ದೂರದರ್ಶನದಲ್ಲಿ ವಿಶ್ವಕಪ್ ನೇರಪ್ರಸಾರ ಮುಂದುವರಿಕೆ

ಸರ್ಕಾರ ಒಡೆತನದ ದೂರದರ್ಶನದಲ್ಲಿ ಮುಂದೆಯೂ ಭಾರತ ಆಡುವ ವಿಶ್ವಕಪ್ ಕ್ರಿಕೆಟ್ ಪಂದ್ಯಗಳ ಪ್ರಸಾರವನ್ನು ವೀಕ್ಷಕರು ಸವಿಯಬಹುದು.
ದೂರದರ್ಶನ ಲೋಗೊ
ದೂರದರ್ಶನ ಲೋಗೊ

ನವದೆಹಲಿ: ಸರ್ಕಾರ ಒಡೆತನದ ದೂರದರ್ಶನದಲ್ಲಿ ಮುಂದೆಯೂ ಭಾರತ ಆಡುವ ವಿಶ್ವಕಪ್ ಕ್ರಿಕೆಟ್ ಪಂದ್ಯಗಳ ಪ್ರಸಾರವನ್ನು ವೀಕ್ಷಕರು ಸವಿಯಬಹುದು. ಈ ವಾಹಿನಿಯಲ್ಲಿ ಭಾರತ ಆಡುವ ಪಂದ್ಯಗಳನ್ನು ಪ್ರಸಾರ ಮಾಡಲು ಸುಪ್ರೀಮ್ ಕೋರ್ಟ್ ಮಂಗಳವಾರ ತನ್ನ ಮಧ್ಯಂತರ ಆದೇಶವನ್ನು ವಿಸ್ತರಿಸಿದೆ.

ತಾವು ನೀಡುವ ಕ್ರಿಕೆಟ್ ಪಂದ್ಯಗಳ ನೇರ ಪ್ರಸಾರ ದೃಶ್ಯಾವಳಿಗಳನ್ನು ಪ್ರಸಾರ ಮಾಡಲು ಪ್ರತ್ಯೇಕ ವಾಹಿನಿ ಪ್ರಾರಂಭಿಸುವಂತೆ ಸ್ಟಾರ್ ಟಿವಿ ನೀಡಿರುವ ಸಲಹೆಗೆ ಪ್ರತಿಕ್ರಿಯಿಸುವಂತೆ ಕೂಡ ದೂರದರ್ಶನಕ್ಕೆ ಕೋರ್ಟ್ ಸೂಚಿಸಿದೆ.

ಇದಕ್ಕೂ ಮುಂಚೆ ದೆಹಲಿ ಹೈಕೋರ್ಟ್ ಸ್ಟಾರ್ ಟಿವಿ ನೀಡುವ ಕ್ರಿಕೆಟ್ ಪಂದ್ಯಗಳ ನೇರ ದೃಶ್ಯಾವಳಿಗಳನ್ನು ದೂರದರ್ಶನ ಕೇಬಲ್ ಆಪರೇಟರ್ ಗಳ ಜೊತೆ ಹಂಚಿಕೊಳ್ಳದಂತೆ ಫೆಬ್ರವರಿ ೪ ರಂದು ನೀಡಿದ್ದ ಆದೇಶವನ್ನು ಸುಪ್ರೀಮ್ ಕೋರ್ಟ್ ಫೆಬ್ರವರಿ ೧೦ ಕ್ಕೆ ತಡೆದಿತ್ತು.

ನ್ಯಾಯಮೂರ್ತಿ ರಂಗನ್ ಗೊಗೊಯ್ ಒಳಗೊಂಡ ವಿಚಾರಣೆ ನಡೆಸುತ್ತಿರುವ ನ್ಯಾಯಪೀಠ ಗುರುವಾರಕ್ಕೆ ವಿಚಾರಣೆಯನ್ನು ಮುಂದೂಡಿದ್ದು, ದೂರದರ್ಶನ ಪಂದ್ಯಗಳನ್ನು ಪ್ರಸಾರ ಮಾಡುವುದರಿಂದ ತನಗಾಗುತ್ತಿರುವ ಜಾಹಿರಾತು ನಷ್ಟದ ವಿವರಗಳನ್ನು ನೀಡಲು ಸ್ಟಾರ್ ಟಿ ವಿ ವಾಹಿನಿಗೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com