ಕ್ಯಾಥೋಲಿಕ್ ಬಿಷಪ್‌ಗಳ ಸಭೆ: ಇಬ್ಬರು ವ್ಯಾಟಿಕನ್ ಅಧಿಕಾರಿಗಳಿಗೆ ವೀಸಾ ನಿಷೇಧ

ಬೆಂಗಳೂರಿನಲ್ಲಿ ನಡೆಯುತ್ತಿರುವ 27ನೇ ಕ್ಯಾಥೋಲಿಕ್ ಬಿಷಪ್ಸ್ ಆಫ್ ಇಂಡಿಯಾ ಸಮ್ಮೇಳನ (ಸಿಸಿಬಿಐ) ...
ವ್ಯಾಟಿಕನ್
ವ್ಯಾಟಿಕನ್

ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ 27ನೇ  ಕ್ಯಾಥೋಲಿಕ್ ಬಿಷಪ್ಸ್ ಆಫ್ ಇಂಡಿಯಾ ಸಮ್ಮೇಳನ (ಸಿಸಿಬಿಐ) ದಲ್ಲಿ ಭಾಗವಹಿಸಲಿದ್ದ ಇಬ್ಬರು ವ್ಯಾಟಿಕನ್ ಅಧಿಕಾರಿಗಳಿಗೆ ವೀಸಾ ನಿಷೇಧಿಸಿರುವ ಬಗ್ಗೆ ಕ್ಯಾಥೋಲಿಕ್ ಚರ್ಚ್ ದೂರಿದೆ.

ಬುಧವಾರ ಆರಂಭವಾದ ಈ ಸಮ್ಮೇಳನದಲ್ಲಿ ದೇಶ- ವಿದೇಶದ 140 ಬಿಷಪ್‌ಗಳು ಭಾಗವಹಿಸುತ್ತಿದ್ದಾರೆ ಎಂದು ಸಿಸಿಬಿಐ ಅಧ್ಯಕ್ಷ ಕಾರ್ಡಿಯಲ್ ಓಸ್ವಾಲ್ಡ್ ಗ್ರೇಸಿಯಸ್ ಹೇಳಿದ್ದಾರೆ.

ಒಂದು ವಾರದಷ್ಟು ಕಾಲ ನಡೆಯಲಿರುವ ಈ ಸಮ್ಮೇಳನದಲ್ಲಿ ಕಂಗ್ರೇಗೇಶನ್ ಫಾರ್ ಡಿವೈನ್ ವರ್‌ಶಿಪ್ ಆ್ಯಂಡ್ ಡಿಸಿಪ್ಲಿನ್ ಆಫ್ ದ ಸಕ್ರಾಮೆಂಟ್ಸ್ ನ ಕಾರ್ಯದರ್ಶಿ ಆರ್ಚ್
ಬಿಷಪ್ ಆರ್ಥರ್ ರೋಚೆ ಮತ್ತು ಪೊಂಟಿಫಿಕಲ್ ಮಿಷನ್ ಸೊಸೈಟೀಸ್ ಆ್ಯಂಡ್ ಅಡ್ಜಂಟ್ ಸೆಕ್ರೆಟರಿ ಟು ದ ಕಾಂಗ್ರೆಗೇಷನ್ ಫಾರ್ ದ ಇವಾಂಜೆಲೈಸೇಶನ್ ಆಫ್ ಪೀಪಲ್ಸ್‌ನ ಅಧ್ಯಕ್ಷ ಆರ್ಚ್ ಬಿಷಪ್ ಪ್ರೊಟೆಸ್ ರುಗಾಂಬ್ವಾ ಅವರು ಪ್ರಧಾನ ವ್ಯಕ್ತಿಗಳಾಗಿ ಪಾಲ್ಗೊಳ್ಳಬೇಕಾಗಿತ್ತು.

ಆದರೆ ಈ ಇಬ್ಬರು ಮಹನೀಯರಿಗೆ ಭಾರತಕ್ಕೆ ಬರಲು ವೀಸಾ ನಿರಾಕರಿಸಲಾಗಿದೆ. ಭಾರತಕ್ಕೆ ಬರಲಾಗದ ಕಾರಣ ಇವರಿಬ್ಬರೂ ವೀಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸುವಂತೆ ವ್ಯವಸ್ಥೆ ಮಾಡಲಾಗಿದೆ.

ಇವರಿಬ್ಬರೂ ಡಿಸೆಂಬರ್‌ನಲ್ಲಿ ವೀಸಾಗೆ ಅರ್ಜಿ ಸಲ್ಲಿಸಿದ್ದು, ಕೆಲವು ದಿನಗಳ ವರೆಗೆ ಅರ್ಜಿಯನ್ನು ತಡೆಹಿಡಿದು ಕೊನೇ ಗಳಿಗೆಯಲ್ಲಿ ವೀಸಾ ನಿರಾಕರಿಸಲಾಗಿದೆ ಎಂದು ಸಿಸಿಬಿಐ ಹೇಳಿಕೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com