
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅತಿ ಪ್ರಿಯವಾದ ಗಂಗಾ ಶುದ್ಧೀಕರಣ ಯೋಜನೆಯ ಪ್ರಗತಿಯ ನಿಧಾನಗತಿಯ ಬಗ್ಗೆ ಅಸಮಧಾನ ತೋರಿಸಿದ್ದು, ನ್ಯಾಷನಲ್ ಮಿಶನ್ ಆನ್ ಕ್ಲೀನ್ ಗಂಗಾ (ಎನ್ ಎಂ ಸಿ ಜಿ) ನಿರ್ದೇಶಕ ಐ ಎ ಎಸ್ ಅಧಿಕಾರಿ ಆರ್ ಆರ್ ಮಿಶ್ರಾ ಅವರನ್ನು ವಜಾ ಮಾಡಿ ಟಿ ವಿ ಎಸ್ ಎನ್ ಪ್ರಸಾದ್ ಅವರನ್ನು ನೇಮಿಸಿದ್ದಾರೆ.
ಕಳೆದ ಎಂಟು ತಿಂಗಳುಗಳಿಂದ ಎನ್ ಎಂ ಸಿ ಜಿ ಯೋಜನೆಯಲ್ಲಿ ಯಾವುದೇ ಪ್ರಗತಿ ಕಂಡಿಲ್ಲವಾದ್ದರಿಂದ ಅಸಮಧಾನಗೊಂಡಿದ್ದ ಸರ್ಕಾರ ಹರ್ಯಾಣದಲ್ಲಿ ನೀರಾವರಿ ಸಂಪನ್ಮೂಲ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿ ಆಗಿದ್ದ ಪ್ರಸಾದ್ ಅವರಿಗೆ ಈಗ ಈ ಕೆಲಸ ವಹಿಸಲಾಗಿದೆ. ಮಿಶ್ರಾ ಅವರನ್ನು ಆಶ್ರಯ ಮತ್ತು ಬಡತನ ನಿರ್ಮೂಲನ ಇಲಾಖೆಗೆ ಜಂಟಿ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ.
೨೦೧೪ ರಲ್ಲಿ ಅಧಿಕಾರಕ್ಕೆ ಬಂದ ನಂತರ ಎನ್ ಡಿ ಎ ಸರ್ಕಾರ ಗಂಗಾ ನದಿಯ ಭವ್ಯತೆಯನ್ನು ಮರುಕಳಿಸಲು ಈ ಶುದ್ಧೀಕರಣ ಯೋಜನೆಯನ್ನು ಪ್ರಾರಂಭಿಸಿತ್ತು. ಈ ಯೋಜನೆಯ ಪ್ರಗತಿಯನ್ನು ಪರಿವೀಕ್ಷಿಸಲು ಕಳೆದ ತಿಂಗಳು ಪ್ರಧಾನಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಚರ್ಚೆ ನಡೆದಿತ್ತು. ಈ ಸಭೆಯಲ್ಲಿ ಪ್ರಧಾನಿ ಸಮಯ ಮಿತಿಯಲ್ಲಿ ಗಂಗಾ ಮಾಲಿನ್ಯವನ್ನು ಸ್ವಚ್ಛ ಮಾಡುವಂತೆ ತಾಕೀತು ಮಾಡಿದ್ದರು.
Advertisement