
ಬೆಂಗಳೂರು: ರಾಜ್ಯದಲ್ಲಿ ಅನುಷ್ಠಾನಗೊಳ್ಲಲಿರುವ ಮುಂದಿನ ಎಲ್ಲ ರೈಲ್ವೇ ಯೋಜನೆಗಳ ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಬೇಕೆಂದು ಸಿದ್ದರಾಮಯ್ಯ ತಾಕೀತು ಮಾಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆದಿದ್ದ ನೀತಿ ಆಯೋಗದ ಮೊದಲ ಸಭೆಯಲ್ಲಿ ಸಿದ್ಧರಾಮಯ್ಯ ರೈಲ್ವೇ ಯೋಜನೆಗಳಿಗೆ ರಾಜ್ಯ ಸರ್ಕಾರ ಹಣ ನೀಡಲು ಸಾಧ್ಯವಾಗದ ಬಗ್ಗೆ ಮಾತನಾಡಿದ್ದಾರೆ.
ಸದ್ಯಕ್ಕೆ ರಾಜ್ಯದಲ್ಲಿ ಅನುಷ್ಠಾನವಾಗುವ ಎಲ್ಲ ರೈಲ್ವೇ ಯೋಜನೆಗಳಿಗೆ ಕರ್ನಾಟಕ ಸರ್ಕಾರ ೫೦% ಹಣವನ್ನು ಒದಗಿಸುತ್ತಿದೆ. ಇದನ್ನು ಕನಿಷ್ಠ ಮೂರನೇ ಒಂದು ಭಾಗಕ್ಕಾದರೂ ಇಳಿಸಬೇಕೆಂದು ಸಿದ್ದರಾಮಯ್ಯ ಹೇಳಿದ್ದಾರೆ.
ನೆರೆದಿದ್ದ ವರದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಕೇಂದ್ರ ಸರ್ಕಾರ ಅನುದಾನ ನೀಡುತ್ತಿರುವ ಯೋಜನೆಗಳ ಬಗ್ಗೆ ನನ್ನ ನಿಲುವುಗಳನ್ನು ಮಂಡಿಸಿದ್ದೇನೆ. ಈ ಸಭೆಯಲ್ಲಿ ಕರ್ನಾಟಕ ಸರ್ಕಾರ ಮೊಬೈಲ್ ವನ್ ಯೋಜನೆಯ ಬಗ್ಗೆ ಒಳ್ಳೆಯ ಅಭಿಪ್ರಾಯಗಳು ಮೂಡಿ ಬಂದವು ಹಾಗೂ ಮೋದಿ ಅವರ ಡಿಜಿಟಲ್ ಭಾರತ ಯೋಜನೆಗೆ ಕರ್ನಾಟಕ ಮುಂದಾಳತ್ವ ತೋರಿದೆ ಎಂದಿದ್ದಾರೆ.
Advertisement