ಎಚ್ ಡಿ ಕುಮಾರಸ್ವಾಮಿ- ಸಿದ್ದರಾಮಯ್ಯ
ಪ್ರಧಾನ ಸುದ್ದಿ
ಕೈ, ಜೆಡಿಎಸ್‍ಗೆ ಭಿನ್ನತೆಯ ಬಿಸಿ
ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿ ಸಲು ಕೇವಲ ಮೂರು ದಿನಗಳಷ್ಟೇ ಬಾಕಿ ಉಳಿದಿದ್ದು, ಹೋರಾಟದ ಕಣ ರಂಗೇರತೊಡಗಿದೆ...
ಬೆಂಗಳೂರು: ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೇವಲ ಮೂರು ದಿನಗಳಷ್ಟೇ ಬಾಕಿ ಉಳಿದಿದ್ದು, ಹೋರಾಟದ ಕಣ ರಂಗೇರತೊಡಗಿದೆ. ಮೂರೂ ರಾಜಕೀಯ ಪಕ್ಷಗಳ ಹುರಿ ಯಾಳುಗಳ ಆಯ್ಕೆ ಪ್ರಕ್ರಿಯೆ ಬಹುತೇಕ ಮುಗಿದಿದ್ದು, ಆರಂಭದಲ್ಲೇ ಆಡಳಿತ ಪಕ್ಷ ಕಾಂಗ್ರೆಸ್ ಬಂಡಾಯದ ಬಿಸಿಗೆ ತುತ್ತಾಗಿದೆ.
ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧ್ಯವಿರುವ 21 ಸ್ಥಾನಗಳ ಪೈಕಿ 20 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಪ್ರತಿಪಕ್ಷ ಬಿಜೆಪಿ ಕೂಡ 20 ಹುರಿಯಾಳುಗಳ ಪಟ್ಟಿ ಪ್ರಕಟಿಸಿದೆ. ಹಾಗೆಯೇ ಜೆಡಿಎಸ್ 12 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಹೀಗೆ ಮೂರು ಪಕ್ಷಗಳು ಸ್ಪರ್ಧಾಳುಗಳನ್ನು ಸಜ್ಜುಗೊಳಿಸಿದ್ದು, ಹೋರಾಟಕ್ಕೆ ಧುಮುಕುವುದಷ್ಟೇ ಬಾಕಿ ಇದೆ. ಇಂಥ ಸಂದರ್ಭದಲ್ಲಿ ಕಾಂಗ್ರೆಸ್ ಒಂದು ಕಡೆ ಅಭ್ಯರ್ಥಿ ಆಯ್ಕೆಯಲ್ಲಿ ಇಕ್ಕಟ್ಟಿಗೆ ಸಿಲುಕಿದ್ದರೆ, ರಾಜಧಾನಿ ಬೆಂಗಳೂರು ಸೇರಿದಂತೆ ಎರಡು ಜಿಲ್ಲೆಗಳಲ್ಲಿ ಬಂಡಾಯದ ಬಿಸಿ ಎದುರಿಸುವುದು ಅನಿವಾರ್ಯವಾಗಿದೆ.
ಬೆಂಗಳೂರು ನಗರ ಕ್ಷೇತ್ರ ಟಿಕೆಟ್ ವಂಚಿತರಾದ ಹಾಲಿ ಸದಸ್ಯ ದಯಾನಂದ ರೆಡ್ಡಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಅದೇ ರೀತಿ ದಕ್ಷಿಣ ಕನ್ನಡದಿಂದ ಸ್ಪರ್ಧೆ ಬಯಸಿ, ಟಿಕೆಟ್ ವಂಚಿತರಾಗಿರುವ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಕೂಡ ಸ್ವತಂತ್ರವಾಗಿ ಸ್ಪರ್ಧಿಸುವ ನಿರ್ಧಾರ ಪ್ರಕಟಿಸಿದ್ದಾರೆ. ತುಮಕೂರಿನಿಂದ ಬಿಜೆಪಿ ಅಭ್ಯರ್ಥಿಯಾಗಿ ಜೆಡಿಎಶ್ ಹಾಲಿ ಸದಸ್ಯ ಹುಲಿನಾಯ್ಕರ್ ಸ್ಪರ್ಧಿಸಲಿದ್ದಾರೆ.
ಚಿಕ್ಕಬಳ್ಳಾಪುರ- ಕೋಲಾರ ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ, ಮಾಜಿ ಸಚಿವ ಕೆ.ಎಚ್. ಮುನಿಯಪ್ಪ, ಶಾಸಕ ರಮೇಶ್ ಕುಮಾರ್, ಹಿರಿಯ ನಾಯಕ ಆರ್.ಎಲ್. ಜಾಲಪ್ಪ ಸೇರಿದಂತೆ ಅನೇಕ ನಾಯಕರು ತಮ್ಮವರಿಗೇ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿರುವುದರಿಂದ ಗೊಂದಲ ವಿಪರೀತಕ್ಕೆ ಹೋಗಿದೆ.
