ವಿಮಾನ ತಪ್ಪಿಸಿಕೊಂಡದ್ದಕ್ಕೆ ಹುಸಿ ಬಾಂಬ್ ಕರೆ ಮಾಡಿದ ಈಜು ತರಬೇತುದಾರ

ಹುಸಿ ಬಾಂಬ್ ಕರೆಯಿಂದ, ರಾಂಚಿಯಿಂದ ದೆಹಲಿಗೆ ತೆರಳಬೇಕಿದ್ದ ವಿಮಾನ ತಡವಾಗಿದ್ದಲ್ಲದೆ,
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಂಚಿ: ಹುಸಿ ಬಾಂಬ್ ಕರೆಯಿಂದ, ರಾಂಚಿಯಿಂದ ದೆಹಲಿಗೆ ತೆರಳಬೇಕಿದ್ದ ವಿಮಾನ ತಡವಾಗಿದ್ದಲ್ಲದೆ, ಭದ್ರತಾ ಪಡೆಗಳಿಗೆ ತಲೆನೋವಾದ ಘಟನೆ ಸೋಮವಾರ ನಡೆದಿದೆ.

ರಾಂಚಿಯಿಂದ ದೆಹಲಿಗೆ ತೆರಳಬೇಕಿದ್ದ ವಿಮಾನಕ್ಕೆ ಸರಿಯಾದ ಸಮಯಕ್ಕೆ ಬರದೆ ತಪ್ಪಿ ಹೋದದ್ದಕ್ಕೆ, ಪ್ರಯಾಣಿಕನೊಬ್ಬ ಈ ಹುಸಿ ಕರೆ ಮಾಡಿದ್ದು ಎಂದು ತಿಳಿದುಬಂದ ನಂತರ ವಿಮಾನ ನಿಲ್ದಾಣದಿಂದ ಬಂಧನಕ್ಕೊಳಗಾಗಿದ್ದಾನೆ.

ಮೂಲಗಳ ಪ್ರಕಾರ ಈ ಪ್ರಯಾಣಿಕ ಈಜು ತರಬೇತುದಾರ. ತಡವಾಗಿ ಬಂದು ಪ್ರಯಾಣ ತಪ್ಪಿಸಿಕೊಂಡದ್ದರಿಂದ ಮುಂಬೈನ ಕಾಲ್ ಸೆಂಟರ್ ಗೆ ಕರೆ ಮಾಡಿ ತಾನು ತೆರಳಬೇಕಿದ್ದ ವಿಮಾನದಲ್ಲಿ ಬಾಂಬ್ ಇದೆ ಎಂದು ಸಂಜೆ ೩ :೦೫ ಘಂಟೆಗೆ ತಿಳಿಸಿದ್ದಾನೆ.

ಆಗಲೇ ಮೇಲಕ್ಕೆ ಹಾರಿದ್ದ ವಿಮಾನವನ್ನು ರಾಂಚಿ ವಿಮಾನ ನಿಲ್ದಾಣಕ್ಕೆ ಇಳಿಸಿ ಪ್ರತ್ಯೇಕಗೊಳಿಸಿದ್ದಾರೆ. ಕೂಡಲೆ ಕಾರ್ಯಾಚರಣೆಗಿಳಿದ ಭದ್ರತಾ ಸಿಬ್ಬಂದಿ, ತಪಾಸಣೆಯ ನಂತರ ಇದು ಹುಸಿ ಕರೆ ಎಂದು ಧೃಢೀಕರಿಸಿ, ಕರೆಗಳ ತನಿಖೆ ನಡೆಸಿ ಪ್ರಯಾಣಿಕನನ್ನು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com