ದೇವಾಲಯಗಳಿಗೆ ಬೀಗ ಹಾಕಿ, ದೇವರುಗಳು ಶಾಂತಿಯಿಂದಿರಲಿ: ಹೈಕೋರ್ಟ್

ವಿರುಧುನಗರದಲ್ಲಿ ದೇವಾಲಾಯದ ಉತ್ಸವ ನಡೆಸಲು ನಿರಂತರವಾಗಿ ಎರಡು ಗ್ರಾಮಗಳು
ಮದ್ರಾಸ್ ಹೈಕೋರ್ಟ್
ಮದ್ರಾಸ್ ಹೈಕೋರ್ಟ್

ಮಧುರೈ: ವಿರುಧುನಗರದಲ್ಲಿ ದೇವಾಲಾಯದ ಉತ್ಸವ ನಡೆಸಲು ನಿರಂತರವಾಗಿ ಎರಡು  ಗ್ರಾಮಗಳು ನಡೆಸುತ್ತಿರುವ ಕಾದಾಟದ ಬಗ್ಗೆ ಅಸಮಧಾನ ತೋರಿರುವ ಮದ್ರಾಸ್ ಉಚ್ಛ ನ್ಯಾಯಾಲಯ (ಮಧುರೈ ಪೀಠ) ದೇವಾಲಯಗಳನ್ನು ಮುಚ್ಚಿಬಿಟ್ಟರೆ, ದೇವರನ್ನು ಪೂಜಿಸುವ ಕಿತ್ತಾಟದ ಜನರಿಂದ ದೇವರಿಗೆ ಮುಕ್ತಿ ದೊರಕಿ ನೆಮ್ಮದಿಯಿಂದ ಇರುತ್ತಾರೆ ಎಂದು ವ್ಯಂಗ್ಯವಾಗಿ ಹೇಳಿದೆ.

ತೀರ್ಪು ಬರೆದ ಮುಖ್ಯ ನ್ಯಾಯಾಧೀಶ ಸಂಜಯ್ ಕಿಶನ್ ಕೌಲ್, ಪಿ ಸೀನಿ ನೈಕ್ಕರ್ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದ್ದಲ್ಲದೆ, 'ಧರ್ಮ ಎಂಬುದು ಜನಸಮುದಾಯಕ್ಕೆ ಓಪಿಯಂ' ಆಗಿದೆ, ಜನ ಸಮುದಾಯ ದೇವರನ್ನು ಪೂಜಿಸುವಾಗಲೂ ಕಾದಾಟ ನಿಲ್ಲಿಸುವುದಿಲ್ಲ ಎಂದಿದ್ದಾರೆ.

ಅರ್ಜಿದಾರ ಸಲ್ಲಿಸಿದ್ದ ಅರ್ಜಿಯಲ್ಲಿ, ವಿರುಧುನಗರದ ಮಲ್ಲಿಕಿನರುನಲ್ಲಿ ಈ ದೇವಾಲಯ ನಿರ್ಮಿಸಲಾಗಿತ್ತು. ಕ್ರಿಶ್ಣಪುರಮ್ ಮತ್ತು ಕೋವಿಲ್ ಪಟ್ಟಿಯ ಎರಡೂ ಗ್ರಾಮದ ಜನರು ಈ ದೇವರನ್ನು ಪೂಜಿಸುತ್ತಿದ್ದರು.

ಈ ಮಧ್ಯೆ ಮಹಿಮೈ ನಿಂದ  (ಪೂಜಾ ತೆರಿಗೆ) ವಿವಾದ ಎದ್ದಿತ್ತು ಆದರೆ ೧೯೭೪ ರಲ್ಲಿ ಇದು ಬಗೆಹರಿದಿತ್ತು. ಮತ್ತೆ ೨೦೧೦ ರಲ್ಲಿ ವಿವಾದ ಬುಗಿಲೆದ್ದು, ಎರಡು ಗ್ರಾಮಗಳಿಗೆ ಸಾಮಾನ್ಯವಾಗಿದ್ದ ದೇವಾಲಯವನ್ನು ಒಡೆದು, ಎರಡು ಹೊಸ ದೇವಾಲಾಯಗಳನ್ನು ಗ್ರಾಮಸ್ತರ ನೆರವಿಲ್ಲದೆ ಕಟ್ಟಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com