ಕಪ್ಪು ಹಣ: ವಿದೇಶದಲ್ಲಿ ಖಾತೆ ಹೊಂದಿದ್ದ 1,195 ಭಾರತೀಯರ ಹೆಸರು ಬಹಿರಂಗ

ವಿದೇಶದಲ್ಲಿ ಕಪ್ಪು ಹಣ ಹೊಂದಿರುವ ಭಾರತೀಯರ ವಿರುದ್ಧ ಕೇಂದ್ರ ಸರ್ಕಾರ ಕ್ರಮ ತೆಗೆದುಕೊಳ್ಳಲು ಮುಂದಾಗಿರುವ ಬೆನ್ನಲ್ಲೇ ಸೋಮವಾರ...
ಕಪ್ಪು ಹಣ: ವಿದೇಶದಲ್ಲಿ ಖಾತೆ ಹೊಂದಿದ್ದ 1,195 ಭಾರತೀಯರ ಹೆಸರು ಬಹಿರಂಗ

ನವದೆಹಲಿ: ವಿದೇಶದಲ್ಲಿ ಕಪ್ಪು ಹಣ ಹೊಂದಿರುವ ಭಾರತೀಯರ ವಿರುದ್ಧ ಕೇಂದ್ರ ಸರ್ಕಾರ ಕ್ರಮ ತೆಗೆದುಕೊಳ್ಳಲು ಮುಂದಾಗಿರುವ ಬೆನ್ನಲ್ಲೇ ಸೋಮವಾರ ಸ್ಫೋಟಕ ಮಾಹಿತಿಯೊಂದು ಬಹಿರಂಗವಾಗಿದೆ.

ಜಿನಿವಾದಲ್ಲಿರುವ ಎಚ್‌ಎಸ್‌ಬಿಸಿ ಬ್ಯಾಂಕ್‌ನಲ್ಲಿ ಕಪ್ಪು ಹಣದ ಖಾತೆ ಹೊಂದಿದ್ದ 1, 195 ಭಾರತೀಯರ ಹೆಸರನ್ನು ಇಂಡಿಯನ್ ಎಕ್ಸಪ್ರೆಸ್ ತನಿಖೆಯಿಂದ ಬಹಿರಂಗವಾಗಿದೆ.

ದಿ ಇಂಡಿಯನ್ ಎಕ್ಸಪ್ರೆಸ್, ವಾಷಿಂಗ್ಟನ್ ಮೂಲದ ತನಿಖಾ ಪತ್ರಿಕೋದ್ಯಮಿಗಳ ಸಂಸ್ಥೆ(ಐಸಿಐ) ಹಾಗೂ ಪ್ಯಾರಿಸ್ ಮೂಲಕ ಲೆ ಮಾಂಡೆ ದಿನಪತ್ರಿಕೆ ಜಂಟಿಯಾಗಿ ನಡೆಸಿದ ತನಿಖೆಯಲ್ಲಿ ಈ ಮಹತ್ವದ ಮಾಹಿತಿ ಲಭ್ಯವಾಗಿದೆ.

ಅನಿಲ್ ಅಂಬಾನಿ, ಮುಕೇಶ್ ಅಂಬಾನಿ, ಆನಂದ್ ಚಂದ್ ಬುರ್ಮಾನ್, ರಾಜನ್ ನಂದ, ಯಶೋವರ್ಧನ್ ಬಿರ್ಲಾ ಸೇರಿದಂತೆ ಪ್ರಮುಖ ಉದ್ಯಮಿಗಳು ಎಚ್‌ಎಸ್‌ಬಿಸಿ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದು, ಒಟ್ಟು 1,195 ಮಂದಿಯ ಖಾತೆಗಳ ವಿವರ ಲಭ್ಯವಾಗಿದೆ. ಈ ಎಲ್ಲಾ ಖಾತೆಗಳಲ್ಲಿ 25, 420 ಕೋಟಿ ರುಪಾಯಿ ಕಪ್ಪು ಹಣ ಪತ್ತೆಯಾಗಿದೆ.

