
ಲಾಸ್ ಏಂಜಲೀಸ್: ವಾಶಿಂಗ್ಟನ್ ಮತ್ತು ಕೊಲೊರಾಡೊ ರಾಜ್ಯಗಳ ಹಾದಿಯಲ್ಲೇ ಹೆಜ್ಜೆ ಇಟ್ಟಿರುವ ಅಮೆರಿಕಾದ ಅಲಾಸ್ಕಾ ರಾಜ್ಯ ಉಲ್ಲಾಸದ ಸೇವನೆಗೆ ಗಾಂಜಾವನ್ನು (ಮಾರ್ವಾನ) ಕಾನೂನು ಬದ್ಧ ಮಾಡಿದೆ.
ಇದರ ಸೇವನೆ ಅಮೇರಿಕಾದ ಫೆಡರಲ್ ಕಾನೂನಿನಲ್ಲಿ ಇನ್ನೂ ಕಾನೂನು ಬಾಹಿರವಾಗಿದ್ದರೂ, ಅಲಾಸ್ಕಾ ರಾಜ್ಯದ ಕಾನೂನಿನಲ್ಲಿ ತಿದ್ದುಪಡಿ ತರಲಾಗುವುದು ಎಂದು ತಿಳಿದು ಬಂದಿದೆ.
ಈ ತಿದ್ದುಪಡಿಯ ನಂತರ ಈಗ ಅಲಾಸ್ಕಾದ ೨೧ ವರ್ಷ ಮೇಲ್ಪಟ್ಟವರು ಕಾನೂನು ಬದ್ಧವಾಗಿ ೨೮ ಗ್ರಾಂ ಗಾಂಜಾವನ್ನು ಇಟ್ಟುಕೊಳ್ಳಬಹುದು, ಸೇವಿಸಬಹುದು ಹಾಗೂ ೬ ಗಾಂಜಾ ಗಿಡಗಳನ್ನು ಬೆಳೆಯಬಹುದಾಗಿದೆ.
ಈ ತಿದ್ದುಪಡಿಗೆ ನಾಗರಿಕರ ಮತದಾನ ನಡೆದಿತ್ತು. ನವೆಂಬರ್ ನಲ್ಲಿ ಇದರ ಪರವಾಗಿ ಹೆಚ್ಚಿನ ಮತ ಬಿದ್ದಿದ್ದು, ಜುಲೈ ೧ ರಿಂದ ಹೊಸ ಕಾನೂನು ಜಾರಿಗೆ ಬರಲಿದೆ ಎನ್ನಲಾಗಿದೆ.
Advertisement