ರಡಾರ್ ತಂತ್ರಜ್ಞಾನ ಇನ್ನೂ ಆಗಬೇಕಿದೆ ಅಭಿವೃದ್ಧಿ

ವಿಜ್ಞಾನ ಮತ್ತು ತಂತ್ರಜ್ಞಾನ ಮುಂದುವರಿದಿರುವ ದಿನಗಳಲ್ಲೂ ಆಧುನಿಕ ಉಪಕರಣಗಳ ಕಣ್ಣುತಪ್ಪಿಸಿ ದಾಳಿ ನಡೆಸುವ 'ಸ್ಟೆಲ್ತ್' (ರಹಸ್ಯ) ವಿಮಾನಗಳ ಸಂಖ್ಯೆ...
ರಡಾರ್
ರಡಾರ್

ಬೆಂಗಳೂರು: ವಿಜ್ಞಾನ ಮತ್ತು ತಂತ್ರಜ್ಞಾನ ಮುಂದುವರಿದಿರುವ ದಿನಗಳಲ್ಲೂ ಆಧುನಿಕ ಉಪಕರಣಗಳ ಕಣ್ಣುತಪ್ಪಿಸಿ ದಾಳಿ ನಡೆಸುವ 'ಸ್ಟೆಲ್ತ್' (ರಹಸ್ಯ) ವಿಮಾನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಡಾರ್ ತಂತ್ರಜ್ಞಾನ ಮತ್ತಷ್ಟು ಅಭಿವೃದ್ಧಿಯಾಗಬೇಕಿದೆ,'' ಎಂದು ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ(ಡಿಆರ್‍ಡಿಒ) ಎಲೆಕ್ಟ್ರಾನಿಕ್ಸ್ ಮತ್ತು ರಡಾರ್ ಅಭಿವೃದ್ಧಿ ವಿಭಾಗದ (ಎಲ್‍ಆರ್ ಡಿಇ) ನಿರ್ದೇಶಕ ಎಸ್.ಎಸ್. ನಾಗರಾಜ್ ಅಭಿಪ್ರಾಯಪಟ್ಟಿದ್ದಾರೆ.

ನಿಮಾ್ಹನ್ಸ್ ಕನ್ವೆನ್ಷನ್ ಸೆಂಟರ್‍ನಲ್ಲಿ ಗುರುವಾರ ಆರಂಭಗೊಂಡ 5 ದಿನಗಳ 10ನೇ ಅಂತಾರಾಷ್ಟ್ರೀಯ 'ರಡಾರ್ ಸಿಂಫೋಸಿಯಂ ಇಂಡಿಯಾ' (ಐಆರ್ಎಸ್‍ಐ-2015) ಉದ್ಘಾಟನಾ ಕಾರ್ಯಕ್ರಮದಲ್ಲಿ 'ಭಾರತೀಯ ಪರಿಸ್ಥಿತಿಯಲ್ಲಿ ರಡಾರ್ ಅಭಿವೃದ್ಧಿ' ಕುರಿತು ಮಾತನಾಡಿದ ಅವರು, 'ಭಾರತ ಸೇರಿದಂತೆ ವಿಶ್ವದಾದ್ಯಂತ ಸ್ಟೆಲ್ತ್ ಯುದ್ಧ ವಿಮಾನಗಳು ದಾಳಿ ನಡೆಸುತ್ತಲೇ ಇವೆ. ಈ ವಿಮಾನಗಳ ಪತ್ತೆ ಹಚ್ಚುವ ರಡಾರ್ ಸಂಶೋಧನೆ ನಡೆಸುವತ್ತ ವಿಜ್ಞಾನಿಗಳು ಹೆಚ್ಚು ಗಮನ ನೀಡಬೇಕು. ಯಾವುದೇ ದೇಶದ ಗಡಿಯೊಳಗೆ ಅನುಮತಿಯಿಲ್ಲದೆ ಪ್ರವೇಶ ತಡೆಗಟ್ಟುವ ಬಗ್ಗೆ ರಡಾರ್ ಗಳು ಕಾರ್ಯನಿರ್ವಹಿಸಬೇಕಿದೆ,'' ಎಂದರು.

'ಡಿಆರ್‍ಡಿಒದಿಂದ 2-3 ಶತಕೋಟಿ ಡಾಲರ್ ನಷ್ಟು ಉಪಕರಣಗಳನ್ನು ರಫ್ತು ಮಾಡುವಂತೆ ರಕ್ಷಣಾ ಸಚಿವರು ಗುರಿ ನಿಗದಿಪಡಿಸಿದ್ದಾರೆ. ಈ ರಫ್ತಿನಲ್ಲಿ ರಡಾರ್ ಸಂಖ್ಯೆ ಹೆಚ್ಚಿರುವಂತೆ ಪ್ರಯತ್ನ ನಡೆಸಬೇಕಿದೆ,'' ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಬಿಇಎಲ್ ಸಿಎಂಡಿ ಎಸ್.ಕೆ.ಶರ್ಮಾ, ಎಲ್‍ಆರ್‍ಡಿಇ ಮಾಜಿ ನಿರ್ದೇಶಕ ಎನ್.ಪಿ. ರಾಮಸುಬ್ಬರಾವ್, ಸಂಸ್ಥೆಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ಡಾ. ಎ.ಟಿ. ಕಲಘಟಗಿ, ಐಆರ್‍ಎಸ್‍ಐ-15ರ ತಾಂತ್ರಿಕ ಸಮಿತಿ ಅಧ್ಯಕ್ಷ ಎಂ. ಶೇಖ್ ಅಲ್ತಾಫ್ ಉಪಸ್ಥಿತರಿದ್ದರು.

ಅಮೆರಿಕ ವಿಮಾನಗಳನ್ನು ಕಂಡು ಹಿಡಿಯದ ರಡಾರ್‍ಗಳು
ಅಮೆರಿಕದ ಸೀಲ್ ಸೈನಿಕರು ತಮ್ಮ ಸ್ಟೆಲ್ತ್ ವಿಮಾನವನ್ನು ಬಳಸಿ ಪಾಕಿಸ್ತಾನಕ್ಕೆ ನುಗ್ಗಿದರು. ಪಾಕಿಸ್ತಾನ ಸರ್ಕಾರ ಮತ್ತು ಸೇನೆಗೆ ತಿಳಿಯದಂತೆ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್‍ನನ್ನು ಹೊಡೆದುರುಳಿಸಿದರು ಎಂಬ ವರದಿಗಳು ಸಿಗುತ್ತವೆ. ಭಯೋತ್ಪಾದಕನನ್ನು ಹೊಡೆದುರುಳಿಸಿದ್ದು ರೋಚಕವಾಗಿ ಕಂಡರೂ, ಅತ್ಯಾಧುನಿಕ ರಡಾರ್ ಗಳು ಅಮೆರಿಕ ವಿಮಾನವನ್ನು ಗುರುತಿಸಲು ವಿಫಲವಾದವು ಎಂಬುದು ರಡಾರ್ ಅಭಿವೃದ್ಧಿಯಲ್ಲಿ ತೊಡಗಿರುವ ಸಮುದಾಯಕ್ಕೆ ಎಚ್ಚರಿಕೆ ಗಂಟೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com