ಈ ಹಿಂದೆ 2011ರಲ್ಲಿ ಫ್ರಾನ್ಸ್ ಸರ್ಕಾರ ಕೇವಲು 628 ಭಾರತೀಯರ ಹೆಸರುಗಳನ್ನು ಮಾತ್ರ ಕೇಂದ್ರ ಸರ್ಕಾಕ್ಕೆ ನೀಡಿತ್ತು. ಆದರೆ ಇದೀಗ ಅದರ ಎರಡು ಪಟ್ಟು ಭಾರತೀಯರ ಹೆಸರುಗಳು ಬಹಿರಂಗವಾಗಿವೆ. ಇದು ಕಪ್ಪು ಹಣದ ತನಿಖೆಗಾಗಿ ಸುಪ್ರೀಂ ಕೋರ್ಟ್ ರಚಿಸಿರುವ ವಿಶೇಷ ತನಿಖಾ ತಂಡಕ್ಕೆ ಮತ್ತಷ್ಟು ಸಹಕಾರಿಯಾಗುವ ಸಾಧ್ಯತೆ ಇದೆ.

ಕೆಲವು ಪ್ರಮುಖ ಖಾತೆದಾರರ ವಿವರ
ಹರ್ಷದ್ ಮೇಹ್ತಾ - 53, 631, 788 ಡಾಲರ್
ಭದ್ರಾಶ್ಯಾಂ ಹರ್ಷದ್ - 31, 555, 874 ಡಾಲರ್
ಜಿತೇಂದ್ರ ಪಾರಿಖ್ - 30,137, 608 ಡಾಲರ್
ಗುಪ್ತ ಶರವಣ್- 32, 398, 796 ಡಾಲರ್
ಉತ್ತಮ್ ಚಂದ್, ದೋಪಾಲ್ ದಾಸ್, ವಧುಮಾಲ್ ಮತ್ತು ಕುಟುಂಬ 54, 573, 535 ಡಾಲರ್
ತರಾನಿ ಮಹೇಶ್ ತಿಕಮದಾಸ್ 40, 615, 288 ಡಾಲರ್
ಟಂಡನ್ ಸಂದೀಪ್ 26, 838,488 ಡಾಲರ್
ಮುಕೇಶ್ ಅಂಬಾನಿ 26, 654,991 ಡಾಲರ್
ಅನಿಲ್ ಅಂಬಾನಿ 26, 654,991 ಡಾಲರ್
ಕೃಷ್ಣ ಭಗ್ವಾಮ್ ರಾಮಚಂದ್ 23, 853, 117 ಡಾಲರ್
ಪರಿಮಳ ಪಾಲ್ ಸಿಂಗ್ 21, 110, 345 ಡಾಲರ್
ನರೇಶ್ ಕುಮಾರ್ ಗೋಯಲ್ 18, 716,015 ಡಾಲರ್
ರವಿಚಂದ್ರ ವಡಿಲಾಲ್ ಮೇಹ್ತಾ 18, 250, 253 ಡಾಲರ್
ಸಚಿವ್ ರಾಜೇಶ್ ಮೇಹ್ತಾ 12, 341, 074 ಡಾಲರ್
ಅನುರಾಗ್ ದಾಲ್ಮೀಯಾ/ಕುಟುಂಬ 9,609 371 ಡಾಲರ್
ಆಶಾಬಾಯಿ ಕನುಬಾಯಿ ಪಟೇಲ್ 16,059,129 ಡಾಲರ್
ಬಾಕೃಷ್ಣನ್ ಮೆಹ್ತಾ  8, 757,113 ಡಾಲರ್
ಹೇಮಂತ್ ಧಿರಜ್  6, 237, 932 ಡಾಲರ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com