ನಿರ್ಭಯಾ ಕೇಸ್: ಬಾಲಪರಾಧಿ ಬಿಡುಗಡೆ ವಿರುದ್ಧ ಸುಪ್ರೀಂ, ರಾಷ್ಟ್ರಪತಿಗೆ ಡಿಸಿಡಬ್ಲ್ಯೂ ಮನವಿ

ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಾಲಪರಾಧಿ ಬಿಡುಗಡೆ ವಿರೋಧಿಸಿ ಸುಪ್ರೀಂ ಕೋರ್ಟ್, ರಾಷ್ಟ್ರಪತಿ ಹಾಗೂ ದೆಹಲಿ ಹೈಕೋರ್ಟ್...
ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿ, ಅಪ್ರಾಪ್ತ ಬಾಲಕ (ಸಂಗ್ರಹ ಚಿತ್ರ)
ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿ, ಅಪ್ರಾಪ್ತ ಬಾಲಕ (ಸಂಗ್ರಹ ಚಿತ್ರ)

ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಾಲಪರಾಧಿ ಬಿಡುಗಡೆ ವಿರೋಧಿಸಿ ಸುಪ್ರೀಂ ಕೋರ್ಟ್, ರಾಷ್ಟ್ರಪತಿ ಹಾಗೂ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಮನವಿ ಸಲ್ಲಿಸಲು ದೆಹಲಿ ಮಹಿಳಾ ಆಯೋಗ(ಡಿಸಿಡಬ್ಲ್ಯೂ) ಶುಕ್ರವಾರ ನಿರ್ಧರಿಸಿದೆ.

2012 ಡಿಸೆಂಬರ್ 16ರಂದು ದೆಹಲಿಯಲ್ಲಿ ನಡೆದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿ, ಅಪ್ರಾಪ್ತ ಬಾಲಕನ ಬಿಡುಗಡೆಗೆ ತಡೆ ನೀಡಲು ದೆಹಲಿ ಹೈಕೋರ್ಟ್ ಇಂದು  ನಿರಾಕರಿಸಿದ್ದು, ಬಾಲಪರಾಧಿಯನ್ನು ಭಾನುವಾರ ಬಂಧಮುಕ್ತಗೊಳಿಸಲಾಗುತ್ತಿದೆ.

ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆ ಮುಗಿಸಿರುವ ಬಾಲಪರಾಧಿಯ ಬಿಡುಗಡೆಗೆ ತಡೆ ಕೋರಿ ಬಿಜೆಪಿ ನಾಯಕ ಸುಬ್ರಮಣ್ಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಇಂದು ವಜಾಗೊಳಿಸಿದೆ. ಅಲ್ಲದೆ ಬಾಲಪರಾಧಿಯ ಶಿಕ್ಷೆಯನ್ನು ಹೆಚ್ಚಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com