
ಆಗ್ರಾ: ಪ್ರತಿ ಭಾರತೀಯ ಯೋಧನ ಸಾವಿಗೆ ಭಾರತ ನಾಲ್ಕು ಪಾಕಿಸ್ತಾನಿಗಳನ್ನು ಕೊಲ್ಲಲಿದೆ ಎಂದಿರುವ ಕೇಂದ್ರದ ಆಹಾರ ಮತ್ತು ಸರಬರಾಜು ರಾಜ್ಯ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಮತ್ತೆ ವಿವಾದ ಸೃಷ್ಟಿಸಿದ್ದಾರೆ. ಹೊಸ ವರ್ಷದ ದಿನ ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಮಥುರದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕೇಳಿದ ಒಂದು ಪ್ರಶ್ನೆಗೆ ಉತ್ತರಿಸಿದ ಸಾದ್ವಿ ಹೀಗೆಂದಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಸರ್ಕಾರದ ಸಚಿವರಿಗೆ ಪ್ರಚೋದನಕಾರಿ ಭಾಷಣಗಳನ್ನು ಮಾಡದಂತೆ ಸೂಚನೆ ನೀಡಿದ್ದರೂ ಕೂಡ ಅದು ಸಚಿವರಿಗೆ ಪರಿಣಾಮಕಾರಿಯಾಗಿ ಮನವರಿಕೆಯಾದಂತಿಲ್ಲ.
ಭಾರತದಲ್ಲಿ ರಾಜಕೀಯ ಕಸವನ್ನೂ ಗುಡಿಸಿಹಾಕಬೇಕು ಎಂದು ಸಚಿವೆ ಕರೆ ಕೊಟ್ಟಿದ್ದಾರೆ.
ಈ ಹಿಂದೆ ಕೂಡ ಈ ಸಚಿವೆ ಅಸಂವಿಧಾನಕ ಭಾಷೆ ಬಳಸಿ, ಕೊನೆಗೆ ಲೋಕಸಭೆಯಲ್ಲಿ ಕ್ಷಮಾಪಣೆ ಕೋರಿದ್ದರು.
Advertisement