
ಅಗರ್ತಲಾ: ಈಗ ಗುಜರಾತ್ ಮೂಲದ ಉದ್ಯಮಿ ಗೌತಮ್ ಅದಾಮಿ ಅವರ ಆಸ್ತಿ ಒಂದು ವರ್ಷದಲ್ಲಿ ೨೫ ಸಾವಿರ ಕೋಟಿ ವೃದ್ಧಿ ಕಂಡಿರುವುದರಿಂದ ಬಿಜೆಪಿ ಆಳ್ವಿಕೆ ಸಮಯದಲ್ಲಿ ದೇಶಕ್ಕೆ 'ಅಚ್ಚೆ ದಿನ್' (ಒಳ್ಳೆಯ ದಿನಗಳು) ಬಂದಿವೆ ಎಂದು ಸಿಪಿಐ(ಎಂ) ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಬುಧವಾರ ಲೇವಡಿ ಮಾಡಿದ್ದಾರೆ.
"ತಮ್ಮ ೯ ತಿಂಗಳ ಆಳ್ವಿಕೆಯಲ್ಲಿ ನರೇಂದ್ರ ಮೋದಿ ಸರ್ಕಾರ, ಉದ್ಯಮಿಗಳು, ಹಣವಂತರು ಮತ್ತು ಕಾರ್ಪೋರೆಟ್ ವಲಯದ ಹಿತಾಸಕ್ತಿ ಕಾಯಲು ದಿನಂಪೂರ್ತಿ ಕೆಲಸ ಮಾಡಿದ್ದಾರೆ ಹಾಗು ರೈತರ, ಕಾರ್ಮಿಕರ ಮತ್ತು ಬಡ ಜನರ ವಿರುದ್ಧ ಕೆಲಸ ಮಾಡಿದ್ದಾರೆ" ಎಂದಿದ್ದಾರೆ ಕಾರಟ್.
ಸಿಪಿಐ(ಎಂ) ಪಕ್ಷದ ೨೧ ನೇ ರಾಜ್ಯ ಸಮಾವೇಶದ ೪ ದಿನಗಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಲ್ಲಿದ್ದಲು ಮತ್ತು ವಿಮಾ ಕ್ಷೇತ್ರವನ್ನು ವಿದೇಶಿಯರು ಮತ್ತು ಕಾರ್ಪೋರೆಟ್ ವಲಯವಕ್ಕೆ ತೆರೆದಿಡಲು ಸಂಸತ್ ಒಪ್ಪಿಗೆಯಿಲ್ಲದೆ ಪ್ರತ್ಯೇಕ ಕಾಯ್ದೆಗಳನ್ನು ಎನ್ ಡಿ ಎ ಸರ್ಕಾರ ಮಾಡಿದೆ ಎಂದು ಕೂಡ ಆರೋಪಿಸಿದರು.
Advertisement