ಪೋಸ್ಟ್ ಮಾರ್ಟಮ್ : 'ಹೊರಗಿನ' ಬೇಡಿ ಬಿಟ್ಟುಕೊಟ್ಟಿದ್ದು ಬಿಜೆಪಿಯ ಅತಿ ಸುರಕ್ಷಿತ ಸ್ಥಾನ

ಕೃಷ್ಣನಗರ ಬಿಜೆಪಿ ಪಕ್ಷದ ಅತಿ ಸುರಕ್ಷಿತ ಸ್ಥಾನ ಎಂದೇ ಹೇಳಲಾಗುತ್ತದೆ. ಮಾರಾಟಗಾರರ ಮತ್ತು ಮಧ್ಯಮವರ್ಗದ ವೃತ್ತಿಪರರು ಹೆಚ್ಚಿರುವ
ಕಿರಣ್ ಬೇಡಿ
ಕಿರಣ್ ಬೇಡಿ

ನವದೆಹಲಿ: ಕೃಷ್ಣನಗರ ಬಿಜೆಪಿ ಪಕ್ಷದ ಅತಿ ಸುರಕ್ಷಿತ ಸ್ಥಾನ ಎಂದೇ ಹೇಳಲಾಗುತ್ತದೆ. ಮಾರಾಟಗಾರರ ಮತ್ತು ಮಧ್ಯಮವರ್ಗದ ವೃತ್ತಿಪರರು ಹೆಚ್ಚಿರುವ ಈ ಕ್ಷೇತ್ರದಲ್ಲಿ ಈ ಬಾರಿ ಎಎಪಿ ಸುನಾಮಿಗೆ ಬಿಜೆಪಿ ಕೊಚ್ಚಿ ಹೋಗಿದೆ.

ಮತ ಎಣಿಕೆ ಸಮಯದಲ್ಲಿ ಬಿಜೆಪಿ ಅಭ್ಯರ್ಥಿ ಕಿರಣ್ ಬೇಡಿ ಅದೃಷ್ಟ 'ತೆರೆಯಾಟ'ವಾಡುತ್ತಿತ್ತು. ಒಂದು ಸಮಯದಲ್ಲಿ ಅವರು ಮೂಂಚೂಣಿಯಲ್ಲಿದ್ದರು ಕೂಡ, ಕೊನೆಗೆ ೨೨೭೭ ಮತಗಳ ಅಂತರದಿಂದ ಸೋಲು ಕಂಡರು. ೨೦೧೩ ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಹರ್ಷವರ್ಧನ್ ಈ ಕ್ಷೇತ್ರದಲ್ಲಿ ೪೬೦೦೦ ಮತಗಳ ಅಂತರದಿಂದ ಗೆದ್ದಿದ್ದರು.

ಮೂರು ದಿನಗಳ ಹಿಂದೆ ಚಟುವಟಿಕೆಗಳ ಗೂಡಾಗಿದ್ದ ಚಂದ್ರನಗರದ ಬಿಜೆಪಿ ಕಛೇರಿಗೆ ನೆನ್ನೆ ಬೀಗ ಜಡಿಯಲಾಗಿತ್ತು. "ಡಾಕ್ಟರ್ ಸಾಹೇಬರು (ಕೇಂದ್ರ ಸಚಿವ ಹರ್ಷವರ್ಧನ್) ಸ್ಪರ್ಧಿಸಿದ್ದರೆ ಖಂಡಿತಾ ಗೆಲ್ಲುತ್ತಿದ್ದರು. ಅಭ್ಯರ್ಥಿಗಳನ್ನು ಬಿಡಿ, ಕಾರ್ಯಕರ್ತರನ್ನು ಕೂಡ ಹೊರಗಿನಿಂದ ಕರೆತರಲಾಗಿತ್ತು. ಈ ಕ್ಷೇತ್ರದ ಬಗ್ಗೆ ಅವರಿಗೆ ಕಿಂಚಿತ್ತೂ ತಿಳಿದಿರಲಿಲ್ಲ" ಎನ್ನುತ್ತಾರೆ ೪೧ ವರ್ಷದ ಮೊಬೈಲ್ ಫೋನುಗಳ ಅಂಗಡಿ ಮಾಲೀಕ ಗಣೇಶ್ ಗುಪ್ತ. ಕಳೆದ ೨೦ ವರ್ಷಗಳಿಂದ ಬಿಜೆಪಿ ಪಕ್ಷಕ್ಕೆ ಮತ ನೀಡಿದ್ದ ಗಣೇಶ್ ಈ ಬಾರಿ ತಮ್ಮ ನಿಷ್ಠೆಯನ್ನು ಬದಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com