ಮತಧರ್ಮ ಅಸಹನೆಯ ಬಗ್ಗೆ ಮೋದಿ ಮೌನ ಮುರಿಯಲಿ: ನ್ಯೂಯಾರ್ಕ್ ಟೈಮ್ಸ್

ಅಮೇರಿಕಾದ ಮುಂಚೂಣಿ ದಿನಪತ್ರಿಕೆ ನ್ಯೂಯಾರ್ಕ್ ಟೈಮ್ಸ್, ಭಾರತದ ಪ್ರಧಾನಿ ನರೇಂದ್ರ ಮೋದಿ ಮತಧರ್ಮ ಅಸಹನೆಯ
ಭಾರತದಲ್ಲಿ ಮೋದಿ ಒಬಾಮ ಭೇಟಿ
ಭಾರತದಲ್ಲಿ ಮೋದಿ ಒಬಾಮ ಭೇಟಿ

ನ್ಯೂಯಾರ್ಕ್: ಅಮೇರಿಕಾದ ಮುಂಚೂಣಿ ದಿನಪತ್ರಿಕೆ ನ್ಯೂಯಾರ್ಕ್ ಟೈಮ್ಸ್, ಭಾರತದ ಪ್ರಧಾನಿ ನರೇಂದ್ರ ಮೋದಿ ಮತಧರ್ಮ ಅಸಹನೆಯ ಬಗ್ಗೆ ತಮ್ಮ ದೀರ್ಘ ಮೌನವನ್ನು ಮುರಿಯಬೇಕು ಎಂದು ಆಗ್ರಹಿಸಿದೆ.

ದೆಹಲಿಯ ಚರ್ಚ್ ಗಳ ಮೇಲೆ ನಡೆದ ದಾಳಿ ಮತ್ತು ಹಿಂದು ಮತಧರ್ಮಕ್ಕೆ ನಡೆಯುತ್ತಿರುವ ದೊಡ್ಡ ಮಟ್ಟದ ಮತಾಂತರ ಆರೋಪಗಳ ಬಗ್ಗೆ ಬರೆದಿರುವ ಪತ್ರಿಕೆ ಮೋದಿಯವರ ಈ ಮೌನ, ಹಿಂದೂ ರಾಷ್ಟ್ರೀಯವಾದಿ ಬಲಪಂತೀಯರನ್ನು ನಿಯಂತ್ರಿಸಲು ಅವರಿಗೆ ಸಾಧ್ಯವಿಲ್ಲ ಅಥವಾ ಅವರಿಗೆ ಅದು ಇಷ್ಟವಿಲ್ಲ ಎಂದಷ್ಟೇ ತಿಳಿಸುತ್ತದೆ ಎಂದಿದೆ.

"ರಾಷ್ಟ್ರದ ಎಲ್ಲ ನಾಗರಿಕರನ್ನು ರಕ್ಷಿಸಲು ಆಯ್ಕೆಯಾಗಿರುವ ನಾಯಕನಿಂದ ದೆಹಲಿಯ ಕ್ರಿಶ್ಚಿಯನ್ ಪೂಜಾ ಸ್ಥಾನಗಳ ಮೇಲೆ ನಡೆದ ದಾಳಿಯ ಬಗ್ಗೆ ಯಾವುದೇ ಪ್ರತಿಕ್ರಿಯೆಯಿಲ್ಲ. ಅಲ್ಲದೆ ಒತ್ತಡ ಮತ್ತು ಆಮಿಷ ಒಡ್ಡಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯವನ್ನು ಹಿಂದು ಧರ್ಮಕ್ಕೆ ಮತಾಂತರ ಮಾಡುತ್ತಿರುವ ಬಗ್ಗೆಯೂ ಅವರು ಮಾತನಾಡಿಲ್ಲ" ಎಂದು ಮೋದಿ ಅವರ 'ಭಯಾನಕ ಮೌನ'ದ ಬಗ್ಗೆ ಸಂಪಾದಕೀಯದಲ್ಲಿ ಬರೆದಿದ್ದಾರೆ.

ಈ ಪತ್ರಿಕೆ ಹಿಂದು ಧರ್ಮಕ್ಕೆ ಮರು ಮತಾಂತರ ಮಾಡುತ್ತಿರುವುದರಲ್ಲಿ ನಾಯಕತ್ವ ವಹಿಸಿರುವ ವಿಶ್ವ ಹಿಂದೂ ಪರಿಷತ್ ಸಂಘಟನೆಯನ್ನು ಟೀಕೆ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com