೇ ವೇಳೆ ರೈಲು ಸಂಚಾರ ಆರಂಭಿಸುವುದಿಲ್ಲ ಎಂದು ಅಧಿಕೃತರು ಹೇಳಿದ್ದಾರೆ. 
ಕೇರಳದಿಂದಲೂ ಉಚಿತ ಬಸ್ ಸೇವೆ 
ಕೇರಳದ ಕೆಎಸ್‌ಆರ್‌ಟಿ ಬಸ್ಸುಗಳು ಚೆನ್ನೈನಿಂದ ಕೇರಳಕ್ಕೆ ಉಚಿತ ಬಸ್ ಸೌಕರ್ಯ ಕಲ್ಪಿಸಿದೆ. ಚೆನ್ನೈನಿಂದ ತಿರುವನಂತಪುರಂ ಮತ್ತು ತ್ರಿಶ್ಶೂರಿಗೆ ಒಂದು ಗಂಟೆಯ ಅಂತರದಲ್ಲಿ ಬಸ್ ಸೇವೆ ಲಭ್ಯವಾಗಲಿದೆ.

Related Stories

No stories found.

Advertisement

X
Kannada Prabha
www.kannadaprabha.com