ಇಲ್ಲಿನ ಆಕಾಂಕ್ಷಿಗಳಲ್ಲಿ ಯಾರಿಗೇ ಟಿಕೆಟ್ ನೀಡಿದರೂ ಬಂಡಾಯದ ಎದುರಾಗುವ ಸಾಧ್ಯತೆ ಕಾಣುತ್ತಿದೆ. ಇದನ್ನು ಹೇಗೆ ಸರಿಪಡಿಸಬೇಕೆಂದು ಕೆಪಿಸಿಸಿ ಅಧ್ಯಕ್ಷರು ಮತ್ತು ಮುಖ್ಯಮಂತ್ರಿ ಅವರು ಚಿಂತೆಗೆ ಬಿದ್ದಿದ್ದಾರೆ. ಇದೇ ರೀತಿ ಬಳ್ಳಾರಿ, ಮಂಡ್ಯ, ಕೋಲಾರ ಮತ್ತು ತುಮಕೂರಿನಲ್ಲೂ ಬಂಡಾಯ ಚಟುವಟಿಕೆಗಳು ಗರಿಗೆದರುವ ಸಾಧ್ಯತೆಗಳಿವೆ.
ಒಂದೊಮ್ಮೆ ಬಂಡಾಯ ಅಭ್ಯರ್ಥಿಗಳು ಕಣಕ್ಕಿಳಿದಿದ್ದೇ ಆದರೆ ಕಾಂಗ್ರೆಸ್‍ಗೆ ಹಿನ್ನಡೆಯಾಗುವುದು ಖಚಿತ. ಪಕ್ಷದೊಳಗಿನ ಬಂಡಾಯ ಬಿಜೆಪಿ ಅಥವಾ ಜೆಡಿಎಸ್ ಅಭ್ಯರ್ಥಿಗಳಿಗೆ ಲಾಭವಾಗುವ ಸಂಭವ ಹೆಚ್ಚು. ಆದರೂ ಸೋಮವಾರದ ವೇಳೆಗೆ ಈ ಗೊಂದಲ ನಿವಾರಿಸಲಾಗುತ್ತದೆ. ಜತೆಗೆ ಅಸಮಾಧಾನಿತರೊಂದಿಗೆ ಚರ್ಚಿಸಿ ಸಮಾಧಾನಗೊಳಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬಿಜೆಪಿ ಹೋರಾಟಕ್ಕೆ ರೆಡಿ
ಬಿಜೆಪಿ ಈಗಾಗಲೇ 12 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಭಾನುವಾರ ಮತ್ತೆ 8 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಕಾಂಗ್ರೆ¸, ಜೆಡಿಎಸ್‍ನಲ್ಲಿ ಟಿಕೆಟ್ ವಂಚಿತರಿಗೆ ಗಾಳ ಹಾಕುವ ಪ್ರಯತ್ನದಲ್ಲಿ ಬಿಜೆಪಿ ಯಶಸ್ವಿಯಾಗಿದೆ. ತುಮಕೂರಿ- ನಿಂದ ಜೆಡಿಎಸ್ ಟಿಕೆಟ್ ವಂಚಿತರಾಗಿದ್ದ ಹಾಲಿ ಸದಸ್ಯ ಡಾ.ಹುಲಿನಾಯ್ಕರ್ ಗೆ ಬಿಜೆಪಿ ಅವಕಾಶ ಕಲ್ಪಿಸಿದೆ. ಇದರೊಂದಿಗೆ ಅಭ್ಯರ್ಥಿ ಆಯ್ಕೆ ಅಭ್ಯರ್ಥಿ ಆಯ್ಕೆ ಮಾಡುವ ಬಿಜೆಪಿ ಕಸರತ್ತು ಮುಕ್ತಾಯವಾದಂತಾಗಿದ್ದು, ಸೋಮವಾರದಿಂದ ನಾಮಪತ್ರ ಸಲ್ಲಿಕೆ ಕಾರ್ಯಾರಂಭದ ಮೂಲಕ ಹೋರಾಟಕ್ಕೆ ಧುಮುಕಲಿದೆ.
