ಅಧಿಕಾರಕ್ಕೆ ಹಿಂದಿರುಗಲು ದೇವರ ಮೊರೆ ಹೋದ ರಾಜಪಕ್ಷ

ಶ್ರೀಲಂಕಾ ಚುನಾವಣೆಯಲ್ಲಿ ಸೋಲು ಕಂಡ ಮಾಜಿ ರಾಷ್ಟ್ರಾಧ್ಯಕ್ಷ ರಾಜಪಕ್ಷ ಜೂನ್ ನಲ್ಲಿ ಬರಲಿರುವ ಸಂಸತ್ ಚುನಾವಣೆಗಳಲ್ಲಿ ಅಧಿಕಾರಕ್ಕೆ ಹಿಂದಿರುಗಲು
ರಾಜಪಕ್ಷ
ರಾಜಪಕ್ಷ

ಕೊಲಂಬೊ: ಶ್ರೀಲಂಕಾ ಚುನಾವಣೆಯಲ್ಲಿ ಸೋಲು ಕಂಡ ಮಾಜಿ ರಾಷ್ಟ್ರಾಧ್ಯಕ್ಷ ರಾಜಪಕ್ಷ ಜೂನ್ ನಲ್ಲಿ ಬರಲಿರುವ ಸಂಸತ್ ಚುನಾವಣೆಗಳಲ್ಲಿ ಅಧಿಕಾರಕ್ಕೆ ಹಿಂದಿರುಗಲು ಅಲೌಖಿಕ ಹಾಗು ದೇವರ ಮೊರೆ ಹೋಗಿದ್ದಾರೆ.

ದಕ್ಷಿಣ ಲಂಕಾದ ಕಟಾರಗ್ರಾಮದ ಮುರುಗನ್ ದೇವಾಲಯದ ಚಿನ್ನದ ಲೇಪನದ ತ್ರಿಶೂಲಕ್ಕೆ ಸಾಂಪ್ರದಾಯಿಕ ಪೂಜೆ ನೆರವೇರಿಸಿದ್ದಾರೆ ರಾಜಪಕ್ಷ. ಮುರುಗನ್ ಅಥವಾ ಸ್ಕಂದ ಶ್ರೀಲಂಕಾದ ಯುದ್ಧ ದೇವರು.

ಕ್ರಿಸ್ತ ಪೂರ್ವ ೨ನೇ ಶತಮಾನದಲ್ಲಿ ಸಿಂಹಳ ರಾಜ ದುತುಗಮುನು ಯುದ್ಧಕ್ಕೆ ತೆರಳುವ ಮುಂಚೆ ಕತಾರಗ್ರಾಮದಲ್ಲಿ ಪೂಜೆ ನೆರವೇರಿಸಿತ್ತಿದ್ದ ಎಂಬ ಐತಿಹ್ಯದವನ್ನು ರಾಜಪಕ್ಷ ಅನುಸರಿಸುತ್ತಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಫೆಬ್ರವರಿ ೧೮ ರಂದು ರಾಜಪಕ್ಷ ಅವರ ಯುನೈಟೆಡ್ ಪೀಪಲ್ಸ್ ಫ್ರೀಡಮ್ ಅಲ್ಲಾಯೇನ್ಸ್ (ಯು ಪಿ ಎಫ್ ಎ) ಮೈತ್ರಿ ಪಕ್ಷಗಳು ನಡೆಸಿದ ರ್ಯಾಲಿಯಲ್ಲಿ ತಮಿಳು ಪ್ರತ್ಯೇಕವಾದಿಗಳು ಮತ್ತು ಪೂರ್ವ ದೇಶಗಳ ಹಿಡಿತದಿಂದ ಸಿಂಹಳೀಯರನ್ನು ಉಳಿಸಲು ತಮ್ಮನ್ನು ಅಧಿಕಾರಕ್ಕೆ ವಾಪಸ್ಸು ತರಬೇಕೆಂದು ಮನವಿ ಮಾಡಿದ್ದರು. ನಾವು ಸೋತಿದ್ದಲ್ಲ ಅದ್ದರೆ ಪಿತೂರಿಯಿಂದ ಮೋಸ ಹೋಗಿದ್ದು ಎಂದು ಕೂಡ ಅವರು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com