ತಿರುವನಂತಪುರಮ್ ಪದ್ಮನಾಭಸ್ವಾಮಿ ದೇವಾಲಯದಿಂದ ೨೬೬ಕೆಜಿ ಚಿನ್ನ ನಾಪತ್ತೆ

ಶ್ರೀ ಪದ್ಮನಾಭಾಸ್ವಾಮಿ ದೇವಾಲಯದಿಂದ ೨೬೬ಕೆಜಿ ಚಿನ್ನ ನಾಪತ್ತೆಯಾಗಿದೆ ಎಂದು ಕೇಂದ್ರದ ಮಾಜಿ ಆಡಿಟರ್ ಜನರಲ್ ವಿನೋದ್ ರಾಯ್
ಶ್ರೀ ಪದ್ಮನಾಭಾಸ್ವಾಮಿ ದೇವಾಲಯ
ಶ್ರೀ ಪದ್ಮನಾಭಾಸ್ವಾಮಿ ದೇವಾಲಯ

ತಿರುವನಂತಪುರಮ್: ಶ್ರೀ ಪದ್ಮನಾಭಾಸ್ವಾಮಿ ದೇವಾಲಯದಿಂದ ೨೬೬ಕೆಜಿ ಚಿನ್ನ ನಾಪತ್ತೆಯಾಗಿದೆ ಎಂದು ಕೇಂದ್ರದ ಮಾಜಿ ಆಡಿಟರ್ ಜನರಲ್ ವಿನೋದ್ ರಾಯ್ ಸುಪ್ರೀಮ್ ಕೋರ್ಟ್ ಗೆ ತಿಳಿಸಿದ್ದಾರೆ.

ದೇವಾಲಯದ ಆಸ್ತಿ-ಪಾಸ್ತಿಯನ್ನು ಆಡಿಟ್ ಮಾಡಲು ಸುಪ್ರೀಮ್ ಕೋರ್ಟ್ ರಾಯ್ ಅವರನ್ನು ನೇಮಿಸಿತ್ತು. ಈಗ ರಾಯ್ ಅವರು ಸಲ್ಲಿಸಿರುವ ೧೮೦೦ ಪುಟದ ವರದಿಯಲ್ಲಿ ಈ ವಿಷಯ ಬಹಿರಂಗಪಡಿಸಿದ್ದಾರೆ.

ದೇವಸ್ಥಾನಕ್ಕೆ ಚಿನ್ನದ ಲೇಪನದ ಕೆಲಸದ ಸಲುವಾಗಿ ದೇವಾಲಯದ ದಾಸ್ತಾನಿನಿಂದ ೮೯೩.೪೪ ಕೆಜಿ ಚಿನ್ನವನ್ನು "ಕರಗಿಸಲು ಮತ್ತು ಶುದ್ಧೀಕರಿಸಲು" ಖಾಸಗಿ ಗುತ್ತಿಗೆದಾರನಿಗೆ ನೀಡಲಾಗಿತ್ತು.  ಆದರೆ ಹಿಂದಿರುಗಿದ್ದು ಕೆಲವ ೬೩೭ ಕೆಜಿ ಎನ್ನುತ್ತಾರೆ ದೇವಾಲಯದ ಅಧಿಕಾರಿಗಳು.

ಈ ಇಡೀ ಪ್ರಕರಣದಲ್ಲಿ ಏನೋ ತಪ್ಪು ನಡೆದಿದ್ದು, ಖಾಸಗಿ ಗುತ್ತಿಗೆದಾರನಿಗೆ ಚಿನ್ನ ನೀಡುವಾಗ ಅದರ ಗುಣಮಟ್ಟ ಪರೀಕ್ಷಿಸದೆ ಕೊಟ್ಟದ್ದೇಕೆ ಎಂದು ಪ್ರಶ್ನಿಸುತ್ತದೆ ವರದಿ.

ಆಸ್ತಿಪತ್ರದ ಪೂರಕವಾದ ದಾಖಲೆಗಳನ್ನು ಒದಗಿಸದಿದ್ದಕ್ಕೆ, ದೇವಾಲಯದ ಆಡಳಿತ ಮಂಡಳಿಯಾದ ಟ್ರ್ಯಾವಂಕೋರ್ ರಾಜವಂಶವನ್ನು ಈ ವರದಿ ದೂರಿದೆ.

ಹಣಕಾಸಿನ ದಾಖಲೆಗಳು ತಿರುಚಲಾಗಿದೆ ಹಾಗೂ ೨೦೦೮-೨೦೦೯ ರಲ್ಲಿ ದೇವಾಲಯ ಪಡೆದ ಚಿನ್ನ ಮತ್ತು ಬೆಳ್ಳಿಯ ದಾನದ ವಿವರವನ್ನು ದಾಖಲಿಸಿಲ್ಲ ಎಂದು ದೂರಿದೆ ವರದಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com