ಉಚ್ಛಾಟನೆಗೆ ಕಾರಣ ಕೇಳಿ ಅಮಿತ್ ಷಾಗೆ ಪತ್ರ ಬರೆದ ಕೀರ್ತಿ ಆಜಾದ್

ದೆಹಲಿ ಕ್ರಿಕೆಟ್ ಮಂಡಲಿಯಲ್ಲಿ ಅಕ್ರಮವೆಸಗಿದ್ದಾರೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ವಿರುದ್ಧ ಆರೋಪ ಮಾಡಿದ್ದ ಬಿಜೆಪಿ ಸಂಸದ ಕೀರ್ತಿ ಆಜಾದ್ ಅವರನ್ನು ಪಕ್ಷವಿರೋಧಿ ಚಟುವಟಿಕೆ
ಬಿಜೆಪಿ ಸಂಸದ ಕೀರ್ತಿ ಆಜಾದ್
ಬಿಜೆಪಿ ಸಂಸದ ಕೀರ್ತಿ ಆಜಾದ್

ನವದೆಹಲಿ: ದೆಹಲಿ ಕ್ರಿಕೆಟ್ ಮಂಡಲಿಯಲ್ಲಿ ಅಕ್ರಮವೆಸಗಿದ್ದಾರೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ವಿರುದ್ಧ ಆರೋಪ ಮಾಡಿದ್ದ ಬಿಜೆಪಿ ಸಂಸದ ಕೀರ್ತಿ ಆಜಾದ್ ಅವರನ್ನು ಪಕ್ಷವಿರೋಧಿ ಚಟುವಟಿಕೆ ಆರೋಪದ ಮೇಲೆ ಎರಡು ದಿನಗಳ ಹಿಂದೆಯಷ್ಟೇ ಉಚ್ಛಾಟನೆ ಮಾಡಲಾಗಿತ್ತು. ಈಗ ತಮ್ಮ ವಿರುದ್ಧ ಕ್ರಮ ಕೈಗೊಂಡಿರುವುದು ಏಕೆ ಎಂದು ಕಾರಣ ಕೇಳಿ ಕೀರ್ತಿ ಆಜಾದ್ ಬಿಜೆಪಿ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರಿಗೆ ಪತ್ರ ಬರೆದಿದ್ದಾರೆ.

ಪಕ್ಷದಲ್ಲಿ ಅತ್ಯುತ್ತಮ ಚಾರಿತ್ರ್ಯ ಹೊಂದಿರುವ ತಮಗೆ ಆರೋಪಮುಕ್ತರಾಗಲು ಅವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ. "ಎಲ್ಲರು ಸಮಾನರು ಎಂಬ  ತತ್ವದ ಮೇರೆಗೆ, ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ನನ್ನ ಹೆಸರನ್ನು ಸೇರಿಸಿರುವುದನ್ನು ತಪ್ಪು ಎಂದು ಸಾಬೀತುಪಡಿಸಲು ನನಗೆ ಅವಕಾಶ ನೀಡುವುದನ್ನು ಎದುರು ನೋಡುತ್ತಿದ್ದೇನೆ" ಎಂದು ಷಾ ಅವರಿಗೆ ಬರೆದ ಪತ್ರದಲ್ಲಿ ಅಜಾದ್ ತಿಳಿಸಿದ್ದಾರೆ.

"ಆದಷ್ಟು ಬೇಗೆ, ನಾನು ಹೇಗೆ ಪಕ್ಷವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ಸಾಕ್ಷ್ಯ ನೀಡಬೇಕೆಂದು ಕಳಕಳಿಯಿಂದ ಮನವಿ ಮಾಡುತ್ತೇನೆ, ಆದುದರಿಂದ ಪಕ್ಷದ ಸಂವಿಧಾನಕ್ಕೆ ಧಕ್ಕೆ ತರುವಂತಹ ಅಥವಾ ಪಕ್ಷ ವಿರೋಧಿ ಚಟುವಟಿಕೆಗಳನ್ನು ನಾನು ನಡೆಸಿಲ್ಲ ಎಂದು ನಿಮಗೆ ತೃಪ್ತಿದಾಯಕವಾದ ಉತ್ತರಗಳನ್ನು ನೀಡಲು ಸಹಕಾರವಾಗುತ್ತದೆ" ಎಂದು ಷಾಗೆ ಬರೆದ ಅಪತ್ರದಲ್ಲಿ ತಿಳಿಸಿದ್ದಾರೆ.

"ನೀವು (ಷಾ) ಡಿಡಿಸಿಎ ಹಗರಣದ ಬಗ್ಗೆ ಪ್ರಸ್ತಾಪಿಸಿಲ್ಲವಾದ್ದರಿಂದ, ನನ್ನ ಉಚ್ಛಾಟನೆಗೂ ಅದಕ್ಕೂ ಸಂಬಂಧವಿಲ್ಲ ಎಂದು ನಂಬಿರುತ್ತೇನೆ" ಎಂದು ಮಾಜಿ ಕ್ರಿಕೆಟಿಗ ತಿಳಿಸಿದ್ದಾರೆ.

ಕೀರ್ತಿ ಅಜಾದ್ ಅವರಿಗೆ ಬಿಜೆಪಿ ಹಿರಿಯ ನಾಯಕರು, ಬಿಜೆಪಿ ಮುಖಂಡ ಸುಬ್ರಮಣ್ಯ ಸ್ವಾಮಿ, ಆರ್ ಎಸ್ ಎಸ್ ವಲಯದಿಂದ ಬೆಂಬಲ ವ್ಯಕ್ತವಾಗಿದೆ.



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com