ಲಾಹೋರಿನಲ್ಲಿ ಪ್ರಧಾನಿ ಕುಡಿದ 'ಟೀ'ಗೆ ದೇಶ ಬೆಲೆ ತೆತ್ತಲಿದೆ: ಕಾಂಗ್ರೆಸ್

ಪಾಕಿಸ್ತಾನಕ್ಕೆ ಅನಿರೀಕ್ಷಿತ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಪಕ್ಷ, ಅವರ ಊಟಕ್ಕೆ ದೇಶ 'ರಾಷ್ಟ್ರೀಯ ಭದ್ರತೆಯ'ಲ್ಲಿ
ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ
ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ

ನವದೆಹಲಿ: ಪಾಕಿಸ್ತಾನಕ್ಕೆ ಅನಿರೀಕ್ಷಿತ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಪಕ್ಷ, ಅವರ ಊಟಕ್ಕೆ ದೇಶ 'ರಾಷ್ಟ್ರೀಯ ಭದ್ರತೆಯ'ಲ್ಲಿ ಬೆಲೆ ತೆತ್ತಲಿದೆ ಎಂದು ಆರೋಪಿಸಿದೆ.

"ಲಾಹೋರ್ ನಲ್ಲಿ 'ಟೀ' ಕುಡಿಯಲು ಪ್ರಧಾನಿ ಇಳಿದಿದ್ದರಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಏನು ಬದಲಾಗಿದೆ? ಲಕ್ವಿ ಯನ್ನು ಮತ್ತೆ ಬಂಧಿಸಲು ಪಾಕಿಸ್ತಾನ ಒಪ್ಪಿದೆಯೇ? ೨೬/೧೧ ದಾಳಿಯ ವಿಚಾರಣೆಯನ್ನು ತ್ವರಿತಗೊಳಿಸಲು ಅವರು ಒಪ್ಪಿದ್ದಾರೆಯೇ? ದಾವುದ್ ಇಬ್ರಾಹಿಂ ನನ್ನು ಭಾರತಕ್ಕೆ ಹಸ್ತಾಂತರಿಸಲು ಅವರು ಒಪ್ಪಿದ್ದಾರೆಯೇ? ಅಕ್ರಮವಾಗಿ ವಶಪಡಿಸಿಕೊಂಡಿರುವ ಕಾಶ್ಮೀರದ ಭಾಗವನ್ನು ಭಾರತಕ್ಕೆ ಬಿಟ್ಟುಕೊಡಲು ಒಪ್ಪಿದ್ದಾರೆಯೇ?" ಎಂದು ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ ಪ್ರಶ್ನಿಸಿದ್ದಾರೆ.

"ಪ್ರಧಾನಿ ಕಾಬೂಲ್ ನಲ್ಲಿ ತಿಂಡಿ ತಿಂದು, ಲಾಹೋರ್ ನಲ್ಲಿ ಮಹ್ಯಾಹ್ನದೂಟ ಮಾಡಿ ಮತ್ತು ನವದೆಹಲಿಯಲ್ಲಿ ರಾತ್ರಿಯೂಟ ಮಾಡಬಹುದು ಆದರೆ ಇದಕ್ಕೆ ದೇಶ ರಾಷ್ಟ್ರೀಯ ಭದ್ರತೆಯಲ್ಲಿ ಬೆಲೆ ತೆತ್ತಬೇಕಾಗಿದೆ" ಎಂದು ಕೂಡ ಅವರು ಹೇಳಿದ್ದಾರೆ.

ನೆನ್ನೆ ಕಾಬೂಲ್ ನಿಂದ ಹಿಂದಿರುಗುವಾಗ ಪಾಕಿಸಾನಿ ಪ್ರಧಾನಿ ನವಾಜ್ ಶರೀಫ್ ಅವರನ್ನು ಭೇಟಿ ಮಾಡಲು ಲಾಹೋರ್ ನಲ್ಲಿ ಅನಿರೀಕ್ಷಿತವಾಗಿ ಇಳಿದ ಹಿನ್ನಲೆಯಲ್ಲಿ ಕಾಂಗ್ರೆಸ್ ಈ ಹೇಳಿಕೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com