
ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಫಾಲೋವರ್ ಗಳನ್ನು ಹೊಂದಿ ಮುಂಚೂಣಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಈಗ ಮತ್ತೊಂದು ಚಾಟಿಂಗ್ ಸೈಟ್ ವೈಬರ್ ಬಳಸಲು ಆರಂಭಿಸಿದ್ದಾರೆ. ವೈಬರ್‌ಗೆ ಸೇರಿದ ಮೊದಲ ವಾರದಲ್ಲೇ 6 ಲಕ್ಷ ಹಿಂಬಾಲಕರನ್ನು ಗಳಿಸಿರುವ ಮೋದಿ ಇಲ್ಲಿಯೂ 'ಮೋದಿ ಹವಾ' ಸೃಷ್ಟಿಸಿದ್ದಾರೆ.
ಈಗಾಗಲೇ ಫೇಸ್‌ಬುಕ್, ಟ್ವೀಟರ್ ಮತ್ತು ಇನ್‌ಸ್ಟಾ ಗ್ರಾಂ ಬಳಸುತ್ತಿರುವ ಮೋದಿಯವರಿಗೆ ಎಲ್ಲಾ ಜಾಲತಾಣಗಳಲ್ಲಿ ಅಸಂಖ್ಯಾತ ಹಿಂಬಾಲಕರು ಇದ್ದಾರೆ. ಸಾಮಾಜಿಕ ತಾಣಗಳ ಮೂಲಕ ಸಾರ್ವಜನಿಕರೊಂದಿಗೆ ಮೋದಿ ನೇರ ಸಂಪರ್ಕವನ್ನಿಟ್ಟುಕೊಳ್ಳುವ ಮೂಲಕ ಜನರಿಗೆ ಹತ್ತಿರವಾಗುತ್ತಿದ್ದಾರೆ.
ವೈಬರ್ ಬಳಸಲಾರಂಭಿಸಿದ ಮೋದಿ ಇದರಲ್ಲಿ ಗಣರಾಜ್ಯೋತ್ಸವದ ಪರೇಡ್ ಚಿತ್ರಗಳನ್ನು ಮತ್ತು 1950ಜನವರಿ 26ರಂದು ಬಿಡುಗಡೆಯಾದ ಅಂಚೆಚೀಟಿಯ ಚಿತ್ರವನ್ನು ಶೇರ್ ಮಾಡಿದ್ದಾರೆ.
Advertisement