ಕೋಪನ್ ಹೇಗನ್ ಗುಂಡಿನ ದಾಳಿ, ೨ ಸಾವು, ೫ ಮಂದಿಗೆ ಗಾಯ
ಕೋಪನ್ ಹೇಗನ್: ಪ್ರವಾದಿ ಮಹಮದ್ ಅವರನ್ನು ಚಿತ್ರಿಸಿದ್ದ ಕಲಾವಿದ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ನಡೆದ ಗುಂಡಿನ ದಾಳಿ ಮತ್ತು ಕೆಲವೇ ಘಂಟೆಗಳ ನಂತರ ನಡೆದ ಯಾಹೂದ್ಯರ ಪೂಜ್ಯಮಂದಿರದ ಮೇಲೆ ನಡೆದಿರುವ ಮತ್ತೊಂದು ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, ಐದು ಜನ ಪೊಲೀಸರು ಗಾಯಗೊಂಡಿದ್ದಾರೆ. ಪ್ಯಾರಿಸ್ ನ ಚಾರ್ಲಿ ಹೆಬ್ಡೋ ಮೇಲೆ ನಡೆದ ದಾಳಿಯ ನಂತರ ಕೆಲವೇ ದಿನಗಳಲ್ಲಿ ನಡೆದಿರುವ ಈ ದಾಳಿ ಕೋಪನ್ ಹೇಗನ್ ನಲ್ಲಿ ಭಯಭೀತಿ ಸೃಷ್ಟಿಸಿದೆ.
ಶನಿವಾರ ಸಂಜೆ ಈ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಯಹೂದ್ಯರ ದೇವಾಲಯದ ಮೇಲೆ ನಡೆದಿರುವ ದಾಳಿಗಳಿಗೆ ಸಂಬಂಧ ಇದೆಯೇ ಎಂದು ತಿಳಿದು ಬಂದಿಲ್ಲ ಎನ್ನುತ್ತಾರೆ ಪೊಲೀಸರು. ಎರಡೂ ದಾಳಿಗಳಲ್ಲಿ ದಾಳಿ ಮಾಡಿದವ ತಪ್ಪಿಸಿಕೊಂಡಿದ್ದಾನೆ.
ಈ ಭಯೋತ್ಪಾದಕ ದಾಳಿಯನ್ನು ಯೂರೋಪಿನ ಹಲವು ಮುಖಂಡರು ಖಂಡಿಸಿದ್ದಾರೆ. ಡೆನ್ಮಾರ್ಕ್ ಇಡೀ ಕಟ್ಟೆಚ್ಚರಿಕೆ ಘೋಷಿಸಿದ್ದು, ಭಯೋತ್ಪಾದಕರ ಶೋಧನೆ ನಡೆಯುತ್ತಿದೆ. "ಇದು ರಾಜಕೀಯ ದಾಳಿ ಆದುದರಿಂದ ಭಯೋತ್ಪಾದನೆ" ಎಂದಿದ್ದಾರೆ ಡೆನ್ಮಾರ್ಕ್ ಪ್ರಧಾನಿ ಹೆಲ್ಲೆ ಥಾರ್ನಿಂಗ್ ಸ್ಮಿಡ್ತ್.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