ತಪ್ಪಿದ ಜೆಡಿಎಸ್ ಲೆಕ್ಕಾಚಾರ: ಇವೆರಡು ಪಕ್ಷಗಳ ಮೈತ್ರಿಯೇ ಬೇಡ ಎಂದು ಹೇಳುತ್ತಾ ಹೋರಾಟಕ್ಕಿಳಿಯುತ್ತಿರುವ ಜೆಡಿಎಸ್ ಭಾನುವಾರ 13 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಿದೆ. ಹಾಲಿ ಇರುವ 5 ಸ್ಥಾನಗಳ ಪೈಕಿ 4 ಕಡೆ ಹಿಂದಿನ ಸದಸ್ಯರಿಗೇ ಅವಕಾಶ ನೀಡಿರುವ ಜೆಡಿಎಸ್ ಒಂದು ಕಡೆ ಮಾತ್ರ ಹಾಲಿ ಸದಸ್ಯರಿಗೆ ಕೈ ಕೊಟ್ಟಿದೆ. ತುಮಕೂರು ಜಿಲ್ಲೆಯಿಂದ ಹುಲಿನಾಯ್ಕರ್‍ಗೆ ಟಿಕೆಟ್ ನೀಡದೆ, ಬೆಮೆಲ್ ಕೃಷ್ಣಪ್ಪ ಪುತ್ರ ಕಾಂತರಾಜ್ ಗೆ ಅಕಾಶ ನೀಡಲಾಗಿದೆ. ಇದರಿಂದಾಗಿ ಹುಲಿನಾಯ್ಕರ್ ತಕ್ಷಣ ಬಿಜೆಪಿಗೆ ಜಿಗಿದಿದ್ದು, ಇದು ಜೆಡಿಎಸ್ ಗೆ ಒಂದು ರೀತಿಯತಲ್ಲಿ ಹಿನ್ನಡೆಯಾಗಲಿದೆ.
ಜೆಡಿಎಸ್ ಅನೇಕ ಕಡೆ ಉದ್ಯಮಿಗಳಿಗೇ ಅವಕಾಶ ನೀಡಿರುವುದು ಪಕ್ಷದೊಳಗೆ ಕೊಂಚ ಕಸಿವಿಸಿ ತಂದಿದೆ. ಶಿವಮೊಗ್ಗ, ಮಂತಡ್ಯ, ಬೆಳಗಾವಿ ಜಿಲ್ಲಿಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ವಿಚಾರದಲ್ಲಿ ಇನ್ನೂ ಹಗ್ಗಜಗ್ಗಾಟ ನಡೆಯುತ್ತಿದೆ. ಒಟೇಟಿ 15 ಸ್ಥಾನಗಳಲ್ಲಿ ಗಂಭೀರ ಸ್ಪರ್ಧೆ ನಡೆಸುತ್ತಿರುವ ಜೆಡಿಎಸ್ ಕೆಲವು ಕಾಂಗ್ರೆಸ್ ಮತ್ತು ಬಿಜೆಪಿಗೆ ಪರೋಕ್ಷವಾಗಿ ಬೆಂಬಲ ನೀಡಿ ಸ್ಥಳೀಯವಾಗಿ ಪಕ್ಷಕ್ಕೆ ಲಾಭ ತಂದುಕೊಳ್ಳಲು ತಂತ್ರ ರೂಪಿಸಿದೆ. ಬಿಜೆಪಿ ಅಂತಿಮ ಪಟ್ಟಿ ಮಂಡ್ಯ ನಾಗಣ್ಣಗೌಡ ಬೆಂಗಳೂರು ಗ್ರಾ. ಹನುಮಂತೇಗೌಡ ಬೆಂಗಳೂರು ನಗರ ದೊಡ್ಡಬಸವರಾಜು ಬೀದರ್ ಸಂಜಯï ಖೇಣಿ ಬಳ್ಳಾರಿ ಚನ್ನಬಸವನಗೌಡ ಹಾಸನ ರೇಣುಕುಮಾರ್ ತುಮಕೂರು ಹುಲಿ ನಾಯ್ಕರ್ ಕೋಲಾರ ರಾಮೇಗೌಡ ದಕ್ಷಿಣ ಕನ್ನಡ ಪ್ರವೀಣ್‍ಚಂದ್ರ ಜೈನ್ ಜೆಡಿಎಸ್‍ನ ಮೊದಲ ಪಟ್ಟಿ ಉತ್ತರ ಕನ್ನಡ ರವಿಕುಮಾರ್ ಕೊಡಗು ನರೇಶ್‍ಕುಮಾರ್ ಮೈಸೂರು ಸಂದೇಶ್ ನಾಗರಾಜ್ ಕೋಲಾರ ಸಿ.ಆರ್. ಮನೋಹರ್ ಹಾಸನ ಪಟೇಲ್ ಶಿವರಾಮ್ ತುಮಕೂರು ಕಾಂತರಾಜ್ ಚಿಕ್ಕಮಗಳೂರು ಅಜಿತ್‍ಕುಮಾರ್ ಬೆಂಗಳೂರು ಗ್ರಾ. ಇ. ಕೃಷ್ಣಪ್ಪ ದಕ್ಷಿಣ ಕನ್ನಡ ಎಸ್. ಪ್ರಕಾಶ್ ಶೆಟ್ಟಿ ಚಿತ್ರದುರ್ಗ ಎಲ್. ಸೋಮಣ್ಣ ಕಲಬುರಗಿ ದೇವೇಗೌಡ ತೆಲ್ಲೂರು ಶಿವಮೊಗ್ಗ ಎಚ್.ಎನ್. ನಿರಂಜನ್
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