ಆಪ್ ಆಪ್ ಎನ್ನುತ್ತಿರುವ ದೆಹಲಿ, ಗಗನಕ್ಕೇರಿದ ಪೊರಕೆ ಬೆಲೆ

ಬಹುತೇಕ ಮತಗಟ್ಟೆ ಸಮೀಕ್ಷೆಗಳು ಎಎಪಿ ಪಕ್ಷ ದೆಹಲಿ ವಿಧಾನಸಭಾ ಚುನಾವಣೆಗಳನ್ನು ಬಹುಮತದಿಂದ ಗೆಲ್ಲಲಿದೆ ಎಂಬ ತೀರ್ಪು ನೀಡಿರುವ ಹಿನ್ನಲೆಯಲ್ಲಿ,
ಪೊರಕೆಗಳೊಂದಿಗೆ ಆಪ್ ಪಕ್ಷದ ಕಾರ್ಯಕರ್ತರು
ಪೊರಕೆಗಳೊಂದಿಗೆ ಆಪ್ ಪಕ್ಷದ ಕಾರ್ಯಕರ್ತರು

ನವದೆಹಲಿ: ಬಹುತೇಕ ಮತಗಟ್ಟೆ ಸಮೀಕ್ಷೆಗಳು ಎಎಪಿ ಪಕ್ಷ ದೆಹಲಿ ವಿಧಾನಸಭಾ ಚುನಾವಣೆಗಳನ್ನು ಬಹುಮತದಿಂದ ಗೆಲ್ಲಲಿದೆ ಎಂಬ ತೀರ್ಪು ನೀಡಿರುವ ಹಿನ್ನಲೆಯಲ್ಲಿ, ಹಾಗೆಯೇ ಮತ ಎಣಿಕೆ ಪ್ರಾರಂಭವಾಗಿದ್ದು ಎ ಎ ಪಿ ಪಕ್ಷ ಸ್ಪಷ್ಟ ಬಹುಮತ ಗಳಿಸುವಲ್ಲಿ ಮುನ್ನಡೆದಿರುವುದರಿಂದ ಎ ಎ ಪಿ ಪಕ್ಷದ ಚಿಹ್ನೆಯಾದ ಪೊರಕೆಯ ಬೆಲೆ ದೆಹಲಿಯಲ್ಲಿ ಗಗನಕ್ಕೇರಿದೆ.

ಸಾಮಾನ್ಯವಾಗಿ ೪೦ ರಿಂದ ೬೦ ರೂ ಬೆಲೆಯ ಪೊರಕೆಗಳು ನೆನ್ನೆಯಿಂದ ೧೦೦ ರೂಪಾಯಿಗೆ ಮಾರಾಟವಾಗುತ್ತಿವೆ.

"ಕಳೆದ ರಾತ್ರಿ ನಮ್ಮ ಅಂಗಡಿಯಲ್ಲಿ ಹಲವಾರು ಪೊರಕೆಗಳಿದ್ದವು, ಈಗ ಒಂದಾದರು ನಿಮಗೆ ಕಾಣಿಸುತ್ತಾ? ಕೊನೆಯ ಪೊರಕೆಯನ್ನು ೧೨೦ ರುಪಾಯಿಗೆ ಮಾರಿದೆ" ಎನ್ನುತ್ತಾರೆ ಕೆಂದ್ರ ದೆಹಲಿಯ ಗೋಲ್ ಮಾರ್ಕೆಟ್ ನ ವ್ಯಾಪಾರಿ.

ಇದನ್ನೇ ಧ್ವನಿಸಿದ ಮತ್ತೊಬ್ಬ ವ್ಯಾಪಾರಿ "ಕಳೆದ ಎರಡು ದಿನಗಳಲ್ಲಿ ಹಲವಾರು ಪೊರಕೆಗಳನ್ನು ಮಾರಿದ್ದೇನೆ. ಕೆಲವಷ್ಟೇ ಉಳಿದಿರುವುದು. ವಿತರಕನಿಗೆ ಹೆಚ್ಚಿನ ದಾಸ್ತಾನಿಗೆ ಮನವಿ ಮಾಡಿದ್ದಕ್ಕೆ, ಅವರಲ್ಲಿ ಒಂದೂ ಪೊರಕೆ ಉಳಿದಿಲ್ಲ ಎಂದರು ಹಾಗೂ ಈ ವಾರದಲ್ಲಿ ಸಿಗುವುದು ಕಷ್ಟ ಎಂಬ ಅವರ ಅಸಹಾಯಕತೆಯನ್ನು ತೋರಿದರು" ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com