ವೆಂಕಯ್ಯ ನಾಯ್ಡು ಭೇಟಿ ಮಾಡಿದ ಕೇಜ್ರಿವಾಲ್, ಮೋದಿ ಭೇಟಿ ನಾಳೆ

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಕಂಡು, ೭೦ ಸ್ಥಾನಗಳಲ್ಲಿ ೬೭ ಸ್ಥಾನ ಗಳಿಸಿದ ಆಮ್ ಆದ್ಮಿ ಪಕ್ಷದ
ವಿಜಯದ ನಂತರ ಅರವಿಂದ್ ಕೇಜ್ರಿವಾಲ್
ವಿಜಯದ ನಂತರ ಅರವಿಂದ್ ಕೇಜ್ರಿವಾಲ್

ಅಪ್ಡೇಟ್: ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರನ್ನು ನಿರ್ಮಾಣ ಭವನದಲ್ಲಿ ಇಂದು ಭೇಟಿ ಮಾಡಿದರು. ಈ ಸಮಯದಲ್ಲಿ ಆಪ್ ಪಕ್ಷದ ಹಿರಿಯ ಮುಖಂಡ ಮನೀಶ್ ಸಿಸೋಡಿಯ ಕೂಡ ಕೇಜ್ರಿವಾಲ್ ಜೊತೆಗಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಜ್ರಿವಾಲ್ ನಾಳೆ ಭೇಟಿ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಇದೇ ಸಮಯದಲ್ಲಿ ಪ್ರಮಾಣ ವಚನ ಸಮಾರಂಭಕ್ಕೆ ಪ್ರಧಾನಿ ಅವರನ್ನು ಆಹ್ವಾನಿಸಲಿದ್ದಾರೆ ಎನ್ನಲಾಗಿದೆ.

ನವದೆಹಲಿ
: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಕಂಡು, ೭೦ ಸ್ಥಾನಗಳಲ್ಲಿ ೬೭ ಸ್ಥಾನ ಗಳಿಸಿದ ಆಮ್ ಆದ್ಮಿ ಪಕ್ಷದ ಶಾಸಕಾಂಗ ನಾಯಕನಾಗಿ ಮಂಗಳವಾರ ಆಯ್ಕೆಯಾದ ನಂತರ ಅರವಿಂದ್ ಕೇಜ್ರಿವಾಲ್ ಇಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ.

ಅಲ್ಲದೆ ಕೇಜ್ರಿವಾಲ್ ಅವರು ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿ ಪಕ್ಷದ ಪ್ರಣಾಳಿಕೆಯ ಪ್ರಮುಖ ಅಂಶವಾದ ದೆಹಲಿಯನ್ನು ರಾಜ್ಯದ ದರ್ಜೆಗೆ ಏರಿಸುವ ವಿಷಯವನ್ನು ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ.

ಎಎಪಿ ಪಕ್ಷದ ನಾಯಕ ಮಂಗಳವಾರ ಸಂಜೆ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರನ್ನು ಭೇಟಿ ಮಾಡಿ ಸರ್ಕಾರ ರಚಿಸಲು ಅನುವು ಮಾಡಿಕೊಡುವಂತೆ ಕೋರಿದ್ದರು.

ಕೇಜ್ರಿವಾಲ್ ಇನ್ನೆರಡು ದಿನಗಳಲ್ಲಿ ಪ್ರಧಾನಿ ಮೋದಿ ಅವರನ್ನೂ ಭೇಟಿ ಮಾಡುವ ಸಾಧ್ಯತೆ ಇದೆ. ಮತಎಣಿಕೆಯ ಸಮಯದಲ್ಲಿ ಎಎಪಿ ಪಕ್ಷ ನಿಚ್ಚಳ ಬಹುಮತ ಪಡೆಯುವ ಲಕ್ಷಣಗಳು ಕಂಡಾಗಲೇ ಪ್ರಧಾನಿ ನರೇಂದ್ರ ಮೋದಿ ಅರವಿಂದ್ ಕೇಜ್ರಿವಾಲ್ ಅವರಿಗೆ ಕರೆ ಮಾಡಿ ಅಭಿನಂದಿಸಿದ್ದರು ಅಲ್ಲದೆ "ಟೀ" ಗೆ ಆಹ್ವಾನಿದ್ದರು.

ರಾಮಲೀಲ ಮೈದಾನದಲ್ಲಿ ಫೆಬ್ರವರಿ ೧೪ ರಂದು ಶನಿವಾರ ನಡೆಯಲಿರುವ ಪ್ರಮಾಣ ವಚನ ಸಮಾರಂಭಕ್ಕೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸುತ್ತೇವೆ ಎಂದು ಎಎಪಿ ಪಕ್ಷದ ವಕ್ತಾರ ಆಶಿಸ್ ಕೈತಾನ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com