ವಿಶೇಷ ಎಕ್ಸ್'ಮಸ್ ಪೀಠಕ್ಕೆ ಮುಖ್ಯ ನ್ಯಾಯಾಧೀಶರ ಪ್ರಸ್ತಾವನೆ

ಮುಂದಿನ ವಾರದಿಂದ ಪ್ರಾರಂಭವಾಗುವ ಕ್ರಿಸ್ಮಸ್ ರಜೆಯ ವೇಳೆಯಲ್ಲಿ ಜಾಮೀನು ಮತ್ತಿತ್ಯಾದಿ ತುರ್ತು ವಿಚಾರಣೆಗಳನ್ನು ಆಲಿಸುವುದಕ್ಕೆ ವಿಶೇಷ ಪೀಠದ ಸ್ಥಾಪನಗೆ
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ಮುಂದಿನ ವಾರದಿಂದ ಪ್ರಾರಂಭವಾಗುವ ಕ್ರಿಸ್ಮಸ್ ರಜೆಯ ವೇಳೆಯಲ್ಲಿ ಜಾಮೀನು ಮತ್ತಿತ್ಯಾದಿ ತುರ್ತು ವಿಚಾರಣೆಗಳನ್ನು ಆಲಿಸುವುದಕ್ಕೆ ವಿಶೇಷ ಪೀಠದ ಸ್ಥಾಪನಗೆ ಸುಪ್ರೀಮ್ ಕೋರ್ಟ್ ಮುಖ್ಯ ನ್ಯಾಯಾಧೀಶ ಟಿ ಎಸ್ ಠಾಕುರ್ ಪ್ರಸ್ತಾಪಿಸಿದ್ದಾರೆ.

ಠಾಕುರ್ ಅವರ ಈ ಪ್ರಯತ್ನ ಅಪೆಕ್ಸ್ ಕೋರ್ಟ್ ನಲ್ಲಿ ಉಳಿದಿಕೊಂಡಿರುವ ಪ್ರಕರಣ ಸಂಖ್ಯೆಗಳನ್ನು ಕಡಿಮೆ ಮಾಡುವ ಸಲುವಾಗಿ ಕೂಡ ಪ್ರಯತ್ನಿಸಲಿದೆ. ಸಾಂವಿಧಾನಿಕ ಪೀಠ ಸೋಮವಾರಗಳಂದು ಮತ್ತು ಶುಕ್ರವಾರಗಳಂದು ಎರಡು ಘಂಟೆಗಳ ಕಾಲ ಉಳಿದ ಪ್ರಕರಣಗಳ ವಿಚಾರಣೆ ಆಲಿಸಲಿದೆ.

"ಸೋಮವರಗಳಂದು ಮತ್ತು ಶುಕ್ರವಾರಗಳಂದು ನ್ಯಾಯಾಧೀಶರಿಗೆ ಮಧ್ಯಾಹ್ನ ೧ ಘಂಟೆಯಿಂದ ೧:೩೦ರವರೆಗೆ ಸಮಯ ಸಿಗಲಿದೆ. ನ್ಯಾಯಾಧೀಶರುಗಳಿಗೆ ನಂತರ ಕೋರ್ಟ್ ನಲ್ಲೇ ಉಳಿದುಕೊಂಡು ಪ್ರಕರಣಗಳ ವಿಚಾರಣೆ ಆಲಿಸಲು ಮನವಿ ಮಾಡಿಕೊಳ್ಳಬಹುದು" ಎಂದು ಮುಖ್ಯ ನ್ಯಾಯಧೀಶರು ತಿಳಿಸಿದ್ದಾರೆ.

ಸಾಂವಿಧಾನಿಕ ಪೀಠದಲ್ಲಿ ಅಪೆಕ್ಸ್ ಕೋರ್ಟ್ ನ ಐದು ನ್ಯಾಯಾಧೀಶರುಗಳಿದ್ದು, ಸಂವಿಧಾನ ಮತ್ತು ಕಾನೂನು ತೊಡಕುಗಳನ್ನು ನಿವಾರಿಸಲು ಪ್ರಮುಖ ಪಾತ್ರ ವಹಿಸುತ್ತದೆ.

೧೯೫೦ ರಿಂದ ಇಂತಹ ಸಾಂವಿಧಾನಿಕ ಪೀಠಗಳ ಸಂಖ್ಯೆ ಕಡಿಮೆಯಾಗಿವೆ. ಮತ್ತು ಸುಪ್ರೀಂ ಕೋರ್ಟ್ ಅಂರ್ತರ್ಜಾಲ ತಾಣದ ಪ್ರಕಾರ ಮಾರ್ಚ್ ೧ ರ ಹೊತ್ತಿಗೆ ೨೯ ಸಾಂವಿಧಾನಿಕ ಪೀಠದ ವಿಷಯಗಳು ಬಾಕಿ ಉಳಿದಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com