
ಕೋಲ್ಕತ್ತ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ನಿಘೂಡವಾಗಿ ಕಾಣೆಯಾದ ಮಾಹಿಗಳನ್ನೊಳಗೊಂಡ ರಹಸ್ಯ ಕಡತಗಳನ್ನು ಬಹಿರಂಗಪಡಿಸುವ ಅಧಿಕಾರ ಪ್ರಧಾನಮಂತ್ರಿಗಳಿಗೆ ಇಲ್ಲ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಯೊಂದಕ್ಕೆ ಪ್ರಧಾನ ಮಂತ್ರಿ ಕಾರ್ಯಾಲಯ ಉತ್ತರಿಸಿದೆ.
"ಈ ಕಡತಗಳನ್ನು ಬಹಿರಂಗಗೊಳಿಸಿ, ರಾಷ್ಟ್ರೀಯ ಪತ್ರಾಗಾರಗಳಿಗೆ ಸೇರಿಸುವ ವಿಷೇಶ ಅಧಿಕಾರ ಪ್ರಧಾನ ಮಂತ್ರಿಯವರಿಗೆ ಇದೆಯೇ" ಎಂದು ಪ್ರಶ್ನಿಸಿ ತಿರುವನಂತಪುರ ಮೂಲದ ಐಟಿ ತಂತ್ರಜ್ಞ ಶ್ರೀಜಿತ್ ಪಣಿಕ್ಕರ್ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು.
ಕಳೆದ ವರ್ಷ ದೆಹಲಿ ಮೂಲದ ಆರ್ ಟಿ ಐ ಕಾರ್ಯಕರ್ತ ಸುಭಾಷ್ ಅಗರವಾಲ್, ನೇತಾಜಿ ಸಂಬಂಧಪಟ್ಟಂತೆ ದಾಖಲೆಗಳನ್ನು ಬಹಿರಂಗಪಡಿಸುವಂತೆ ಅರ್ಜಿ ಸಲ್ಲಿಸಿದ್ದರು. "ಈ ದಾಖಲೆಗಳನ್ನು ಬಹಿರಂಗಪಡಿಸಿದರೆ ಹಲವು ರಾಷ್ಟ್ರಗಳ ಜೊತೆಗಿನ ವಿದೇಶ ಸಂಬಂಧ ಹದಗೆಡುತ್ತದೆ" ಎಂದು ಹೇಳಿ ಪ್ರಧಾನ ಮಂತ್ರಿ ಕಾರ್ಯಾಲಯ ಮನವಿ ತಿರಸ್ಕರಿಸಿತ್ತು.
ಬ್ರಿಟಿಶ್ ಆಳ್ವಿಕೆ ಸಮಯದಲ್ಲಿ ಕೊಲ್ಕಾತ್ತಾದಲ್ಲಿ ಗೃಹಬಂಧನದಲ್ಲಿದ್ದ ನೇತಾಜಿ ತಪ್ಪಿಸಿಕೊಂಡು ಜಪಾನ್ ಸಹಾಯದಿಂದ ಇಂಡಿಯನ್ ನ್ಯಾಷನಲ್ ಆರ್ಮಿ ಸ್ಥಾಪಿಸಿದ್ದರು. ೧೯೪೫ ರಲ್ಲಿ ನೇತಾಜಿ ಕಾಣೆಯಾದ ಮೇಲೆ ಅವರ ಇರುವಿಕೆಯ ಬಗ್ಗೆ ತಿಳಿದದ್ದು ಅತ್ಯಲ್ಪ. ನೇತಾಜಿ ಆಗಸ್ಟ್ ೧೮ ೧೯೪೫ ರಲ್ಲಿ ತೈವಾನ್ ನ ತೈಹೋಕು ವಿಮಾನ ನಿಲ್ದಾಣದಲ್ಲಿ ವಿಮಾನ ಅಪಘಾತದಿಂದ ಸಾವನ್ನಪ್ಪಿದರು ಎಂದು ಹೇಳಲಾಗುತ್ತಿತ್ತು. ಆದರೆ ಇದರ ತನಿಖೆಗೆ ನೇಮಿಸಿದ್ದ ಮುಖರ್ಜು ಕಮಿಷನ್ ಈ ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸಿತ್ತು.
Advertisement