ತೀಸ್ತಾ ಸೆತಲ್ವಾಡ್ ಬಂಧನಕ್ಕೆ ಸುಪ್ರೀಮ್ ಕೋರ್ಟ್ ತಾತ್ಕಾಲಿಕ ತಡೆ

ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆತಲ್ವಾಡ್ ಅವರನ್ನು ಬಂಧಿಸದಂತೆ ಗುಜರಾತ್ ಪೊಲೀಸರಿಗೆ ಸುಪ್ರೀಮ್ ಕೋರ್ಟ್ ಗುರುವಾರ ತಾತ್ಕಾಲಿಕ ತಡೆ ನೀಡಿದೆ.
ತೀಸ್ತಾ ಸೆತಲ್ವಾಡ್
ತೀಸ್ತಾ ಸೆತಲ್ವಾಡ್

ನವದೆಹಲಿ: ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆತಲ್ವಾಡ್ ಅವರನ್ನು ಬಂಧಿಸದಂತೆ ಗುಜರಾತ್ ಪೊಲೀಸರಿಗೆ ಸುಪ್ರೀಮ್ ಕೋರ್ಟ್ ಗುರುವಾರ ತಾತ್ಕಾಲಿಕ ತಡೆ ನೀಡಿದೆ. ೨೦೦೨ ಗುಜರಾತ್ ಗಲಭೆಯ ಸಂಸ್ತ್ರಸ್ತರ ಸಂಗ್ರಹಾಲಯಕ್ಕೆ ಮೀಸಲಿಟ್ಟಿದ್ದ ಹಣದ ದುರುಪಯೋಗ ಪ್ರಕರಣದಲ್ಲಿ ಇದಕ್ಕೂ ಮುಂಚೆ ನಿರೀಕ್ಷಣಾ ಜಾಮೀನನ್ನು ಹೈಕೋರ್ಟ್ ನಿರಾಕರಿಸಿತ್ತು.

ಈ ಹಿನ್ನಲೆಯಲ್ಲಿ ತೀಸ್ತಾ ಅವರ ಮುಂಬೈ ಮನೆಗೆ ಪೋಲಿಸರು ಬಂಧನಕ್ಕೆ ತೆರಳಿದ್ದರು.

ತೀಸ್ತಾ ಮತ್ತು ಅವರ ಪತಿ ಜಾವೇದ್ ಆನಂದ್ ಅವರ ಬಂಧನದ ಈ ತಾಕ್ಲಾಲಿಕ ತಡೆ ಶುಕ್ರವಾರದವರೆಗೆ ಮುಂದುವರೆಯಲಿದ್ದು, ಸುಪ್ರೀಮ್ ಕೋರ್ಟ್ ಶುಕ್ರವಾರ ವಿಚಾರಣೆ ಕೈಗೆತ್ತುಕೊಳ್ಳಲಿದೆ ಎಂದಿದ್ದಾರೆ ಮುಖ್ಯ ನ್ಯಾಯಾಧೀಶ ಎಚ್ ಎಲ್ ದತ್ತು.

ತೀಸ್ತಾ ಪರವಾಗಿ ಮಾಜಿ ಕೇಂದ್ರ ಮಂತ್ರಿ ಕಪಿಲ್ ಸಿಬಲ್ ಮತ್ತು ವಕೀಲೆ ಅರ್ಪಣಾ ಭಟ್ ಅವರು ಇದು "ಅಸಾಮಾನ್ಯ ಪರಿಸ್ಥಿತಿ", ಆದುದರಿಂದ ಕೂಡಲೆ ವಿಚಾರಣೆ ಮಾಡಬೇಕೆಂದು ನ್ಯಾಯಾಧೀಶರಾದ ಎಚ್ ಎಲ್ ದತ್ತ, ಎ ಕೆ ಸಿಕ್ರಿ ಮತ್ತು ಅರುಣ್ ಮಿಶ್ರಾ ಇವರುಗಳನ್ನೊಳಗೊಂಡ ನ್ಯಾಯ ಪೀಠವನ್ನು ಮನವಿ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com