
ಸೊರಬಯ: ಏರ್ ಏಷ್ಯಾ ವಿಮಾನ ಪತನದಲ್ಲಿ ಮೃತಪಟ್ಟವರನ್ನು ಹುಡುಕುತ್ತಿರುವ ತನಿಖಾ ದಳ ಇಲ್ಲಿಯವರೆಗೆ ೩೦ ಶವಗಳನ್ನು ಪತ್ತೆ ಹಚ್ಚಿದೆ ಅವುಗಳಲ್ಲಿ ಐದು ಶವಗಳು ಇನ್ನೂ ವಿಮಾನದ ಆಸನ ಪಟ್ಟಿಯಲ್ಲಿ ಬಂಧಿತವಾಗಿದ್ದವು ಎಂದು ಇಂಡೋನೇಷಿಯಾದ ನೌಕಾ ದಳದ ಅಧಿಕಾರಿ ತಿಳಿಸಿದ್ದಾರೆ.
ಇಂದು ಪತ್ತೆ ಹಚ್ಚಲಾದ ಶವಗಳನ್ನು ಇಂಡೋನೇಶಿಯಾಗೆ ಹಡಗಿನ ಮೂಲಕ ಕೊಂಡೊಯ್ಯಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ಭಾನುವಾರ ಇಂಡೋನೇಷಿಯಾದಿಂದ ಸಿಂಗಾಪುರಕ್ಕೆ ಹೊರಟಿದ್ದ ವಿಮಾನ ನಿಗೂಢ ರೀತಿಯಲ್ಲಿ ಕಾಣೆಯಾಗಿತ್ತು. ವಿಮಾನದಲ್ಲಿ ೧೬೨ ಜನ ಪ್ರಯಾಣಿಸುತ್ತಿದ್ದರು. ಹಲವಾರು ದಿನಗಳ ಶೋಧದ ನಂತರ ಅವಶೇಷಗಳು ಮತ್ತು ಶವಗಳು ಈಗ ಪತ್ತೆಯಾಗುತ್ತಿವೆ.
Advertisement